‘ಬಹುರೂಪಿ’ ಎಂದಾಕ್ಷಣ ರಂಗಾಸಕ್ತರ ಮನದಲ್ಲಿ ‘ಮೈಸೂರು ಮತ್ತು ರಾಷ್ಟ್ರೀಯ ನಾಟಕೋತ್ಸವ’ ಎಂಬ ಭಾವನೆ ಮೂಡುತ್ತದೆ. ರಂಗಭೂಮಿ ಕ್ಷೇತ್ರದಲ್ಲಿ ಅಷ್ಟರ ಮಟ್ಟಿಗೆ ತನ್ನದೇ ಛಾಪು ಮೂಡಿಸಿರುವ ಈ ಉತ್ಸವಕ್ಕೀಗ 25ರ ಹರೆಯ. 2001ರಲ್ಲಿ ನಡೆದ ಮೊದಲ ಉತ್ಸವ ‘ಮಹಿಳಾ ನಾಟಕೋತ್ಸವ’ವಾಗಿತ್ತು. ಅಲ್ಲಿಂದ ನಿರಂತರವಾಗಿ ವಿವಿಧ ಸಂಸ್ಕೃತಿಗಳು ಹಾಗೂ ಆಯಾ ವರ್ಷದ ಪ್ರಮುಖ ಬೆಳವಣಿಗೆಗಳನ್ನು ರಂಗಭೂಮಿಯೊಂದಿಗೆ ಬೆಸೆಯುತ್ತ ಬಂದಿದೆ. ಈ ಬಾರಿಯ ಬಹುರೂಪಿ ಉತ್ಸವವು ಜನವರಿ 12ರಿಂದ ಏಳು ದಿನ ನಡೆಯಲಿದೆ.

ಬಹುರೂಪಕ್ಕೆ ಅನ್ವರ್ಥನಾಮವೇ ಬಹುರೂಪಿ. ಅದು ದೇಶದ ಪುರಾತನ ಜನಪದ ಕಲೆ. ದೇಶದಾದ್ಯಂತ ಹಬ್ಬಿಕೊಂಡಿರುವ ಈ ಕಲೆ ಜನಪದೀಯರ ಜೀವನವೇ ಆಗಿದೆ. ಅದು ಜೀವನೋಪಾಯದ ಕಲೆಯೂ ಹೌದು. ನಮ್ಮದು ಯಾವತ್ತಿಗೂ ಬಹುರೂಪಿ ಸಂಸ್ಕೃತಿಯೇ. ತಲೆಮಾರುಗಳಿಂದ ಹಲವು ಭಾಷೆ, ಧರ್ಮ, ಕಲೆ, ಪರಂಪರೆಗಳ ಜನ ಒಂದಾಗಿ ಬಾಳುತ್ತಿರುವ ಈ ನಾಡಲ್ಲಿ ಏಕ ಸಂಸ್ಕೃತಿ ಎಂಬುದು ಮಿಥ್ಯೆ.

ಬಹುರೂಪಿ ಎಂಬುದು ನಮ್ಮ ದೇಸಿ ಪರಂಪರೆಯಲ್ಲಿರುವ ಜನಾಂಗವೊಂದರ ಹೆಸರು ಕೂಡ. ಅವರು ಶಿವನ ಆರಾಧಕರು. ಊರೂರು ಅಲೆಯುತ್ತಾ ವೇಷ ಹಾಕಿ, ಭಿಕ್ಷೆ ಬೇಡುವವರು. ನಾವೆಲ್ಲರೂ ಒಂದು ರೀತಿಯಲ್ಲಿ ಬಹುರೂಪಿಗಳೇ. ನಟರೆಲ್ಲರೂ ಬಹುರೂಪಿಗಳೇ. ನಾಟ್ಯಶಾಸ್ತ್ರ ಪರಂಪರೆಯ ಅರಿವಿಲ್ಲದ ಜನಪದರು ಬಹುರೂಪವನ್ನೇ ತಮ್ಮ ಸ್ವರೂಪವಾಗಿಸಿಕೊಂಡಿದ್ದಾರೆ. ಹಗಲುವೇಷ ಕಲಾವಿದರು ಇದಕ್ಕೆ ತಾಜಾ ಉದಾಹರಣೆ.

ನಾಗಚಂದ್ರನ ‘ಪಂಪ ರಾಮಾಯಣ’ ಕಾವ್ಯದಲ್ಲಿ, ಸೀತೆಯನ್ನು ಅಪಹರಿಸಿ ಪ್ರಮದವನದಲ್ಲಿಟ್ಟ ರಾವಣನು ಆಕೆಯನ್ನು ಒಲಿಸಿಕೊಳ್ಳಲು ಬಳಸುವ ‘ಬಹುರೂಪಿಣಿ ವಿದ್ಯೆ’ಗೆ ಸೋಲುಂಟಾಗುತ್ತದೆ. ಕದಡಿದ ಕೊಳ ತಿಳಿಯಾದಂತೆ, ಸೀತೆಯ ಮೇಲಿನ ಮೋಹವೂ ಕರಗುತ್ತದೆ. ಹಲವು ರೂಪಗಳನ್ನು ಧರಿಸಲು ಸಾಧ್ಯವಾಗುವ ಆ ವಿಶೇಷ ವಿದ್ಯೆಯು ಅವನಲ್ಲಿ ವೈರಾಗ್ಯವನ್ನು ಮೂಡಿಸುತ್ತದೆ. ಇದೊಂದು ನೈತಿಕ ಸಂದೇಶವೂ ಹೌದು.

ಬಹುರೂಪಿ ಎಂಬುದರ ಅರ್ಥ ಸಾಧ್ಯತೆಗಳನ್ನು ಹೀಗೆ ಹುಡುಕುತ್ತಾ ಹೊರಡುವುದು ಏಕಕಾಲಕ್ಕೆ ಹಲವು ದಿಕ್ಕುಗಳೆಡೆಗೆ ನಡೆಯುವ ಪಯಣ. ರೂಪರೂಪಗಳನ್ನು ದಾಟುತ್ತಲೇ ಇರಬೇಕಾದ ಈ ಪಯಣದಲ್ಲಿ ಮೈಸೂರಿನ ರಂಗಾಯಣವು ಇಪ್ಪತ್ತೈದು ವರ್ಷಗಳನ್ನು ಪೂರೈಸಿದೆ ಎಂಬುದೇ ವಿಶೇಷ. ಪ್ರತಿ ಬಾರಿಯೂ ಕಲಾವಿದರು ವಿಭಿನ್ನ ರೀತಿಯ ವೇಷ ಭೂಷಣಗಳನ್ನು ತೊಟ್ಟು ಉತ್ಸವವನ್ನು ರಂಗಮಂಚದಲ್ಲಿ ಕಳೆಗಟ್ಟಿಸಿದ್ದಾರೆ.

‘ಬಹುರೂಪಿ’ ಎಂದ ಕೂಡಲೇ, ಎಲ್ಲೇ ಇದ್ದರೂ ರಂಗಾಸಕ್ತರ ಮನದಲ್ಲಿ ‘ಮೈಸೂರು ಮತ್ತು ರಾಷ್ಟ್ರೀಯ ನಾಟಕೋತ್ಸವ’ ಎಂಬ ಪದಗಳೂ ತಂತಾನೆ ಜೋಡಣೆಗೊಳ್ಳುವ ಹಾಗೆ ಕರ್ನಾಟಕದ ರಂಗಭೂಮಿ ಕ್ಷೇತ್ರದಲ್ಲಿ ಹೊಸ ಪರಂಪರೆಯನ್ನು ಹುಟ್ಟು ಹಾಕಿ, ಮುಂದುವರಿಸಿದ ಶ್ರೇಯವೂ ಮೈಸೂರಿಗೆ ಸಲ್ಲುತ್ತದೆ.

ದೇಶದಾದ್ಯಂತ ಇರುವ ಹಲವು ಭಾಷೆ–ರಂಗ ಸಂಸ್ಕೃತಿಗಳ ನಟರನ್ನು, ಕಲಾವಿದರನ್ನು, ರಂಗತಂಡಗಳನ್ನು ಒಟ್ಟುಗೂಡಿಸಿ, ದೇಶದ ಬಹುರೂಪಿ ಗುಣದ ಅನನ್ಯತೆಯನ್ನು ಹಲವು ಸಮಕಾಲೀನ ಆಶಯಗಳಲ್ಲಿ ಹಿಡಿದಿಡುವ ಪ್ರಯತ್ನ ಇದು.

ಇದು ಪ್ರತಿ ವರ್ಷದ ಡಿಸೆಂಬರ್ ಅಥವಾ ಜನವರಿಯಲ್ಲಿ ರಂಗಾಯಣದಲ್ಲಿ ಏರ್ಪಡುವ ಭಾವೈಕ್ಯತೆಯ ಜಾತ್ರೆ. ಸಂಕ್ರಾಂತಿಗೂ ಮುನ್ನವೇ ಇಲ್ಲಿ ನಾಟಕಗಳ ಸುಗ್ಗಿ ಸಂಭ್ರಮ ಮೈದಾಳುತ್ತದೆ. ರಂಗ ಸಂಸ್ಕೃತಿಯ ಜೊತೆಗೆ ಭಾಷಾ ಸಂಸ್ಕೃತಿ, ಸಿನಿಮಾ ಸಂಸ್ಕೃತಿ, ಜನಸಂಸ್ಕೃತಿ, ಮನರಂಜನಾ ಸಂಸ್ಕೃತಿಗಳು ಒಟ್ಟಾಗುತ್ತವೆ.

ರಂಗಾಯಣದ ಭೂಮಿಗೀತ, ವನರಂಗ, ಕಿರುರಂಗಮಂದಿರ, ಕಲಾಮಂದಿರದ ವೇದಿಕೆಗಳಲ್ಲಿ ನಾಟಕ, ಸಾಕ್ಷ್ಯಚಿತ್ರ ಪ್ರದರ್ಶನಗಳು, ವಿಚಾರ ಸಂಕಿರಣ, ಜನಪದ ಉತ್ಸವಗಳು ಕಿಕ್ಕಿರಿದ ಜನರ ನಡುವೆ ನಡೆಯುತ್ತಿರುವಾಗಲೇ, ಹೊರ ಆವರಣದಲ್ಲಿ ವಸ್ತುಪ್ರದರ್ಶನ, ಕರಕುಶಲ, ಆಹಾರ ಮಳಿಗೆಗಳಲ್ಲೂ ಜನಸಂದಣಿ ಏರ್ಪಡುವುದು ವಿಶೇಷ. ಬಗೆಬಗೆಯ ದೇಸಿ ಖಾದ್ಯಗಳು, ಬಣ್ಣಬಣ್ಣದ ಉಡುಗೆ–ತೊಡುಗೆಗಳು, ಪುಸ್ತಕ ಪ್ರದರ್ಶನಗಳಿಂದ ಉತ್ಸವವು ದಣಿದ ಮನಸುಗಳಿಗೆ ಮುದ ನೀಡುತ್ತದೆ. ಈ ಉತ್ಸವಕ್ಕಾಗಿ ಕಾತರದಿಂದ ಕಾಯುವವರೂ ಉಂಟು.

ನಾಟಕೋತ್ಸವವೆಂದರೆ ನಾಟಕಗಳ ಪ್ರದರ್ಶನವಷ್ಟೇ ಆಗಿರುವುದಿಲ್ಲ. ಅದೊಂದು ಆಶಯದ ಪ್ರತಿಪಾದನೆ. ಆಶಯಕ್ಕೆ ತಕ್ಕ ಬೀದಿನಾಟಕ, ಸಿನಿಮಾ, ವಿಚಾರ ಸಂಕಿರಣಗಳೂ ಅದಕ್ಕೆ ಜೊತೆಯಾಗುತ್ತಿವೆ. ದೇಶದ ಪ್ರಖ್ಯಾತ ಚಿಂತಕರು, ಬರಹಗಾರರ ನಡುವೆ ಚಿಂತನ–ಮಂಥನಕ್ಕೂ ಪ್ರೇಕ್ಷಕರು ಸಾಕ್ಷಿಯಾಗುತ್ತಾರೆ.

ಪ್ರೇರಣೆಯಾದ ‘ಅಕ್ಕ’ ಉತ್ಸವ

‘ಬಹುರೂಪಿ’ ಎಂಬ ಹೆಸರಿನ ಉತ್ಸವ ಶುರುವಾಗುವ ಮುನ್ನ ರಂಗಾಯಣದಲ್ಲಿ ಮೊದಲಿಗೆ ನಡೆದ ‘ಅಕ್ಕ‘ ಉತ್ಸವವೇ ಅದಕ್ಕೆ ಪ್ರೇರಣೆಯಾಗಿತ್ತು ಎಂಬುದು ವಿಶೇಷ. ತನಗೆ ತಾನೇ ಪ್ರೇರಣೆಯಾದ ಬಗೆ ಇದು.

ರಂಗಾಯಣದ ಅಂದಿನ ನಿರ್ದೇಶಕ ಪ್ರಸನ್ನ ಅವರಲ್ಲಿ ಇಂಥ ಉತ್ಸವವೊಂದನ್ನು ರೂಪಿಸುವ ಆಲೋಚನೆ ಮೂಡಿದ ವೇಳೆ ಕೇಂದ್ರ ಸರ್ಕಾರವು 2000ನೇ ವರ್ಷವನ್ನು ‘ಮಹಿಳಾ ಸಬಲೀಕರಣದ ವರ್ಷ’ ಎಂದು ಘೋಷಿಸಿತ್ತು. ಹೀಗಾಗಿ 2001ರಲ್ಲಿ ನಡೆದ ಮೊದಲ ಉತ್ಸವ ‘ಮಹಿಳಾ ನಾಟಕೋತ್ಸವ’ವಾಗಿತ್ತು. ನಂತರ, ದೇಶದ ಬಹುರೂಪಿ ಸಂಸ್ಕೃತಿಯನ್ನು ಎತ್ತಿಹಿಡಿಯುವ ಸಲುವಾಗಿಯೇ ಅದೇ ಹೆಸರಿನಲ್ಲಿ ರಾಷ್ಟ್ರೀಯ ನಾಟಕೋತ್ಸವವನ್ನು ರೂಪಿಸಿದ್ದು ಈಗ ಇತಿಹಾಸ. ಆಗಲೂ ಈಗಲೂ ಉತ್ಸವವೆಂದರೆ ಏಳು ದಿನದ ಭರಪೂರ ರಂಗ ಸಂಭ್ರಮ.

ಎಡ–ಬಲ ಸಮನ್ವಯ

ಉತ್ಸವವು ಬಹುಜನರಿಂದ ಪ್ರಶಂಸೆಗೆ ಒಳಗಾಗುತ್ತಲೇ, ಪ್ರತಿಭಟನೆ, ಎಡ ಮತ್ತು ಬಲಪಂಥೀಯ ಚಿಂತನೆಧಾರೆಗಳ ಸಂಘರ್ಷ–ಸಮನ್ವಯತೆಗೂ ಸಾಕ್ಷಿಯಾಗಿದೆ. ಪ್ರಸನ್ನ ಅವರ ಅವಧಿಯಿಂದ ಅಡ್ಡಂಡ ಕಾರ್ಯಪ್ಪ ಅವರ ಅವಧಿಯವರೆಗೂ ಇದು ಆಗಾಗ ಸಂಚಲನೆಯನ್ನು ಮೂಡಿಸಿದ್ದೂ ಉಂಟು.

ಕಾರ್ಯಪ್ಪ ಅವರು ನಿರ್ದೇಶಕರಾಗಿದ್ದ ಅವಧಿಯಲ್ಲಿ ಸಂಘರ್ಷ ತಾರಕಕ್ಕೆ ಏರಿತ್ತು. ಆಗ ಅವರು ಉತ್ಸವದ ಕಾರ್ಯಕ್ರಮವೊಂದರಲ್ಲಿ ‘ಎಡಗಾಲು ಎಷ್ಟು ಮುಖ್ಯವೋ, ಬಲಗಾಲು ಕೂಡ ಅಷ್ಟೇ ಮುಖ್ಯ’ ಎಂದು ಪ್ರತಿಪಾದಿಸಿದ್ದರು.

ಟೀಕೆ ಟಿಪ್ಪಣಿಗಳ ನಡುವೆ, ಬಹುಭಾಷೆ, ಬಹುಸಂಸ್ಕೃತಿ, ಬಹುಜನ ಕೇಂದ್ರಿತವಾಗಿಯೇ ಉತ್ಸವ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. ಆದರೆ ಈಗಲೂ ಉತ್ಸವಕ್ಕಾಗಿ ಸರ್ಕಾರದ ಅನುದಾನವನ್ನೇ ಕಾಯುವ ಪರಿಸ್ಥಿತಿ ಇದೆ. ರಂಗ ಚಟುವಟಿಕೆಗಳ ಮೂಲಕ ರಂಗಾಯಣ ಸ್ವಾವಲಂಬನೆಯತ್ತ ನಡೆಯಲು ಉತ್ಸವವನ್ನು ಬಳಸಿಕೊಳ್ಳುವ ಪ್ರಯತ್ನವೂ ಅಗತ್ಯ ಎಂಬ ಪ್ರತಿಪಾದನೆಯೂ ನಡೆದಿದೆ.

ಆಶಯಗಳ ಬಹುರೂಪ

ಉತ್ಸವವು ಆಶಯಗಳ ಬಹುರೂಪಕ್ಕೂ ಸಾಕ್ಷಿಯಂತಿದೆ. ವಿವಿಧ ಸಂಸ್ಕೃತಿಗಳು ಹಾಗೂ ಆಯಾ ವರ್ಷದ ಪ್ರಮುಖ ಬೆಳವಣಿಗೆಗಳನ್ನು ರಂಗಭೂಮಿಯೊಂದಿಗೆ ಬೆಸೆದು ಆಶಯವನ್ನು ನಿರ್ವಚಿಸಿಕೊಳ್ಳುವ ಪರಂಪರೆಯೂ ಇದೆ. ಅದು, ಉತ್ಸವವನ್ನು ಸಮಕಾಲೀನಗೊಳಿಸುವ, ಜನಸಮುದಾಯದೊಂದಿಗೆ ರಂಗಭೂಮಿಯನ್ನು ಬೆಸೆಯುವ ಪ್ರಯತ್ನವೂ ಹೌದು.

‘ದೇಸಿ ಸಂಸ್ಕೃತಿ’, ‘ಕೃಷಿ ಸಂಸ್ಕೃತಿ’, ‘ಬುಡಕಟ್ಟು ಸಂಸ್ಕೃತಿ–ರಂಗಭೂಮಿ, ‘ಜೀವ–ಜಲ–ಜೀವನ’, ‘ಸೂಫಿ–ಸಂತ–ಸಾಮರಸ್ಯ’, ‘ವಲಸೆ’, ‘ಭಾರತೀಯತೆ’, ‘ತಾಯಿ’, ‘ಬಿಡುಗಡೆ’, ‘ಇವ ನಮ್ಮವ, ಇವ ನಮ್ಮವ’ –ಇವು ಕೆಲವು ವರ್ಷಗಳ ಆಶಯದ ಶೀರ್ಷಿಕೆಗಳು. ಸ್ವಾತಂತ್ರ್ಯ, ಸಾಮರಸ್ಯ, ಲಿಂಗ ಸಮಾನತೆ ಆಶಯದ ಪ್ರತಿಪಾದನೆಯೊಂದಿಗೂ ಉತ್ಸವಗಳು ನಡೆದಿವೆ.

ಪ್ರಮುಖ ಲೇಖಕರ ಸ್ಮರಣೆಗೂ ಉತ್ಸವವನ್ನು ಮೀಸಲಿಟ್ಟ ಉದಾಹರಣೆಗಳೂ ಇವೆ. ಗಾಂಧೀಜಿ ನೆನಪಿನಲ್ಲಿ ‘ಗಾಂಧೀಪಥ', ರವೀಂದ್ರನಾಥ ಠಾಗೂರರ ನೆನಪಿನಲ್ಲಿ ‘ಗುರುದೇವ’, ಬಸವಣ್ಣನ ನೆನಪಿನಲ್ಲಿ ‘ಆನು ಒಲಿದಂತೆ ಹಾಡುವೆ’, ಶೇಕ್ಸ್ಪಿಯರ್ ನೆನಪಿನಲ್ಲಿ ‘ಬಹುಮುಖಿ ಶೇಕ್ಸ್ಪಿಯರ್’ ಶೀರ್ಷಿಕೆಯಲ್ಲೂ ಉತ್ಸವ ನಡೆದಿದೆ. ಜ್ಞಾನಪೀಠ ಪುರಸ್ಕೃತ ಕನ್ನಡ ಲೇಖಕರು ಕೂಡ ಉತ್ಸವವನ್ನು ಮುನ್ನಡೆಸಿದ್ದಾರೆ.

ಪ್ರಸನ್ನರ ನಂತರ ರಂಗಾಯಣ ನಿರ್ದೇಶಕರಾಗಿದ್ದ ಚಿದಂಬರರಾವ್ ಜಂಬೆ, ಲಿಂಗದೇವರು ಹಳೆಮನೆ, ಬಿ.ವಿ.ರಾಜಾರಾಂ, ಜನಾರ್ದನ (ಜನ್ನಿ), ಭಾಗೀರಥಿ ಬಾಯಿ ಕದಂ, ಅಡ್ಡಂಡ ಕಾರ್ಯಪ್ಪ ಉತ್ಸವವನ್ನು ಮುನ್ನಡೆಸಿದ್ದರು. ಕಳೆದೆರಡು ವರ್ಷದಿಂದ ನಿರ್ದೇಶಕ ಸತೀಶ್ ತಿಪಟೂರು ನೇತೃತ್ವದಲ್ಲಿ ಉತ್ಸವಗಳು ನಡೆದಿವೆ. ಈ ಬಾರಿ ಅಂಬೇಡ್ಕರ್ ಅವರ ಜೀವನ–ಹೋರಾಟ ಪ್ರತಿಪಾದಿಸುವ ‘ಬಹುರೂಪಿ ಬಾಬಾಸಾಹೇಬ್’ ಆಶಯವಿದೆ.

ಸಾಕ್ಷ್ಯಚಿತ್ರಗಳ ಸಾಥ್..

ಬಹುರೂಪಿ ನಾಟಕೋತ್ಸವವಾದರೂ ಮೊದಲ ಆವೃತ್ತಿಯಿಂದ ಇಲ್ಲಿವರೆಗೆ ಸಾಕ್ಷ್ಯಚಿತ್ರ, ಸಿನಿಮಾಗಳ ಪ್ರದರ್ಶನವೂ ಸಾಗಿ ಬಂದಿರುವುದು ವಿಶೇಷ. ಉತ್ಸವದುದ್ದಕ್ಕೂ ಮೈಸೂರು ಅಮೆಚೂರ್ ನ್ಯಾಚುರಲಿಸ್ಟ್ ಸಂಸ್ಥೆಯ(ಮ್ಯಾನ್) ಕೆ.ಮನು ಅವರೇ ಇದರ ನೇತೃತ್ವ ವಹಿಸಿರುವುದು ಇನ್ನೊಂದು ವಿಶೇಷ.

ಪ್ರಾದೇಶಿಕ–ಜಾಗತಿಕವಾಗಿ ಗಮನ ಸೆಳೆದ ಸಾಕ್ಷ್ಯಚಿತ್ರಗಳು ಮತ್ತು ಸಿನಿಮಾ ವೀಕ್ಷಣೆಯ ಅಭಿರುಚಿ ನಿರ್ಮಾಣಕ್ಕೂ ಉತ್ಸವ ಮಹತ್ವದ ಕೊಡುಗೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.