ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮದುವೆಗೆ ಕೆಲವೇ ದಿನ ಇರುವಾಗಲೇ ಕಾಲಿಗೆ ಗಾಯಮಾಡಿಕೊಂಡ ಅಂಕಿತಾ ಲೋಖಂಡೆ

ಬೆಂಗಳೂರು: ವಿಕ್ಕಿ ಜೈನ್ ಜತೆ ಮದುವೆಗೆ ಕೆಲವೇ ದಿನ ಬಾಕಿ ಉಳಿದಿರುವಾಗಲೇ ನಟಿ ಅಂಕಿತಾ ಲೋಖಂಡೆ ಅವರು ಕಾಲಿಗೆ ಗಾಯಮಾಡಿಕೊಂಡಿದ್ದಾರೆ.

ಪವಿತ್ರ ರಿಶ್ತಾ ಹಿಂದಿ ಧಾರಾವಾಹಿ ಮೂಲಕ ಜನಪ್ರಿಯತೆ ಗಳಿಸಿರುವ ಅಂಕಿತಾ ಲೋಖಂಡೆ ಅವರ ಕಾಲು ತಿರುಚಿಕೊಂಡಿದ್ದರಿಂದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಬಳಿಕ ಮನೆಗೆ ಮರಳಿದ್ದು, ಕೆಲವು ದಿನ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ.

ಅಂಕಿತಾ ಮತ್ತು ವಿಕ್ಕಿ ಮದುವೆ ಇದೇ ತಿಂಗಳು ಮುಂಬೈಯ ಗ್ರಾಂಡ್ ಹಯಾತ್ ಹೋಟೆಲ್‌ನಲ್ಲಿ ನಡೆಯಲಿದೆ.

ವಿಕ್ಕಿ ಮತ್ತು ಅಂಕಿತಾ ಕುಟುಂಬ ಮದುವೆ ಸಿದ್ಧತೆಯಲ್ಲಿ ತೊಡಗಿಸಿಕೊಂಡಿರುವಾಗಲೇ ಅವರ ಕಾಲಿಗೆ ಗಾಯವಾಗಿದೆ.

ಇವರಿಬ್ಬರೂ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT