ಕನ್ನಡದ ಬಿಗ್ಬಾಸ್ 12ನೇ ಆವೃತ್ತಿ 94ನೇ ದಿನಕ್ಕೆ ಕಾಲಿಟ್ಟಿದೆ. 14ನೇ ವಾರದಲ್ಲಿ ಗಿಲ್ಲಿ ನಟ ಬಿಗ್ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಕ್ಯಾಪ್ಟನ್ ಆಗಿರುವ ಗಿಲ್ಲಿಯ ಮಾತಿಗೆ ಅಶ್ವಿನಿ ಗೌಡ ಹಾಗೂ ಧ್ರುವಂತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ ಗಿಲ್ಲಿಗೆ ಧ್ರುವಂತ್ ಮತ್ತು ಅಶ್ವಿನಿ ಗೌಡ ಏಟಿಗೆ ಎದುರೇಟು ಕೊಟ್ಟಿದ್ದಾರೆ. ಅಲ್ಲದೇ ಗಿಲ್ಲಿಗೆ ಅಶ್ವಿನಿ ಗೌಡ ಅಖಾಡಕ್ಕೆ ಬರುವಂತೆ ತೊಡೆ ತಟ್ಟಿ ಸವಾಲು ಹಾಕಿದ್ದಾರೆ.

ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಅಶ್ವಿನಿ ಗೌಡ ಹಾಗೂ ಧ್ರುವಂತ್ ಇಬ್ಬರು ಜೊತೆಯಾಗಿ ಗಿಲ್ಲಿ ನಟನ ವಿರುದ್ಧ ತಿರುಗಿಬಿದ್ದಿದ್ದಾರೆ. ಗಾರ್ಡನ್ ಏರಿಯಾದಲ್ಲಿ ಧ್ರುವಂತ್ ಮತ್ತು ಅಶ್ವಿನಿ ಗೌಡ ದೂರದಲ್ಲಿ ಕುಳಿತುಕೊಂಡಿದ್ದರು. ಆಗ ಗಿಲ್ಲಿ ಈ ಇಬ್ಬರ ಬಗ್ಗೆ ವ್ಯಂಗ್ಯವಾಗಿ ಮಾತನಾಡುತ್ತಾರೆ. ಇದರಿಂದ ಇಬ್ಬರು ಕೋಪಗೊಳ್ಳುತ್ತಾರೆ.
.BBK12 | ಉಸ್ತುವಾರಿನೇ ಸರಿಯಾಗಿರಲಿಲ್ಲ: ರಾಶಿಕಾಗೆ ಕಿಚ್ಚ ಸುದೀಪ್ ತರಾಟೆ.ಕ್ಯಾಪ್ಟನ್ ಆಗುತ್ತಿದ್ದಂತೆ ಬದಲಾದ ಗಿಲ್ಲಿ ನಟ: ಕೆಲಸ ಮಾಡದಿರೋ ಅಶ್ವಿನಿಗೆ ತರಾಟೆ.
ಇನ್ನು ಮಾತಿನ ಬರದಲ್ಲಿ ಅಶ್ವಿನಿ ಗೌಡ ‘ಸೊಂಟ ಇಲ್ಲದವನು ಗಿಲ್ಲಿ‘ ಎಂದು ಹೇಳಿದ್ದಾರೆ. ‘ಏಯ್ ಬೆನ್ನುಮೂಳೆ ಇಲ್ಲದವನೆ, ನನ್ನನ್ನು ಕೆಣಕಬೇಡ ಅಂತ ಸಾವಿರ ಸಲ ಹೇಳಿದ್ದೇನೆ. ನಿನ್ನ ಸಮಯ ಆರಂಭವಾಗಿದೆ. ಅಖಾಡಕ್ಕೆ ಬಾರೋ ಎಂದು ತೊಡೆ ತಟ್ಟಿ ಅಶ್ವಿನಿ ಗೌಡ ಸವಾಲು ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.