ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BBK-10: ಪ್ರಾಥಮಿಕ ಶಾಲೆಯಾದ ಬಿಗ್‌ಬಾಸ್‌ ಮನೆ: ಕನ್ನಡ ಪಾಠ ಮಾಡಿದ ಮೈಕಲ್‌

Published 12 ಡಿಸೆಂಬರ್ 2023, 13:04 IST
Last Updated 12 ಡಿಸೆಂಬರ್ 2023, 13:04 IST
ಅಕ್ಷರ ಗಾತ್ರ

ಬೆಂಗಳೂರು: ಕಳೆದ ವಾರದ ರಣರಂಗದಂತಾಗಿದ್ದ ಬಿಗ್‌ಬಾಸ್‌ ಮನೆಯಲ್ಲಿ ಈಗ ಪ್ರಾಥಮಿಕ ಶಾಲೆ ಪ್ರಾರಂಭವಾಗಿದೆ. ರಕ್ಕಸರ ಹಾಗೆ ಕಿತ್ತಾಡಿದ್ದವರು ಈ ವಾರ ಪುಟ್ಟ ಮಕ್ಕಳಾಗಿ ಶಾಲೆಗೆ ಸೇರಿಕೊಂಡಿದ್ದಾರೆ.

ಹೌದು, ಈ ವಾರದ ಟಾಸ್ಕ್‌ನಲ್ಲಿ ಬಿಗ್‌ಬಾಸ್‌ ಮನೆಯ ಎಲ್ಲ ಸದಸ್ಯರನ್ನು ಬಾಲ್ಯಕ್ಕೆ ಕರೆದೊಯ್ಯುತ್ತಿದ್ದಾರೆ. ಎಲ್ಲ ಸ್ಪರ್ಧಿಗಳು ಪ್ರಾಥಮಿಕ ಶಾಲೆಯ ಸಮವಸ್ತ್ರ ತೊಟ್ಟು ಅಕ್ಷರಶಃ ಮಕ್ಕಳಂತೆ ಆಗಿದ್ದಾರೆ. ಎಲ್ಲರೂ ಸೇರಿ ಒಟ್ಟಿಗೆ ಪ್ರಾರ್ಥನೆ ಮಾಡುವ ಮೂಲಕ ಕೋಲಾಹಲವೆದ್ದಿದ್ದ ಮನೆಯಲ್ಲಿ ಕಲರವ ಉಂಟಾಗಿದೆ. ಕ್ರೌರ್ಯ ಮೆರೆದಾಡಿದ್ದ ಜಾಗದಲ್ಲಿ ಕೌಮಾರ್ಯದ ಮುಗ್ಥತೆ ಅರಳುತ್ತಿದೆ. ಒಬ್ಬೊಬ್ಬರೂ ಇನ್ನೊಬ್ಬರ ಚೇಷ್ಟೆಗಳನ್ನು ನೋಡಿ ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದಾರೆ. ಈ ವಾರವಿಡೀ ಬಿಗ್‌ಬಾಸ್‌ ಮನೆಯಲ್ಲಿ ಮಕ್ಕಳಾಟದ ಮನರಂಜನೆ ಭರಪೂರ ಸಿಗಲಿದೆ.

ತನಿಷಾ ವ್ಯಕ್ತಿತ್ವ ವಿಕಸನದ ಬಗ್ಗೆ ಪಾಠ ಮಾಡುವ ಮಿಸ್‌ ಆದರೆ, ಮೈಕಲ್‌ ಕೋಟು ತೊಟ್ಟು ಕನ್ನಡ ತರಗತಿಯಲ್ಲಿ ಪಾಠ ಮಾಡುವ ಮೇಷ್ಟ್ರಾಗಿದ್ದಾರೆ. ಉಳಿದ ಸ್ಪರ್ಧಿಗಳು ಶಾಲೆಯಲ್ಲಿ ಮಕ್ಕಳಾಗಿ ಭರ್ತಿಯಾಗಿದ್ದಾರೆ.

ಮೊದಲ ತರಗತಿಯಲ್ಲಿ ತನಿಷಾ ಟೀಚರ್‌ ವ್ಯಕ್ತಿತ್ವ ವಿಕಸನದ ಬಗ್ಗೆ ಪಾಠ ಮಾಡಲು ಬಂದಾಗ ವರ್ತೂರು ಸಂತೋಷ್‌ ‘ನೀವ್‌ ಚೆನ್ನಾಗ್‌ ಕಾಣಿಸ್ತಾ ಇದೀರಾ ಮಿಸ್‌’ ಎಂದು ಹೇಳಿದ ಮಾತಿಗೆ ತನಿಷಾ ನಾಚಿಕೊಂಡಿದ್ದಾರೆ. ಇನ್ನೂ ಮೈಕಲ್‌ ವಿದೇಶದಿಂದ ಬಂದಿದೀನಿ, ಕನ್ನಡ ಭಾಷೆಯ ಮೇಲೆ ನನಗೆ ಪ್ರೀತಿ ಆಯ್ತು. ಈಗ ಪಂಡಿತ ಆಗಲು ಯತ್ನಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಅಷ್ಟೆ ಅಲ್ಲದೆ, ಎಲ್ಲಾದರೂ ಇರು ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು ಎಂದು ಮೈಕಲ್‌ ಹೇಳುತ್ತಿದ್ದರೆ, ವಿದ್ಯಾರ್ಥಿಗಳ ಬಾಯಲ್ಲಿ ಕನ್ನಡ ರೋಮಾಂಚನವೀ ಕನ್ನಡ ಎಂಬ ಹಾಡು ತಂತಾನೆಯೇ ಹೊಮ್ಮಿದೆ.

ಬಿಗ್‌ಬಾಸ್‌ ಕನ್ನಡ 24 ಗಂಟೆ ನೇರಪ್ರಸಾರವನ್ನು Jio Cinemaದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ ಪ್ರಸಾರ ಮಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT