ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಲ್ಡೀವ್ಸ್‌ನಲ್ಲಿ ಗೆಳೆಯನ ಜತೆ ಬಾಲಿಕಾ ವಧು ನಟಿ ಅವಿಕಾ ಗೋರ್

ಬೆಂಗಳೂರು: ಹಿಂದಿ ವಾಹಿನಿಯ ಜನಪ್ರಿಯ ಧಾರಾವಾಹಿ ‘ಬಾಲಿಕಾ ವಧು’ ಖ್ಯಾತಿಯ ನಟಿ ಅವಿಕಾ ಗೋರ್ ಗೆಳೆಯನ ಜತೆ ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳಿದ್ದಾರೆ.

ಅವಿಕಾ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪ್ರವಾಸದ ಚಿತ್ರಗಳೇ ತುಂಬಿದ್ದು, ಅಭಿಮಾನಿಗಳಿಗೆ ಸಂತಸ ತಂದಿದೆ.

ಅವಿಕಾ, ಪ್ರವಾಸದ ಚಿತ್ರಗಳನ್ನಷ್ಟೇ ಪೋಸ್ಟ್ ಮಾಡದೆ, ಅದರ ಜತೆಗೆ ಅಲ್ಲಿನ ವಿಶೇಷತೆಗಳ ಕುರಿತು ಕಿರು ಪ್ರವಾಸಿ ವಿಡಿಯೊ ಕೂಡ ಮಾಡಿದ್ದಾರೆ.

ಗೆಳೆಯ ಮಿಲಿಂದ್ ಚಂದ್ವಾನಿ ಜತೆಗೆ ಅವಿಕಾ ಮಾಲ್ಡೀವ್ಸ್ ಪ್ರವಾಸಕ್ಕೆ ಹೋಗಿದ್ದು, ಅಲ್ಲಿನ ಸಮುದ್ರ ತೀರ, ಮುಸ್ಸಂಜೆಯ ಸುಂದರ ಚಿತ್ರಗಳನ್ನು ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ.

ಕೋವಿಡ್ ನಿರ್ಬಂಧದ ಬಳಿಕ ಪ್ರವಾಸಿ ತಾಣಗಳು ತೆರೆದುಕೊಂಡಿದ್ದು, ಬಾಲಿವುಡ್‌ನ ಬಹುತೇಕ ನಟ-ನಟಿಯರು ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT