ಮಂಗಳವಾರ, ಜನವರಿ 25, 2022
28 °C

ಬಾಲಿವುಡ್ ನಟ ಹೃತಿಕ್ ರೋಷನ್ ಮಾಜಿ ಪತ್ನಿ ಸುಸಾನೆ ಖಾನ್‌ಗೆ ಓಮೈಕ್ರಾನ್ ದೃಢ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನಟ ಹೃತಿಕ್‌ ರೋಷನ್ ಅವರ ಮಾಜಿ ಪತ್ನಿ ಸುಸಾನೆ ಖಾನ್ ಅವರಿಗೆ ಕೊರೊನಾ ವೈರಸ್‌ನ ರೂಪಾಂತರ ತಳಿ ಓಮೈಕ್ರಾನ್ ದೃಢಪಟ್ಟಿದೆ. ಈ ಸುದ್ದಿಯನ್ನು ಸ್ವತಃ ಅವರೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಪ್ರತಿಯೊಬ್ಬರೂ ಸುರಕ್ಷಿತವಾಗಿರಲು ಮತ್ತು ತಮ್ಮ ಪ್ರೀತಿಪಾತ್ರರನ್ನು ನೋಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ಕಳೆದ ಎರಡು ವರ್ಷಗಳಿಂದ ಕೊರೊನಾ ವೈರಸ್‌ನಿಂದ ತಪ್ಪಿಸಿಕೊಂಡ ನಂತರ ಈಗ ಜ.10ರಂದು ಓಮೈಕ್ರಾನ್ ಸೋಂಕು ತಗುಲಿದೆ ಎಂದು ಸುಸೇನಾ ಖಾನ್ ಬಹಿರಂಗಪಡಿಸಿದ್ದಾರೆ.

'2 ವರ್ಷಗಳ ಕಾಲ ಕೋವಿಡ್-19 ಇಂದ ಪಾರಾದ ನಂತರ, 2022ರ 3ನೇ ವರ್ಷದಲ್ಲಿ ಮೊಂಡುತನದ ಓಮೈಕ್ರಾನ್ ರೂಪಾಂತರವು ಅಂತಿಮವಾಗಿ ನನ್ನ ಪ್ರತಿರಕ್ಷಣಾ ವ್ಯವಸ್ಥೆಯೊಳಗೆ ನುಸುಳಿದೆ. ಕಳೆದ ರಾತ್ರಿ ನನಗೆ ಓಮೈಕ್ರಾನ್ ಪಾಸಿಟಿವ್ ಆಗಿದೆ. ದಯವಿಟ್ಟು ಸುರಕ್ಷಿತವಾಗಿರಿ ಮತ್ತು ನಿಮ್ಮನ್ನು ಶ್ರದ್ಧೆಯಿಂದ ನೋಡಿಕೊಳ್ಳಿ. ಇದು ತುಂಬಾ ಸಾಂಕ್ರಾಮಿಕ ರೋಗವಾಗಿದೆ. #Willfightthis #omicronvariant #Covid2022ನಿಮ್ಮನ್ನುಸ್ವಾಗತಿಸುವುದಿಲ್ಲ' ಎಂದಿದ್ದಾರೆ.

ನೀಲಂ ಕೊಠಾರಿ, ಮರಿಯಾ ಗೊರೆಟ್ಟಿ, ಮತ್ತು ಆಕೆಯ ಸಹೋದರಿ ಫರಾ ಖಾನ್ ಅಲಿ ಸೇರಿದಂತೆ ಹಲವರು ಸುಸಾನೆ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.

ನಿನ್ನೆಯಷ್ಟೇ ಬಾಲಿವುಡ್‌ ನಟ ಹೃತಿಕ್‌ ರೋಷನ್ ಅವರ 48ನೇ ಹುಟ್ಟುಹಬ್ಬದ ಅಂಗವಾಗಿ ಸುಸಾನೆ ಅವರು ಇನ್‌ಸ್ಟಾಗ್ರಾಂನಲ್ಲಿ ಶುಭಕೋರಿದ್ದರು. ಅಲ್ಲದೆ, ಹೃತಿಕ್ ಮತ್ತು ಅವರ ಪುತ್ರರನ್ನು ಒಳಗೊಂಡ ವಿಡಿಯೊವನ್ನು ಸಹ ಹಂಚಿಕೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು