ಮಂಗಳವಾರ, ಸೆಪ್ಟೆಂಬರ್ 21, 2021
22 °C

Bigg Boss 8: ರನ್ನರ್ ಅಪ್ ಕೆ.ಪಿ. ಅರವಿಂದ್

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೈಕ್ ರೇಸರ್ ಕೆ.ಪಿ. ಅರವಿಂದ್ ಅವರು ಬಿಗ್ ಬಾಸ್ ಸೀಸನ್ 8 ರ ರನ್ನರ್ ಅಪ್ ಆಗಿದ್ದಾರೆ.

ಟಾಪ್ 2ರಲ್ಲಿದ್ದ ಅರವಿಂದ್  ಗೆಲ್ಲುವ ಅಭ್ಯರ್ಥಿ ಎಂದೇ ಎನಿಸಿಕೊಂಡಿದ್ದರು.ಆದರೆ, ಮತದಾರರ ತೀರ್ಪು ಬೇರೆಯಾಗಿತ್ತು. ರನ್ನರ್ ಅಪ್ ಕೆಪಿ. ಅರವಿಂದ್ ಅವರಿಗೆ 43,35,957 ಮತಗಳು ಬಿದ್ದಿದ್ದವು. ಸುಮಾರು 2 ಲಕ್ಷ ಮತಗಳ ಅಂತರದಿಂದ ಅರವಿಂದ್ ಮೊದಲ ಸ್ಥಾನ ಕಳೆದುಕೊಂಡಿದ್ದಾರೆ.

ಓದಿ: 

ಈ ಬಾರಿ ರನ್ನರ್ ಅಪ್ ಆದವರಿಗೂ 11 ಲಕ್ಷ ಬಹುಮಾನ ಸಿಕ್ಕಿರುವುದು ವಿಶೇಷ.

ಎರಡನೇ ಇನಿಂಗ್ಸ್ ನಲ್ಲಿ ಕುಸಿದ ಇಮೇಜ್: ಮೊದಲ ಇನಿಂಗ್ಸ್ ಗೆ ಹೋಲಿಸಿದರೆ ಎರಡನೇ ಇನಿಂಗ್ಸ್ ನಲ್ಲಿ ಅರವಿಂದ್ ಅವರ ಬಗೆಗಿನ ಅಭಿಪ್ರಾಯಕ್ಕೆ ಕೊಂಚ ಏಟು ಬಿದ್ದಿತ್ತು.

ನಿಧಿ ಸುಬ್ಬಯ್ಯ ಬಗ್ಗೆ ಅವಾಚ್ಯ ಶಬ್ದ ಬಳಕೆ, 3ನೇ ಬಾರಿ ನಾಯಕರಾಗುವ ವೇಳೆ ಅರವಿಂದ್, ಪ್ರಶಾಂತ್ ಸಂಬರಗಿ ಜೊತೆಗಿನ ಅನಗತ್ಯ ಟಾಕ್ ಫೈಟ್ ಎಲ್ಲರ ಗಮನ ಸೆಳೆದಿತ್ತು. ಗೆಲ್ಲುವುದರಲ್ಲಿ ಹೆಚ್ಚು ಗಮನ ಹರಿಸುತ್ತಿದ್ದ ಅವರು ನಿಯಮಗಳನ್ನು ಮರೆತರಾ ಎಂಬ ಪ್ರಶ್ನೆ ಎದ್ದಿತ್ತು. ಆದರೆ, ಸೀಸನ್ ಅಂತ್ಯದ ವೇಳೆಗೆ ಆ ಎಲ್ಲ ಗೊಂದಲಗಳಿಂದ ಹೊರಬಂದ ಅರವಿಂದ್, ಶಾಂತಚಿತ್ತರಾಗಿ ಗಮನಸೆಳೆದರು. ತಮ್ಮ ಪ್ರತಿಸ್ಪರ್ಧಿ ಮಂಜು ಪಾವಗಡ ಅವರ ಜೊತೆಗಿನ ಅವರ ಒಡನಾಟ ಗಮನಾರ್ಹವಾಗಿತ್ತು. ಎಲ್ಲರ ಬಗ್ಗೆಯೂ ಪ್ರೀತಿ, ಗೌರವ ವ್ಯಕ್ತಪಡಿಸುತ್ತಿದ್ದ ಅವರ ನಡೆ ಮೆಚ್ಚುಗೆಗೆ ಪಾತ್ರವಾಗಿತ್ತು.

ಅರವಿಂದ್ ಕೆ.ಪಿ: ಅರವಿಂದ್ ಕೆ.ಪಿ.ಅಂತರಾಷ್ಟ್ರೀಯಮಟ್ಟದ ರೇಸ್‌ ಬೈಕ್ ರೈಡರ್‌. ವಿವಿಧ ಮಟ್ಟದ ಬೈಕ್ ರೇಸ್‌ಗಳಲ್ಲಿ 17 ರಾಷ್ಟ್ರೀಯ ಮತ್ತು ಒಂದು ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಗೆದ್ದು ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಮಲಯಾಳಂ ಚಿತ್ರ ‘ಬೆಂಗಳೂರು ಡೇಸ್‌’ನಲ್ಲೂ ನಟಿಸಿದ್ದಾರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು