ಸೋಮವಾರ, ಆಗಸ್ಟ್ 8, 2022
22 °C

Bigg Boss 8 | ಮತ್ತೆ ಬಿಗ್‌ಬಾಸ್‌; ಬುಧವಾರದಿಂದ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬಿಗ್‌ಬಾಸ್‌ ಆವೃತ್ತಿ 8 ಕೊರೊನಾ ಕಾರಣಕ್ಕೆ ಅರ್ಧಕ್ಕೆ ನಿಂತಿದ್ದು ಹಳೆಯ ಸುದ್ದಿ. ಇದೀಗ ಅದೇ ಆವೃತ್ತಿಯನ್ನು ಮುಂದುವರಿಸಲು ಮುಹೂರ್ತ ನಿಗದಿ ಆಗಿದೆ. ಜೂನ್‌ 23ರಿಂದ ಹೊಸ ಸಂಚಿಕೆಗಳು ಪ್ರಸಾರ ಆಗಲಿವೆ ಎಂದು ಕಲರ್ಸ್‌ ವಾಹಿನಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದೆ.

ಸಂಚಿಕೆ ಅರ್ಧಕ್ಕೆ ಸ್ಥಗಿತಗೊಂಡಾಗ ಇದ್ದ ಸ್ಪರ್ಧಿಗಳೂ ಇರಲಿದ್ದಾರೆ. ಆದರೆ ಹೊಸಬರೂ ಬಿಗ್‌ ಬಾಸ್‌ ಮನೆ ಪ್ರವೇಶಿಸುವ ಸಾಧ್ಯತೆಯೂ ಇದೆ ಎಂದು ಹೇಳುವ ಮೂಲಕ ಸರಣಿಯ ಪುನರಾರಂಭ ಕುತೂಹಲ ಉಳಿಸಿಕೊಂಡಿದೆ.

ಸಂಚಿಕೆ ಪುನರಾರಂಭ ಸಂಬಂಧಿಸಿ ವಾಹಿನಿ ಹಂಚಿಕೊಂಡ ಪ್ರೋಮೋಗಳು ಕೂಡಾ ಇದೇ ಕುತೂಹಲ ಹುಟ್ಟಿಸುತ್ತಿವೆ. ಕಳೆದ ಬಾರಿ ಬಿಗ್‌ಬಾಸ್‌ ಸರಣಿಯ ಕೊನೆಯ ಕಂತುಗಳಲ್ಲಿ ಸುದೀಪ್‌ ಕಾಣಿಸಿಕೊಂಡಿರಲಿಲ್ಲ. ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು. ಈ ಬಾರಿ ಸುದೀಪ್‌ ಮತ್ತೆ ಲವಲವಿಕೆಯಿಂದ ಭಾಗವಹಿಸಲಿದ್ದಾರೆ. ಈ ಸರಣಿ ಮತ್ತಷ್ಟು ಭರಪೂರ ಮನೋರಂಜನೆ ಒದಗಿಸಲಿದೆ ಎಂದು ವಾಹಿನಿ ಹೇಳಿಕೊಂಡಿದೆ.

ಸೀಸನ್‌ 8ರ ಸ್ಪರ್ಧಿಗಳಾಗಿದ್ದ ಮಂಜು ಪಾವಗಡ, ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ್, ಪ್ರಿಯಾಂಕಾ ತಿಮ್ಮೇಶ್, ದಿವ್ಯಾ ಸುರೇಶ್, ಅರವಿಂದ್ ಕೆ.ಪಿ., ದಿವ್ಯಾ ಉರುಡುಗ, ನಿಧಿ ಸುಬ್ಬಯ್ಯ, ಶುಭಾ ಪೂಂಜಾ, ರಘು ಗೌಡ, ವೈಷ್ಣವಿ ಗೌಡ, ಶಮಂತ್ ಬ್ರೋ ಗೌಡ ಈಗಾಗಲೇ ಹೋಟೆಲ್ಗಳಲ್ಲಿ ಕ್ವಾರಂಟೈನ್ ಆಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು