ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Bigg Boss Kannada–10: ಹೊಸ ಮನೆ ನಿರ್ಮಾಣ–ವಿಡಿಯೊ ನೋಡಿ

Published 6 ಅಕ್ಟೋಬರ್ 2023, 7:17 IST
Last Updated 6 ಅಕ್ಟೋಬರ್ 2023, 7:17 IST
ಅಕ್ಷರ ಗಾತ್ರ

ಬೆಂಗಳೂರು: ಇದೇ 8 ರಿಂದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್‌ ಕನ್ನಡ 10 ನೇ ಆವೃತ್ತಿ ಆರಂಭವಾಗುತ್ತಿದೆ. ಇದಕ್ಕಾಗಿ ಬೆಂಗಳೂರಿನ ದೊಡ್ಡ ಆಲದ ಮರದ ಬಳಿ ಹೊಸದಾಗಿ ಮನೆಯನ್ನು ನಿರ್ಮಾಣ ಮಾಡಲಾಗಿದೆ. 

ಕಲರ್ಸ್‌ ಕನ್ನಡ ಬಿಗ್‌ಬಾಸ್‌ ಸೀಸನ್‌10ರ ಮನೆ ನಿರ್ಮಾಣದ ಬಗೆಗಿನ ವಿಡಿಯೊವನ್ನು ಹಂಚಿಕೊಂಡಿದೆ. 

‘ಬಿಗ್ ಬಾಸ್ ಕನ್ನಡ ಸೀಸನ್ ಹತ್ತು - ಸ್ಪೆಷಲ್ ಸೀಸನ್ನಿಗೆ ಮನೆಯೂ ಸ್ಪೆಷಲ್!’ ಎಂದು ಕ್ಯಾಪ್ಶನ್‌ ನೀಡಿದ್ದು, ಮನೆಯ ಒಳಗೆ ಹೇಗಿರಲಿದೆ ಎನ್ನುವ ಪೂರ್ಣ ದೃಶ್ಯವನ್ನು ತೋರಿಸಲಿಲ್ಲ. 

ಕಿಚ್ಚ ಸುದೀಪ್‌ ನಿರೂಪಣೆಯ ಈ ಶೋ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರತಿ ರಾತ್ರಿ 9.30ರಿಂದ ಪ್ರಸಾರಗೊಳ್ಳಲಿದೆ. ಹಿಂದಿನ ಸೀಸನ್‌ಗಳಂತೆ ವಾರಾಂತ್ಯದ ಸಂಚಿಕೆಗಳಲ್ಲಿ ಸುದೀಪ್‌ ಕಾಣಿಸಿಕೊಳ್ಳಲಿದ್ದಾರೆ.

ಇಷ್ಟು ವರ್ಷ ಬಿಗ್‌ಬಾಸ್‌ ಇನೋವೆಟೀವ್‌ ಫಿಲ್ಮ್‌ ಸಿಟಿಯಲ್ಲಿ ನಡೆಯುತ್ತಿತ್ತು. ಆದರೆ ಈ ವರ್ಷ ದೊಡ್ಡ ಆಲದಮರದ ಬಳಿಯಲ್ಲಿನ ಹೊಸ ಮನೆಯಲ್ಲಿ ನಡೆಯಲಿದ್ದು, ಭಾರತದಲ್ಲಿ ಇರುವ ಅತಿದೊಡ್ಡ ‘ಬಿಗ್ ಬಾಸ್’ ಮನೆ ಎನ್ನುವ ಖ್ಯಾತಿ ಇದಕ್ಕೆ ಲಭಿಸಿದೆ. ನಾಲ್ಕು ತಿಂಗಳ ಕಾಲ ಹಗಲು-ರಾತ್ರಿ ಶ್ರಮ ಹಾಕಿ ಈ ಮನೆ ನಿರ್ಮಾಣ ಮಾಡಲಾಗಿದೆ. ಜೊತೆಗೆ ನಮ್ಮ ವಾಹಿನಿಯ ನಾನ್‌ಫಿಕ್ಷನ್‌ ವಿಭಾಗದ ಮುಖ್ಯಸ್ಥ ಪ್ರಕಾಶ್‌  ಈ ಸಲ ಶೋ ನಿರ್ದೇಶನ ಮಾಡಲಿದ್ದಾರೆ’ ಎಂದು ಕಲರ್ಸ್‌ ಕನ್ನಡ ವಾಹಿನಿ ಹೆಡ್‌ ಪ್ರಶಾಂತ್‌ ನಾಯಕ್‌ ಈ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.

ಈ ವರ್ಷ ಜಿಯೋ ಸಿನಿಮಾದಲ್ಲಿ 24 ಗಂಟೆಗಳ ಕಾಲವೂ ಬಿಗ್‌ಬಾಸ್‌ ಲೈವ್‌ ಅನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT