ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bigg Boss 8: ಕ್ಯಾಪ್ಟನ್ ಆದ ಮೊದಲ ಮಹಿಳೆ: ಸಂಬರಗಿ–ಚಂದ್ರಚೂಡ್ ಬಿಗ್ ಫೈಟ್

ಅಕ್ಷರ ಗಾತ್ರ

ಬೆಂಗಳೂರು: ನಮ್ಮಲ್ಲೂ ಒಬ್ಬರು ಕ್ಯಾಪ್ಟನ್ ಆಗಬೇಕು ಎಂಬ ಬಿಗ್‌ ಬಾಸ್ ಮನೆಯ ಮಹಿಳಾ ಸದಸ್ಯರ ಬಹುದಿನಗಳ ಆಸೆ ಕೊನೆಗೂ ಈಡೇರಿದೆ. ಎರಡನೇ ಇನ್ನಿಂಗ್ಸ್‌ನ 10ನೇ ದಿನ ಟಾಸ್ಕ್ ಗೆದ್ದ ದಿವ್ಯಾ ಉರುಡುಗ ನಾಯಕಿ ಪಟ್ಟಕ್ಕೆ ಏರಿದ್ದಾರೆ.

ಕ್ಯಾಪ್ಟನ್ಸಿ​ ಟಾಸ್ಕ್‌ನಲ್ಲಿ ಗೆದ್ದ ದಿವ್ಯಾ: ಕ್ಯಾಪ್ಟನ್ಸಿ ಟಾಸ್ಕ್‌ಗೆ ಅರ್ಹತೆ ಗಿಟ್ಟಿಸಿದ್ದ ಸೂರ್ಯ ಸೇನಾ ತಂಡದ ಅರವಿಂದ್, ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ್, ಶಮಂತ್ ವೈಷ್ಣವಿಯವರು ಉರುಡುಗಗೆ ಪೈಪೋಟಿ ಒಡ್ಡಿದ್ದರು. ಮೇಕಪ್ ಕೊಠಡಿಯಲ್ಲಿ ಸ್ಪರ್ಧಿಗಳು ಹೆಚ್ಚು ಹೆಚ್ಚು ಬಟ್ಟೆಗಳನ್ನು ಹಾಕಿಕೊಳ್ಳುವ ಸ್ಪರ್ಧೆ ನೀಡಲಾಗಿತ್ತು. ಇದರಲ್ಲಿ 84ಕ್ಕೂ ಅಧಿಕ ಬಟ್ಟೆಗಳನ್ನು ತೊಟ್ಟ ದಿವ್ಯಾ ಉರುಡುಗ ಗೆಲುವು ಸಾಧಿಸಿದರು. 64 ಬಟ್ಟೆ ಹಾಕಿಕೊಂಡಿದ್ದ ವೈಷ್ಣವಿ ಸಮೀಪದ ಪ್ರತಿಸ್ಪರ್ಧಿಯಾಗಿದ್ದರು. ಈ ಹಿಂದೆ, ನಾನೇ ಮನೆಯ ಮೊದಲ ಮಹಿಳಾ ನಾಯಕಿ ಆಗಬೇಕೆಂಬ ಅಭಿಲಾಷೆ ವ್ಯಕ್ತಪಡಿಸಿದ್ದ ದಿವ್ಯಾ ಇದೀಗ ತಮ್ಮ ಆಸೆ ಪೂರೈಸಿಕೊಂಡಿದ್ದಾರೆ.

ಚಕ್ರವರ್ತಿ–ಪ್ರಶಾಂತ್ ಫೈಟ್: ಕ್ಯಾಪ್ಟನ್ಸಿ ಕಂಟೆಸ್ಟೆಂಟ್‌ನ ಟಾಸ್ಕ್‌ಗಳ ಟೈ ಬ್ರೇಕರ್ ಟಾಸ್ಕ್‌ನಲ್ಲಿ ಪೇಪರ್‌ ಮೇಲೆ ತೆವಳಿಕೊಂಡು ಹೋಗಿ ಬಕೆಟ್‌ಗೆ ನೀರು ತುಂಬಿಸುವ ಟಾಸ್ಕ್ ಇತ್ತು. ಇದರಲ್ಲಿ ಶಮಂತ್ ಹೆಚ್ಚು ಫೌಲ್ ಮಾಡಿದನೆಂದು ಚಕ್ರವರ್ತಿ ಗರಂ ಆಗಿದ್ದರು. ಈ ಸಂದರ್ಭ ಮಧ್ಯಪ್ರವೇಶಿಸಿದ ಪ್ರಶಾಂತ್ ಸಂಬರಂಗಿ ವಿರುದ್ಧ ಕಿಡಿಕಾರಿದ ಚಂದ್ರಚೂಡ್ ಜಗಳಕ್ಕೆ ಇಳಿದರು. ಪ್ರಶಾಂತ್‌ನನ್ನು ನೂಕಿ ರಂಪಾಟ ಮಾಡಿದರು. ಭಾರೀ ಮಾತಿನ ಚಕಮಕಿ ನಡೆಯಿತು. ಈ ಹಿಂದಿನ ಟಾಸ್ಕ್‌ನಲ್ಲಿ ನೀವು ತಪ್ಪು ಮಾಡಿದಾಗ ನಾವು ಬೇರೆ ಏನಾದರೂ ಹೇಳಿದ್ದೆವಾ? ಎಂದು ದಿವ್ಯಾ ಉರುಡುಗ ತಿಳಿ ಹೇಳಿದ ಬಳಿಕ ಚಕ್ರವರ್ತಿ ತಣ್ಣಗಾದರು. ಹೇಳುವಷ್ಟು ಹೇಳಿ ಅರವಿಂದ್ ಮೂಕಪ್ರೇಕ್ಷಕರಾದರು.

ರಘು ಅತ್ಯುತ್ತಮ, ಶುಭಾ ಕಳಪೆ: ಮನೆಯಲ್ಲಿ ಈ ವಾರದ ಬೆಸ್ಟ್ ಮತ್ತು ಕಳಪೆ ಸದಸ್ಯರ ಆಯ್ಕೆ ನಡೆಯಿತು. ಯಾವಾಗಲೂ ಗಂಭೀರತೆ ಇಲ್ಲದೆ ನಡೆದುಕೊಳ್ಳುವ, ಕೆಲಸಗಳನ್ನು ನಿರ್ವಹಿಸದ ಶುಭಾ ಪೂಂಜಾ ಅವರ ಹೆಸರನ್ನು ಬಹುತೇಕರು ಸೂಚಿಸಿದರು. ಹೀಗಾಗಿ, ಬಿಳಿ ಬಟ್ಟೆ ತೊಟ್ಟು ಶುಭಾ ಪೂಂಜಾ ಮನೆಯ ಜೈಲು ಸೇರಿದರು.

ಇದೇವೇಳೆ, ಟಾಸ್ಕ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ರಘು ಅವರು ಈ ವಾರದ ಅತ್ಯುತ್ತಮ ಸ್ಪರ್ಧಿ ಪಟ್ಟ ಅಲಂಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT