ಕನ್ನಡದ ಬಿಗ್ಬಾಸ್ ಮನೆಯಿಂದ ಕಳೆದ ವಾರ ಅಭಿಷೇಕ್ ಶ್ರೀಕಾಂತ್ ಅವರು ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಕ್ಯಾಪ್ಟನ್ ಆಗಿರುವಾಗಲೇ ಬಿಗ್ಬಾಸ್ ಮನೆಯಿಂದ ಹೊರಬಂದು ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ಬಿಗ್ಬಾಸ್ನಿಂದ ಆಚೆ ಬಂದಿರುವ ಅಭಿಷೇಕ್ ಶ್ರೀಕಾಂತ್ ಅವರನ್ನು ಕುಟುಂಬಸ್ಥರು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ.

ಇದೇ ವಿಡಿಯೊವನ್ನು ನಟ ಅಭಿಷೇಕ್ ಶ್ರೀಕಾಂತ್ ತಮ್ಮ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅದರ ಜೊತೆಗೆ ಬಿಗ್ಬಾಸ್ ಪಯಣದ ಕುರಿತು ಮೆಲುಕು ಹಾಕಿದ್ದಾರೆ.
.BBK12: ಬಿಗ್ಬಾಸ್ ಮನೆಗೆ ಬರುತ್ತಿದ್ದಂತೆ ಬದಲಾಯ್ತು ಚೈತ್ರಾ ಕುಂದಾಪುರ ಅದೃಷ್ಟ.ಬಿಷ್ಣೋಯಿ ಗ್ಯಾಂಗ್ನಿಂದ ಬಿಗ್ಬಾಸ್ ಸ್ಪರ್ಧಿಗೂ ಕೊಲೆ ಬೆದರಿಕೆ: ಕಾರಣವೇನು?.
ಅಭಿಷೇಕ್ ಶ್ರೀಕಾಂತ್ ಪೋಸ್ಟ್ನಲ್ಲಿ ಏನಿದೆ?

‘ಬಿಗ್ಬಾಸ್ ಮನೆಯಲ್ಲಿ ಕಳೆದ ಈ ಪ್ರಯಾಣಕ್ಕೆ, ನೀವು ತೋರಿಸಿದ ಅಪಾರ ಪ್ರೀತಿ ಮತ್ತು ಬೆಂಬಲಕ್ಕೆ ಹೃದಯಪೂರ್ವಕ ಧನ್ಯವಾದಗಳು. ಯಾವ ಪರಿಸ್ಥಿತಿ ಬಂದರೂ ನಾನು ನನ್ನ ಶಾಂತತೆ ಹಾಗೂ ನಿಜವಾದ ಸ್ವಭಾವವನ್ನು ಕಳೆದುಕೊಳ್ಳದೇ ಇರಲು ಪ್ರಯತ್ನಿಸಿದೆ. ಪ್ರತಿ ಟಾಸ್ಕ್ನಲ್ಲಿ ನಿಮ್ಮನ್ನು ಮನರಂಜಿಸಲು ನನ್ನ 100% ಶ್ರಮ ನೀಡಿದೆ. ನಾಟಕ ಮಾಡದೆ, ಮುಖವಾಡ ಹಾಕದೆ, ನನ್ನ ನಾನಾಗಿಯೇ ಇರುವುದೇ ನನ್ನ ಗುರಿ. ಈ ನಿಜವಾದ ನನ್ನನ್ನು ನೀವು ಸ್ವೀಕರಿಸಿ ಪ್ರೀತಿಸಿದದ್ದು ಇದೇ ನನ್ನ ದೊಡ್ಡ ಗೆಲುವು ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.

ಇನ್ನು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಲಕ್ಷಣ’ ಧಾರಾವಾಹಿಯಲ್ಲಿ ಮೌರ್ಯ ಪಾತ್ರದಲ್ಲಿ ಅಭಿಷೇಕ್ ಶ್ರೀಕಾಂತ್ ನಟಿಸಿದ್ದರು. ಈ ಮೂಲಕವೇ ನಟ ಅಭಿಷೇಕ್ ಮನೆಮಾತಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.