ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Big Boss 8: ನನಗೂ ಒಬ್ಬ ಗೆಳೆಯ ಬೇಕು.. ನಟಿ ವೈಷ್ಣವಿ ಪ್ರೇಮರಾಗ

Last Updated 31 ಮಾರ್ಚ್ 2021, 6:50 IST
ಅಕ್ಷರ ಗಾತ್ರ

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಆಗಾಗ್ಗೆ ಕುತೂಹಲಕಾರಿ ಸಂಗತಿಗಳು ಬೆಳಕಿಗೆ ಬರುತ್ತವೆ. ಅದರಲ್ಲಿ ಕಿರುತೆರೆ ನಟಿ ವೈಷ್ಣವಿ ಅವರ ಒನ್ ಸೈಡ್ ಲವ್ ಸ್ಟೋರಿಯೂ ಒಂದು.

ಮೂರು ವಾರ ಸೈಲೆಂಟ್ ಆಗಿದ್ದ ವೈಷ್ಣವಿ ನಾಲ್ಕನೇ ವಾರದಿಂದ ಭರ್ಜರಿ ಕಮ್ ಬ್ಯಾಕ್ ಮಾಡಿದ್ದಾರೆ. ತಮ್ಮ ಜೀವನದ ಕುತೂಹಲಕಾರಿ ಸಂಗತಿ ಬಗ್ಗೆ ಹೇಳಿಕೊಳ್ಳಲು ಬಿಗ್ ಬಾಸ್ ಅವಕಾಶ ಕೊಟ್ಟಾಗ ಯಾರಿಗೂ ತಿಳಿಯದ ತಮ್ಮ ಜೀವನದ ಒನ್ ಸೈಡ್ ಪ್ರೇಮ ಕಥೆಯನ್ನು ಬಿಚ್ಚಿಟ್ಟರು.

ಜಿಮ್‌ನಲ್ಲಿ ಲವ್ ಅಟ್ ಫಸ್ಟ್ ಸೈಟ್: ಚಿಕ್ಕ ವಯಸ್ಸಿನಿಂದಲೂ ಲವ್ ಮಾಡಬೇಕು, ರಿಲೇಶನ್‌ಶಿಪ್‌ನಲ್ಲಿ ಇರಬೇಕು ಎಂಬ ಆಸೆ ಇತ್ತು. ನನ್ನ ಸ್ನೇಹಿತರಲ್ಲಿ ಹಲವರಿಗೆ ಮದುವೆ ಆಗಿತ್ತು. ಮತ್ತೆ ಕೆಲವರು ರಿಲೇಶನ್‌ಶಿಪ್‌ನಲ್ಲಿ ಇದ್ದರು. ಆದರೆ, ನನಗೆ ಮಾತ್ರ ಸಾಧ್ಯವಾಗಿರಲಿಲ್ಲ. ನನಗೇನು ಕಮ್ಮಿಯಾಗಿದೆ ಎಂದು ಪ್ರಯತ್ನ ಮಾಡುತ್ತಿದ್ದೆ.

ಜೀಮ್‌ಗೆ ಹೋಗುತ್ತಿದ್ದಾಗ ಒಬ್ಬ ಹುಡುಗನನ್ನು ನೋಡಿದೆ. ಅವರೇ ನನ್ನ ಬಾಳಸಂಗಾತಿ ಆಗಬೇಕೆಂದು ಫಿಕ್ಸ್ ಆಗಿಬಿಟ್ಟೆ. ಅವರು ಬಾಕ್ಸಿಂಗ್ ಪ್ರಾಕ್ಟಿಸ್ ಮಾಡುತ್ತಿದ್ದರು. ನಾನು, ನೃತ್ಯ ಪ್ರಾಕ್ಟಿಸ್ ಮಾಡುತ್ತಿದ್ದೆ. ನನ್ನ ಕಡೆ ನೋಡಿ ನೀವು ಆಕ್ಟರಾ ಎಂದು ಕೇಳಿದರು. ಹೌದು, ಎಂದು ಉತ್ತರಿಸಿದೆ. ಮೊದಲ ನೋಟದಲ್ಲೇ ಪ್ರೇಮ ಚಿಗುರಿತ್ತು.

ಒಂದು ದಿನ ಅವರಿಗಾಗಿ ಕಾಯುತ್ತ ಡ್ಯಾನ್ಸ್ ಪ್ರಾಕ್ಟಿಸ್ ಮಾಡುತ್ತಿದ್ದೆ. ಅವರದೇ ಧ್ಯಾನ ಮಾಡುತ್ತಾ ಬಿದ್ದು ಗಾಯ ಮಾಡಿಕೊಂಡೆ. ವೈದ್ಯರು ರೆಸ್ಟ್ ಹೇಳಿದ್ದರು. ಕೆಲ ದಿನಗಳ ಬಳಿಕ ಒಂದು ದಿನ ಅಪ್ಪನ ಜೊತೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಆ ಹುಡುಗ ಮತ್ತೊಂದು ಹುಡುಗಿ ಜೊತೆ ಕೈಹಿಡಿದು ಸಾಗುವುದನ್ನು ನೋಡಿದೆ. ಅದೇ ಕೊನೆ. ಆಮೇಲೆ ಸಿಗಲೇ ಇಲ್ಲ ಎಂದು ಹೇಳಿಕೊಂಡರು.

ಬೆಸ್ಟ್ ಪರ್ಫಾಮರ್: 4ನೇ ವಾರ ಪ್ರಶಾಂತ್ ಕಳಪೆ ಸ್ಪರ್ಧಿಯಾದರೆ ವೈಷ್ಣವಿ ಬೆಸ್ಟ್ ಪರ್ಫಾಮರ್ ಪಟ್ಟ ಗಿಟ್ಟಿಸಿಕೊಂಡಿದ್ದರು. ಮನೆಯಲ್ಲಿ ಟಾಸ್ಕ್‌ಗಳಲ್ಲಿನ ಅವರ ಪ್ರದರ್ಶನ. ಪ್ರಾಮಾಣಿಕತೆಗೆ ಈ ಹಿರಿಮೆ ಸಿಕ್ಕಿತು. ನಿನ್ನೆಯ ಫಿಸಿಕಲ್ ಟಾಸ್ಕ್‌ನಲ್ಲೂ ಅವರು ಅರವಿಂದ್, ರಾಜೀವ್‌ಗೆ ಸವಾಲು ಹಾಕಿ ಗೆದ್ದಿದ್ದಾರೆ.

ಮಂಜು ಮೌತ್ ಪೀಸ್ ಆಗಿದ್ದ ನಟಿ: ಮನೆಯಲ್ಲಿ ಮಂಜು ಹೆಚ್ಚು ಮಾತನಾಡುತ್ತಾರೆಂದು ಸ್ಪರ್ಧಿಗಳು ಹೇಳಿದ ಬಳಿಕ ಬಿಗ್ ಬಾಸ್ ಅವರಿಗೆ ಮೌನವಾಗಿರುವ ಶಿಕ್ಷೆ ಕೊಟ್ಟಿದ್ದರು. ಕಡಿಮೆ ಮಾತನಾಡುತ್ತಿದ್ದ ವೈಷ್ಣವಿಗೆ ಮಂಜು ಸನ್ನೆ ಮಾಡುವ ವಿಷಯಗಳನ್ನು ಮಾತಿನ ಮೂಲಕ ವ್ಯಕ್ತಪಡಿಸಲು ಹೇಳಿದ್ದರು. ಈ ಕೆಲಸವನ್ನು ಯಶಸ್ವಿಯಾಗಿ ಮಾಡಿದ ಅವರು ಮೆಚ್ಚುಗೆ ಪಡೆದುಕೊಂಡರು. ಸನ್ನೆಗಳ ಮೂಲಕ ಮಂಜು ಹೇಳಿದ ನಾಟಿ ಕೋಳಿ ಕದ್ದ ಕಥೆಯನ್ನು ಅರ್ಥ ಮಾಡಿಕೊಂಡು ಮನೆಯ ಸದಸ್ಯರ ಎದುರು ಪ್ರಸ್ತುತಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT