ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಮೆರಾ ಕಂಡ ಕೂಡಲೇ 'ನೋ ಫೋಟೋ' ಎಂದು ಕೂಗಾಡಿದ ತೈಮೂರ್

Last Updated 17 ಡಿಸೆಂಬರ್ 2020, 13:39 IST
ಅಕ್ಷರ ಗಾತ್ರ

ಮುಂಬೈ: ಸೆಲೆಬ್ರಿಟಿಗಳ ಬದುಕೇ ಹಾಗೆ. ಎಲ್ಲಿ ಕಂಡರೂ ಅವರನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿಯುವುದಕ್ಕೆ ಕಾಯುತ್ತಾ ಇರುತ್ತಾರೆ. ಈ ರೀತಿಯ ಫೋಟೋಗಳು ಸಿನಿಮಾದವರು ಮತ್ತು ಅವರ ಮಕ್ಕಳಿಗೆ ಪ್ರಚಾರ ಕೊಟ್ಟರೂ ಒಮ್ಮೊಮ್ಮೆ ಕಿರಿಕಿರಿ ಉಂಟುಮಾಡುತ್ತವೆ. ಸದ್ಯ, ಬಾಲಿವುಡ್ ನಟಿ ಕರೀನಾ ಕಪೂರ್ ಪುತ್ರ ತೈಮೂರ್‌ನದ್ದು ಇದೇ ಸ್ಥಿತಿ.

ಪ್ರತಿಬಾರಿ ಫೋಟೋಗಳಿಗೆ ಪೋಸ್ ಕೊಟ್ಟು ಬೇಸರಗೊಂಡಿದ್ದ ತೈಮೂರ್ ಈಗ ನೋ ಫೋಟೋ ಪೋಟೋ ಅಂತಾ ಕಿರುಚಾಡಿದ್ದಾನೆ. ಇಂಥದ್ದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇತ್ತೀಚೆಗೆ ಮಗನ ಜೊತೆ ತಾಯಿ ಮನೆಗೆ ಬಂದಿದ್ದ ಕರೀನಾ ಕಾರು ಇಳಿಯುತ್ತಿದ್ದಂತೆ ಫೋಟೋಗ್ರಾಫರ್‌ಗಳು ಫೋಟೋ ಕ್ಲಿಕ್ಕಿಸಲು ದುಂಬಾಲು ಬಿದ್ದಿದ್ದಾರೆ. ಇದನ್ನು ನೋಡುತ್ತಿದ್ದ ಸ್ಟಾರ್ ಕಿಡ್ ತೈಮೂರ್ 'ನೋ ಫೋಟೋ ನೋ ಪೋಟೋ' ಎಂದುಕೂಗಾಡಿದ್ದಾನೆ.ಬಳಿಕ ಫೋಟೋಗ್ರಾಫರ್‌ಗೆ ಕೈಬೀಸಿದ ಕರೀನಾ, ತೈಮೂರ್ ಕೈಹಿಡಿದು ಒಳಗೆ ಕರೆದೊಯ್ದಿದ್ದಾರೆ.

ಅಂದಹಾಗೆ, ತೈಮೂರ್ ಫೋಟೋಗೆ ನಿರಾಕರಿಸಿದ್ದು ಇದೇ ಮೊದಲಲ್ಲ. ಧರ್ಮಶಾಲಾದಲ್ಲಿ ಸೈಫ್ ಅಲಿ ಖಾನ್ ಅವರ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ತೈಮೂರ್ ಬೇಸರದಿಂದ ಫೋಟೋ ತೆಗೆಯುವುದನ್ನು ನಿರಾಕರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT