ಭಾನುವಾರ, ಸೆಪ್ಟೆಂಬರ್ 19, 2021
29 °C

ಬಿಗ್ ಬಾಸ್ ರನ್ನರ್ ಅಪ್ ಕೆ.ಪಿ. ಅರವಿಂದ್ ಮೊದಲ ಪ್ರತಿಕ್ರಿಯೆ ಹೀಗಿತ್ತು..

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಸೀಸನ್ 8ರ ರನ್ನರ್ ಅಪ್. ಬೈಕ್ ರೇಸರ್ ಕೆ.ಪಿ. ಅರವಿಂದ್ ಫಿನಾಲೆ ಮುಗಿದ ಬಳಿಕ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

ಖಾಸಗಿ ಕಂಪನಿಯ ಬೈಕ್ ರೇಸ್ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಲೈವ್ ಸಂವಾದದಲ್ಲಿ ಭಾಗವಹಿಸಿದ್ದ ಅವರು, ಇಂಗ್ಲೀಷ್‌ನಲ್ಲಿ ಮಾತನಾಡಿದ್ದರು. ಕನ್ನಡದಲ್ಲಿ ಮಾತನಾಡುವಂತೆ ಅಭಿಮಾನಿಗಳ ಒತ್ತಾಯಕ್ಕೆ ಉತ್ತರಿಸಿದ ಅವರು, ಅಂತಿಮ ಭಾಗದಲ್ಲಿ ಕನ್ನಡದಲ್ಲೇ ಮಾತನಾಡಿದರು. ದಯವಿಟ್ಟು ಬೇಸರ ಮಾಡಿಕೊಳ್ಳಬೇಡಿ. ಇಲ್ಲಿ ಬೇರೆ ಬೇರೆ ಭಾಷೆ ಮಾತನಾಡುವವರೂ ಹೆಚ್ಚಾಗಿ ಇರುತ್ತಾರೆ. ಇದು ಬೈಕ್ ರೇಸ್‌ಗೆ ಸಂಬಂಧಿಸಿದ ಖಾತೆ ಆಗಿರುವುದರಿಂದ ಇಂಗ್ಲೀಷಲ್ಲೇ ಮಾತನಾಡಬೇಕಾಯಿತು ಎಂದು ಹೇಳಿದರು.

ಇದನ್ನೂ ಓದಿ.. ಫಿನಾಲೆಯಲ್ಲಿ ಮಂಜು ತೊಟ್ಟಿದ್ದ ಉಡುಪು ಖ್ಯಾತ ನಟಿಯ ಗಿಫ್ಟ್.. ಯಾರು ಆ ನಟಿ?

ಲೈವ್ ಸಂವಾದದಲ್ಲಿ ನನ್ನ ಚಿತ್ರಗಳೇ ಇರುವ ಹಲವು ಖಾತೆಗಳನ್ನು ಗಮನಿಸಿದೆ. ನಿಮ್ಮ ಪ್ರೀತಿ ಅಪಾರವಾದದ್ದು, ಅದನ್ನು ನಾನು ಎಂದೆಂದಿಗೂ ಮರೆಯುವುದಿಲ್ಲ. ನಿಮ್ಮಿಂದಲೇ ನಾನು ಇಲ್ಲಿಯವರೆಗೂ ಬಂದಿದ್ದೇನೆ. ಕೋವಿಡ್ ಪ್ರೋಟೊಕಾಲ್‌ಗಳನ್ನು ಫಾಲೋ ಮಾಡಿ. ಸೇಫ್ ಆಗಿರಿ. ಪ್ರೀತಿ ಇರಲಿ ಎಂದು ಅರವಿಂದ್ ಹೇಳಿದ್ದಾರೆ.

ಬಿಗ್ ಬಾಸ್ ಸೀಸನ್ 8ರಲ್ಲಿ ಗೆಲ್ಲುವ ಸ್ಪರ್ಧಿ ಎಂದೇ ಹೆಸರಾಗಿದ್ದ ಅರವಿಂದ್ ಕೆ.ಪಿ 43 ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದು ಒಂದೂವರೆ ಲಕ್ಷಕ್ಕೂ ಅಧಿಕ ಅಂತರದಿಂದ ಗೆಲುವನ್ನು ಮಿಸ್ ಮಾಡಿಕೊಂಡಿದ್ದರು. ಆದರೆ, ಬೈಕ್ ರೇಸರ್ ಆಗಿದ್ದು, ಕಿರುತೆರೆ ಕಾರ್ಯಕ್ರಮದಲ್ಲಿ ಮಿಂಚಿದ್ದು ಅದ್ಬುತ ಸಾಧನೆ ಎಂದು ನಿರೂಪಕ ಕಿಚ್ಚ ಸುದೀಪ್ ಸೇರಿದಂತೆ ಹಲವರು ಕೊಂಡಾಡಿದ್ದರು.

ವಿನ್ನರ್ ಮಂಜು ಪಾವಗಡ ಸಹ ಅರವಿಂದ್ ಅವರು ನನಗೆ ಸ್ಫೂರ್ತಿ ಎಂದು ಹೇಳಿದ್ದರು.
 
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು