ಮಂಗಳವಾರ, ಏಪ್ರಿಲ್ 20, 2021
32 °C

Big Boss 8: ಧನುಶ್ರೀ ಜೈಲು ಸೇರಿದ್ದೇಕೆ? ಗೆಲ್ಲೋದು ಇವರೆ ಎಂದ ಶಂಕರ್ ಅಶ್ವಥ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಗ್ ಬಾಸ್ ಎಂದ ಕೂಡಲೆ ನಮ್ಮ ಮನಸ್ಸಿಗೆ ಹೆಚ್ಚಾಗಿ ಬರುವುದು ಅಲ್ಲಿನ ಗಲಾಟೆ, ಗದ್ದಲ, ಕೀಟಲೆಗಳು. ಆದರೆ, ಈ ಬಾರಿಯ ಬಿಗ್ ಬಾಸ್ 8ನೇ ಆವೃತ್ತಿ ಆ ರೀತಿಯ ಯಾವುದೇ ಗೋಜಿಲ್ಲದೆ ನಡೆಯುತ್ತಿದೆ. ಬಹುತೇಕ ಸ್ಪರ್ಧಿಗಳು ಕ್ಷಮೆ ಕೇಳುವುದರಿಂದ ಹಿಡಿದು ಅನುಸರಿಸಿಕೊಂಡು ಹೋಗುತ್ತಿದ್ದಾರೆ. ಆದರೆ, ಪೈಪೋಟಿ ಇದ್ದೇ ಇದೆ. ಇದರನ್ವಯ ಈ ವಾರ ಉತ್ತಮ ಪ್ರದರ್ಶನ ಮತ್ತು ಕಳಪೆ ಪ್ರದರ್ಶನ ನೀಡಿದವರನ್ನು ಆಯ್ಕೆ ಮಾಡಲಾಗಿದೆ.

ಹಲವು ಸ್ಪರ್ಧಿಗಳಿಂದ ಡಾಮಿನೆಟ್ ಮಾಡ್ತಾರೆ ಎಂದು ಟೀಕೆಗೊಳಗಾಗಿದ್ದ ಪ್ರಶಾಂತ್ ಸಂಬರಗಿ ಈ ವಾರದ ಬೆಸ್ಟ್ ಪರ್ಫಾಮರ್ ಆಗಿದ್ದಾರೆ. ಬಿಗ್ ಬಾಸ್ ಮನೆಯ ಎಲ್ಲ ಸ್ಪರ್ಧಿಗಳು ಸಂಬರಗಿಗೆ ಬೆಸ್ಟ್ ಪರ್ಫಾಮರ್ ಪಟ್ಟ ಕೊಟ್ಟಿದ್ದಾರೆ. ಅಂತೆಯೆ ವರ್ಸ್ಟ್ ಪರ್ಫಾಮರ್ ಇರಬೇಕಲ್ಲ. ಧನುಶ್ರೀ ಅವರನ್ನು ಕಳಪೆ ಪರ್ಫಾಮರ್ ಎಂದು ಸ್ಪರ್ಧಿಗಳು ತೀರ್ಮಾನಿಸಿದ್ದಾರೆ. ಹೀಗಾಗಿ, ಧನುಶ್ರೀ ಬಿಗ್ ಬಾಸ್ ಆದೇಶದ ಮೇರೆಗೆ ಮನೆಯ ಜೈಲು ಸೇರಿದ್ದಾರೆ.

ಗಂಜಿಯೇ ಗತಿ: ಬಿಗ್ ಬಾಸ್ ನಿಯಮದ ಪ್ರಕಾರ, ಕಳಪೆ ಪ್ರದರ್ಶನ ನೀಡಿ ಜೈಲು ಸೇರಿರುವ ಧನುಶ್ರಿ ಕೈದಿಯಂತೆ ಉಡುಪನ್ನು ತೊಟ್ಟು ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಮಾಮೂಲಿ ಜೈಲುಗಳ ರೀತಿಯೆ ನಿಯಮಾವಳಿ ಇದ್ದು, ಮನೆಯ ಯಾವುದೇ ಸೌಲಭ್ಯವನ್ನು ಅವರು ಬಳಸುವಂತಿಲ್ಲ. ಕೇವಲ ರಾಗಿ ಗಂಜಿ ಕುಡಿದು ಕಾಲ ಕಳೆಯಬೇಕು. ಅಡುಗೆಗೆ ತರಕಾರಿ ಕಟ್ ಮಾಡಿಕೊಡಬೇಕು. 

ಇನ್ನೂ, ಶನಿವಾರ ಮತ್ತು ಭಾನುವಾರ ಎಂಟ್ರಿ ಕೊಡುವ ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್ ಸ್ಪರ್ಧಿಯೊಬ್ಬರನ್ನು ಹೊರಗೆ ಕರೆದು ವಾರದ ಘಟನಾವಳಿಗಳ ಚರ್ಚೆ ಮಾಡುತ್ತಾರೆ. ಸ್ಪರ್ಧಿಯ ಸರಿ ತಪ್ಪುಗಳ ವಿಶ್ಲೇಷಣೆ ನಡೆಯುತ್ತೆ. ಹೊರಹೋಗುವ ಮೊದಲ ಸ್ಪರ್ಧಿ ಯಾರೆಂಬುದರ ಬಗ್ಗೆಯೂ ಗೊತ್ತಾಗುತ್ತೆ.

ಗೆಲ್ಲುವ ಸ್ಪರ್ಧಿ ಇವರೇನಾ?: ಇದಕ್ಕೂ ಮುನ್ನ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ಲೈಕ್ ಅಂಡ್ ಡಿಸ್ ಲೈಕ್ ಬ್ಯಾಡ್ಜ್ ಹಾಕುವ ಕೆಲಸ ಕೊಟ್ಟಿದ್ದರು ಬಿಗ್ ಬಾಸ್. ಈ ಸಂದರ್ಭ ಯಾರ ಜೊತೆಯೂ ಬೆರೆಯದೇ ಮೂಡಿಯಾಗಿದ್ದ ನಿರ್ಮಲಾಗೆ ಹಲವರು ಡಿಸ್ ಲೈಕ್ ಬ್ಯಾಡ್ಜ್ ಹಾಕಿದರು. ವರ್ತನೆ ಸರಿಮಾಡಿಕೊಳ್ಳುವಂತೆ ಮನವಿ ಮಾಡಿದರು. 

 

ಇದೇ ಸಂದರ್ಭ ಈ ಬಾರಿಯ ಬಿಗ್ ಬಾಸ್ ಗೆಲ್ಲುವ ಸ್ಪರ್ಧಿ ಯಾರೆಂಬುದರ ಬಗ್ಗೆ ಶಂಕರ್ ಅಶ್ವಥ್ ಭವಿಷ್ಯ ನುಡಿದಿದ್ದಾರೆ. ಅದು ಬೇರರೂ ಅಲ್ಲ, ಸದಾ ಮನೆ ಮಂದಿಯನ್ನೆಲ್ಲ ನಗಿಸುತ್ತಾ ಓಡಾಡಿಕೊಂಡಿರುವ ಪಾವಗಡ ಮಂಜು.  ಮಂಜು ಈ ಬಾರಿಯ ಬಿಗ್ ಬಾಸ್ ಗೆಲ್ಲಬಹುದು ಅಂತಾ ಶಂಕರ್ ಅಶ್ವಥ್ ಹೇಳಿದರು. ಬಹುತೇಕ ಸ್ಪರ್ಧಿಗಳು ಇದನ್ನು ಒಪ್ಪುತ್ತಾರೆ ಎಂದರು. ಇಷ್ಟೆಲ್ಲ ಹೇಳಿದ ಮೇಲೂ ಮಂಜುಗೆ ಅವರು ಡಿಸ್ ಲೈಕ್ ಬ್ಯಾಡ್ಜ್ ಹಾಕಿ ಅಚ್ಚರಿ ಮೂಡಿಸಿದರು. 

ಇದಕ್ಕೆ ಅವರೆ ಒಂದು ತಮಾಷೆಯ ಉತ್ತರ ಕೊಟ್ಟಿದ್ದಾರೆ. ಒಂದು ವಿಷಯದಲ್ಲಿ ಮಂಜು ಅವರಿಂದ ನನಗೆ ತೊಂದರೆ ಆಗಿದೆ. ರಾತ್ರಿ ಹೊತ್ತು ಮಂಜಣ್ಣ ಒಳ್ಳೆ ಮೋಟಾರ್ ಬೋಟ್. ಅಂದರೆ ಗೊರಕೆ ಹೊಡೆಯುತ್ತಾರೆ. ಆದ್ದರಿಂದ, ಡಿಸ್ ಲೈಕ್ ಬ್ಯಾಡ್ಜ್ ಹಾಕುತ್ತಿದ್ದೇನೆ ಎಂದು ಹೇಳಿ ಮನೆ ಮಂದಿಯನ್ನೆಲ್ಲ ನಗೆಗಡಲಲ್ಲಿ ತೇಲಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು