ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

BBK 10 | ಬಿಗ್‌ಬಾಸ್‌ ಫಿನಾಲೆಗೆ ಕ್ಷಣಗಣನೆ: ಕಣ್ಣೀರಿಟ್ಟ ಡ್ರೋಣ್ ಪ್ರತಾಪ್‌ ತಾಯಿ

Published 27 ಜನವರಿ 2024, 12:49 IST
Last Updated 27 ಜನವರಿ 2024, 12:49 IST
ಅಕ್ಷರ ಗಾತ್ರ

ಬಿಗ್‌ಬಾಸ್‌ ಕನ್ನಡ 10ನೇ ಸೀಸನ್‌ ಫಿನಾಲೆಗೆ ಕ್ಷಣಗಣನೆ ಶುರು ಆಗಿದ್ದು, ದೊಡ್ಮನೆಯಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ಫೈನಲಿಸ್ಟ್ ಆಗಿರುವ ಆರು ಜನ ಸ್ಪರ್ಧಿಗಳ ಪೈಕಿ ಬಿಗ್‌ಬಾಸ್‌ ಟ್ರೋಫಿ ಯಾರ ಮುಡಿಗೇರಲಿದೆ ಎಂಬ ಕುತೂಹಲ ಹೆಚ್ಚಾಗಿದೆ.

ವರ್ಣರಂಜಿತ ಅದ್ದೂರಿ ವೇದಿಕೆಯಲ್ಲಿ ಕಿಚ್ಚ ಸುದೀಪ್ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ‘ಬಿಗ್‌ಬಾಸ್‌ ಸೀಸನ್‌ಗಳ ಪೈಕಿ ಈ ಸೀಸನ್‌ನಷ್ಟು ಸುದ್ದಿ ಮಾಡಿದ ಸೀಸನ್‌ ಬೇರೆ ಇಲ್ಲ’ ಎಂದು ಸ್ವತಃ ಸುದೀಪ್ ಅವರು ಹೇಳಿದ್ದಾರೆ.

ವರ್ತೂರು ಸಂತೋಷ್ ಅವರು ಬಿಗ್‌ಬಾಸ್‌ ಮನೆಯೊಳಗೆ ಇರುವಾಗಲೇ ಜೈಲಿಗೆ ಹೋಗಿ ಬಂದ ಸಂಗತಿಯನ್ನು ಸುದೀಪ್‌ ವೇದಿಕೆಯಲ್ಲಿ ರಿವೀಲ್ ಮಾಡಿದ್ದಾರೆ. ಈ ವೇಳೆ ಮನೆಯೊಳಗಿನ ಉಳಿದ ಸ್ಪರ್ಧಿಗಳ ಮುಖದಲ್ಲಿ ಅಚ್ಚರಿ ಮೂಡಿದರೆ, ವರ್ತೂರು ಅವರ ಕಣ್ಣುಗಳಲ್ಲಿ ನೀರು ತುಂಬಿತ್ತು. ಹೊರಗೆ ಕೂತಿದ್ದ ವರ್ತೂರು ಸಂತೋಷ್ ಅವರ ತಾಯಿ ಸಹ ಕಣ್ಣೀರು ಹಾಕಿದ್ದಾರೆ. ಡ್ರೋಣ್ ಪ್ರತಾಪ್ ಅವರ ಅಮ್ಮ, ‘ನಮ್ಮ ಮಗನನ್ನು ನಮಗೆ ಕೊಟ್ಟಿದ್ದೀರಾ. ಬಿಗ್‌ಬಾಸ್‌ಗೆ ಚಿರಋಣಿ’ ಎಂದು ಭಾವುಕರಾಗಿರುವ ದೃಶ್ಯಗಳು ಜಿಯೊ ಸಿನಿಮಾ ಬಿಡುಗಡೆ ಮಾಡಿದ ವಿಡಿಯೊದಲ್ಲಿದೆ.

ಇದೆಲ್ಲದರ ನಡುವೆ ಫೈನಲ್‌ಗೆ ಅದ್ದೂರಿಯಾಗಿ ಸಿದ್ಧತೆ ನಡೆದಿದ್ದು. ಎಲಿಮಿನೇಟೆಡ್ ಸ್ಪರ್ಧಿಗಳಿಂದ ಹಾಡು, ನೃತ್ಯ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಬಿಗ್ ಬಾಸ್ ಆಯೋಜಿಸಿದೆ.

ಬಿಗ್‌ಬಾಸ್‌ 10ನೇ ಸೀಸನ್‌ ಫಿನಾಲೆ ಇಂದು ಮತ್ತು ನಾಳೆ ಜಿಯೊ ಸಿನಿಮಾದಲ್ಲಿ ಹಾಗೂ ಕಲರ್ಸ್‌ ಕನ್ನಡದಲ್ಲಿಯೂ ಸಂಜೆ 7.30ರಿಂದ ಪ್ರಸಾರವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT