ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು ಕಿರುನಾಟಕೋತ್ಸವ ಸ್ಪರ್ಧೆ

Published 14 ಜೂನ್ 2024, 22:43 IST
Last Updated 14 ಜೂನ್ 2024, 22:43 IST
ಅಕ್ಷರ ಗಾತ್ರ

ಪ್ರವರ ಥಿಯೇಟರ್ ಮತ್ತು ಅಶ್ವಘೋಷ ಥಿಯೇಟರ್ ಟ್ರಸ್ಟ್ ಜಂಟಿ ಸಹಯೋಗದೊಂದಿಗೆ ‘ಬೆಂಗಳೂರು ಕಿರುನಾಟಕೋತ್ಸವ 2024’ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ. 

ನಾಟಕದ ನಿರೂಪಣಾ ವಿಷಯ: ‘ಸಮಾನತೆ’. ಭಾಗವಹಿಸುವ ತಂಡಗಳು ಈ ವಿಷಯದ ಬಗ್ಗೆ ನಾಟಕವನ್ನು ಪ್ರದರ್ಶಿಸಬೇಕು. ಭಾಗವಹಿಸುವ ಪ್ರತಿ ತಂಡಕ್ಕೂ, ರಂಗಸಜ್ಜಿಕೆಯ ಸಮಯ ಸೇರಿ 15 ನಿಮಿಷಗಳ ಕಾಲಾವಕಾಶ ಇರುತ್ತದೆ. ಪ್ರತಿ ತಂಡದಲ್ಲೂ  ರಂಗದಮೇಲೆ ಕನಿಷ್ಠ 2 ರಿಂದ  ಗರಿಷ್ಠ 8 ಕಲಾವಿದರಿರಬಹುದು. ರಂಗತಂಡ ಹಾಗೂ ರಂಗಕರ್ಮಿಗಳು ಹೆಸರು ನೋಂದಾಯಿಸಲು ಜೂನ್‌ 26ರವರೆಗೆ ಅವಕಾಶವಿರುತ್ತದೆ.

ನಿಯಮಗಳು ಹೀಗಿವೆ: ರಂಗತಂಡಗಳು ಒಂದಕ್ಕಿಂತ ಹೆಚ್ಚು ನಾಟಕಗಳನ್ನು ನೋಂದಾಯಿಸಿಕೊಳ್ಳ
ಬಹುದು, ಆದರೆ ಯಾವುದೇ ನಟ/ನಿರ್ದೇಶಕ/ಬರಹಗಾರ ಒಂದಕ್ಕಿಂತ ಹೆಚ್ಚು ತಂಡದಲ್ಲಿ ಭಾಗವಹಿಸು
ವಂತಿಲ್ಲ.  ಪ್ರತಿ ತಂಡವೂ ₹ 1000 ಪ್ರವೇಶ ದರ ಪಾವತಿಸಬೇಕು. ಅಂತಿಮ ಸುತ್ತಿಗೆ ಆಯ್ಕೆಯಾಗದ ತಂಡದ ಪ್ರವೇಶ ದರವನ್ನು ಹಿಂತಿರುಗಿಸಲಾಗುವುದು. ಮೊದಲ ಹಂತದ ಆಯ್ಕೆ ಪ್ರಕ್ರಿಯೆ ಜೂನ್‌ 30ರಂದು ಬೆಂಗಳೂರಿನ ಪ್ರಭಾತ್ ಕಲಾಸಂಭ್ರಮದಲ್ಲಿ ನಡೆಯಲಿದೆ.

ಪ್ರಶಸ್ತಿಗಳು ಹೀಗಿವೆ: ಅತ್ಯುತ್ತಮ ನಾಟಕ (ತೀರ್ಪುಗಾರರ ಆಯ್ಕೆ) - ಫಲಕ ಮತ್ತು ₹ 10,000. ಅತ್ಯುತ್ತಮ ನಾಟಕ (ಪ್ರೇಕ್ಷಕರ ಆಯ್ಕೆ) - ಫಲಕ ಮತ್ತು ₹ 10,000. ‘ಆರ್ .ನಾಗೇಶ್’ ಅತ್ಯುತ್ತಮ ನಿರ್ದೇಶನ - ಫಲಕ ಮತ್ತು ₹ 2,500. ‘ಸಂಚಾರಿ ವಿಜಯ್’ ಅತ್ಯುತ್ತಮ ನಟ - ಫಲಕ  ಮತ್ತು ₹ 2,500. ‘ಉಮಾಶ್ರೀ’ ಅತ್ಯುತ್ತಮ ನಟಿ - ಫಲಕ ಮತ್ತು 2,500/- ನಗದು. ಅತ್ಯುತ್ತಮ ಕಥೆ (ಸ್ವರಚಿತ) - ಫಲಕ ಮತ್ತು ₹ 2,500.  ಅತ್ಯುತ್ತಮ ನಾಟಕ ವಿನ್ಯಾಸ - ಫಲಕ ಮತ್ತು ₹ 2,500. ಅತ್ಯುತ್ತಮ ಭಿತ್ತಿಪತ್ರ ವಿನ್ಯಾಸ - ಫಲಕ ಮತ್ತು ₹2,500.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9902590303

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT