ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದಿಂದ ದೂರು: ಯೂಟ್ಯೂಬ್‌ನಿಂದ ಸಿಧು ಮೂಸೆವಾಲಾ ವಿಡಿಯೊ ಡಿಲೀಟ್

Last Updated 27 ಜೂನ್ 2022, 15:55 IST
ಅಕ್ಷರ ಗಾತ್ರ

ಗುಂಡಿನ ದಾಳಿಗೆ ಸಿಲುಕಿ ಹತ್ಯೆಯಾದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಮ್ಯೂಸಿಕ್ ವಿಡಿಯೊ ಒಂದನ್ನು ಯೂಟ್ಯೂಬ್ ಡಿಲೀಟ್ ಮಾಡಿದೆ.

ಸಟ್ಲೇಜ್ ಮತ್ತು ಯಮುನಾ ನದಿ ಜೋಡಣೆ ಮತ್ತು ಕಾಲುವೆ ಕುರಿತ ಎಸ್‌ವೈಎಲ್‌ ಎಂಬ ಮ್ಯೂಸಿಕ್ ವಿಡಿಯೊವನ್ನು ಸರ್ಕಾರದ ದೂರಿನ ಮೇರೆಗೆ ಯೂಟ್ಯೂಬ್ ಡಿಲೀಟ್ ಮಾಡಿದೆ.

ನದಿ ನೀರು ಹಂಚಿಕೆ ಕುರಿತು ಪಂಜಾಬ್ ಮತ್ತು ಹರಿಯಾಣ ಸರ್ಕಾರಗಳ ಮಧ್ಯೆ ವ್ಯಾಜ್ಯ ಇದ್ದು, ಹೀಗಾಗಿ ವಿಡಿಯೊ ಡಿಲೀಟ್ ಮಾಡುವಂತೆ ಸೂಚಿಸಲಾಗಿತ್ತು.

ಸಿಧು ಮರಣೋತ್ತರವಾಗಿ ಈ ವಿಡಿಯೊ ಪೋಸ್ಟ್ ಮಾಡಲಾಗಿದೆ ಎನ್ನಲಾಗಿತ್ತು. ಈ ವಿಡಿಯೊಗೆ 3 ಕೋಟಿಗೂ ಅಧಿಕ ವೀವ್ಸ್ ಬಂದಿದ್ದು, 33 ಲಕ್ಷಕ್ಕೂ ಹೆಚ್ಚಿನ ಲೈಕ್ಸ್ ಬಂದಿತ್ತು. ಆದರೆ ಈ ವಿಡಿಯೊ ಉಭಯ ರಾಜ್ಯಗಳ ನಡುವೆ ಗಲಭೆಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT