ಬೆಂಗಳೂರು: ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಅವರು ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ಉಬರ್ ಡ್ರೈವರ್ನಿಂದ ತಮಗಾದ ಕಹಿ ಅನುಭವವನ್ನು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ.
ಉಬರ್ ಸಪೋರ್ಟ್ಗೆ ಟ್ವೀಟ್ ಮಾಡಿರುವ ಸ್ವರಾ, ಕ್ಯಾಬ್ನಲ್ಲಿ ಬರುವಾಗ, ಅದರಲ್ಲಿದ್ದ ದಿನಸಿ ಸಾಮಾಗ್ರಿಗಳಿದ್ದ ಒಂದು ಬ್ಯಾಗ್ ಅನ್ನು ಡ್ರೈವರ್ ತೆಗೆದುಕೊಂಡು ಹೋಗಿದ್ದಾರೆ, ಅದನ್ನು ಮರಳಿ ಕೊಡಿಸುವಿರಾ ಎಂದು ಕೇಳಿದ್ದಾರೆ.
ಈ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಉಬರ್, ಖಂಡಿತ ಈ ವಿಚಾರವಾಗಿ ನಿಮಗೆ ಸಹಾಯ ಮಾಡಲಿದ್ದೇವೆ ಎಂದು ಹೇಳಿದೆ.
ಸಿನಿಮಾ ಕೆಲಸಗಳಿಗಾಗಿ ಲಾಸ್ ಏಂಜಲೀಸ್ಗೆ ತೆರಳಿರುವ ನಟಿ ಸ್ವರಾ, ಉಬರ್ ಆ್ಯಪ್ ಮೂಲಕ ಕ್ಯಾಬ್ ಬುಕ್ ಮಾಡಿದ್ದರು.