ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bigg Boss 8: ಇತಿಹಾಸದಲ್ಲೇ ದಾಖಲೆ.. ಸ್ಪರ್ಧಿಗಳಿಗೆ ಬಿದ್ದ ಮತಗಳೆಷ್ಟು?

Last Updated 9 ಆಗಸ್ಟ್ 2021, 6:22 IST
ಅಕ್ಷರ ಗಾತ್ರ

ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಸೀಸನ್ 8 ಹಲವು ಪ್ರಥಮಗಳಿಗೆ ಸಾಕ್ಷಿಯಾಗಿದೆ. ಕೊರೊನಾದಿಂದ ಅರ್ಧಕ್ಕೇ ನಿಂತಿದ್ದ ಕಾರ್ಯಕ್ರಮ 48 ದಿನಗಳ ಬಳಿಕ ಪುನಾರರಂಭಗೊಂಡಿತ್ತು. ಈ ವರ್ಷ ಸ್ಪರ್ಧಿಗಳಿಗೆ ಬಿದ್ದ ದಾಖಲೆಯ ಮತಗಳನ್ನು ಬಹಿರಂಗಪಡಿಸಿದ್ದು, ಮತ್ತೊಂದು ವಿಶೇಷ.

ಈ ಸೀಸನ್‌ನ ಬಿಗ್ ಬಾಸ್ ರಿಯಾಲಿಟಿ ಶೋ ಮೇಲೆ ಕೊರೊನಾ ಕಪ್ಪುಛಾಯೆ ಮೂಡಿತ್ತು. ಕೋವಿಡ್ ನಿಯಮಗಳಿಂದಾಗಿ ಚಿತ್ರೀಕರಣ ಬಂದ್ ಆಗಿತ್ತು. ಮನೆಯ ಸದಸ್ಯರನ್ನೆಲ್ಲ ಮನೆಯಿಂದ ಹೊರಗೆ ಕರೆಯಲಾಗಿತ್ತು. 78ನೇ ದಿನಕ್ಕೆ ನಿಂತಿದ್ದ ಶೋ 48 ದಿನಗಳ ಗ್ಯಾಪ್ ಬಳಿಕ ಮತ್ತೆ ಆರಂಭವಾಗಿದ್ದು ಬಿಗ್ ಬಾಸ್ ಇತಿಹಾಸದಲ್ಲೇ ಮೊದಲು.

ಮನೆಗೆ ತೆರಳಿ ತಮ್ಮ ಬಗ್ಗೆ ಇತರೆ ಸ್ಪರ್ಧಿಗಳ ಅಭಿಪ್ರಾಯ ಏನು ಎಂದು ಟಿವಿಯಲ್ಲಿ ನೋಡಿದ್ದ ಸ್ಪರ್ಧಿಗಳಿಂದಾಗಿ ಎರಡನೇ ಇನಿಂಗ್ಸ್ ಮತ್ತಷ್ಟು ಕಾವು ಪಡೆದಿತ್ತು. ಹಾಗಾಗಿಯೇ, ವೀಕ್ಷಕರ ಮತಗಳ ಸಂಖ್ಯೆಯೂ ದಾಖಲೆಯ ಮಟ್ಟಕ್ಕೆ ಏರಿದೆ.

ಲಕ್ಷ ಲಕ್ಷ ಮತಗಳು: ಟಾಪ್ 5ರಲ್ಲಿದ್ದ ಐವರು ಸ್ಪರ್ಧಿಗಳ ಪೈಕಿ 4ನೇ ರನ್ನರ್ ಅಪ್‌ ಪ್ರಶಾಂತ್ ಸಂಬರಗಿಯಿಂದ ಹಿಡಿದು ವಿಜೇತ ಮಂಜು ಪಾವಗಡವರೆಗೆ ಲಕ್ಷ ಲಕ್ಷ ಮತಗಳು ಬಿದ್ದಿವೆ. ನಾಲ್ಕನೇ ರನ್ನರ್ ಅಪ್ ಪ್ರಶಾಂತ್ ಸಂಬರಗಿಗೆ 6,69,020 ಮೂರನೇ ರನ್ನರ್ ಅಪ್ ವೈಷ್ಣವಿಗೆ 10,21,831 ಮತ್ತು 2ನೇ ರನ್ನರ್ ಅಪ್ ದಿವ್ಯಾ ಉರುಡುಗ ಅವರಿಗೆ 11,61,205 ಮತಗಳು ಬಿದ್ದಿವೆ.

ಮಂಜು–ಅರವಿಂದ್‌ಗೆ ಬಿದ್ದ ದಾಖಲೆಯ ಮತಗಳು: ನಿರೂಪಕ ಸುದೀಪ್ ಅವರೇ ಹೇಳಿದ ಹಾಗೆ, ಯಾವುದೇ ಲೋಕಸಭಾ ಚುನಾವಣೆಗೂ ಕಡಿಮೆ ಇಲ್ಲದಂತೆ ಇವರಿಬ್ಬರಿಗೂ ಮತ ಬಿದ್ದಿವೆ. ಇವರಿಬ್ಬರನ್ನೂ ಜನ ಸಮಾನವಾಗಿ ಪ್ರೀತಿಸಿ ಮತ ಹಾಕಿದ್ದಾರೆ.

ವಿನ್ನರ್ ಮಂಜು ಪಾವಗಡ 45,03,495 ಮತಗಳನ್ನು ಪಡೆದರೆ, ಕೆ.ಪಿ. ಅರವಿಂದ್ ಅವರು 43,35,957 ಮತಗಳನ್ನು ಪಡೆದು ಹೊಸ ದಾಖಲೆ ಬರೆದಿದ್ದಾರೆ.

ಇವುಗಳನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT