ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bigg Boss 8: ‘ನೀನು ಮಾಡಿದ್ದು ತಪ್ಪು’: ಕೆ.ಪಿ. ಅರವಿಂದ್‌ಗೆ ಉರುಡುಗ ಕ್ಲಾಸ್

ಅಕ್ಷರ ಗಾತ್ರ

ಬೆಂಗಳೂರು: ಬಿಗ್ ಬಾಸ್ ಎರಡನೇ ಇನಿಂಗ್ಸ್‌ನ 9ನೇ ದಿನ ಸೂರ್ಯ ಸೇನಾ ತಂಡಕ್ಕೆ ತಿರುಗೇಟು ನೀಡಿದ ಕ್ವಾಟ್ಲೆ ಕಿಲಾಡಿಗಳು ಬ್ಯಾಕ್ ಟು ಬ್ಯಕ್ ಟಾಸ್ಕ್‌ಗಳಲ್ಲಿ ಗೆದ್ದು ಕ್ಯಾಪ್ಟೆನ್ಸಿ ಕಂಟೆಸ್ಟೆಂಟ್ ಸರಣಿ ಟಾಸ್ಕ್‌ಗಳಲ್ಲಿ ಸಮಬಲ ಸಾಧಿಸಿದೆ. ಈ ಮಧ್ಯೆ, ನಿಧಿ ಸುಬ್ಬಯ್ಯ ವಿರುದ್ಧ ಆಕ್ಷೇಪಾರ್ಹ ಪದ ಬಳಸಿದ ಕೆ.ಪಿ. ಅರವಿಂದ್‌ಗೆ ದಿವ್ಯಾ ಉರುಡುಗ ಬುದ್ಧಿ ಹೇಳಿದ್ದಾರೆ.

ನೀನು ಮಾಡಿದ್ದು ತಪ್ಪು: ರಿಂಗಾಯಣ ಟಾಸ್ಕ್‌ನಲ್ಲಿ ಅರವಿಂದ್ ನೇತೃತ್ವದ ಸೂರ್ಯ ಸೇನಾ 175 ಬಾರಿ ಚೆಂಡನ್ನು ಗುಂಡಿಗೆ ಹಾಕಿದ್ದರೂ ಸಹ 133 ಬಾರಿ ಬಾಲ್ ಹಾಕಿದ್ದ ಕ್ವಾಟ್ಲೆ ಕಿಲಾಡಿಗಳು ಜಯ ಗಳಿಸಿದ್ದರು. ಅತ್ಯಧಿಕ ಫೌಲ್ ಮಾಡಿದ್ದ ಅರವಿಂದ್ ನೇತೃತ್ವದ ತಂಡವು ಸೋಲೊಪ್ಪಿಕೊಳ್ಳಬೇಕಾಯಿತು. ಆಟ ಮುಗಿದ ಬಳಿಕ, ಆತ್ಮವಿಮರ್ಶೆ ಮಾಡಿಕೊಳ್ಳುವ ವೇಳೆ ತಂಡದ ಸದಸ್ಯರ ನಡವಳಿಕೆ ಬಗ್ಗೆ ದಿವ್ಯಾ ಉರುಡುಗ ಚಕಾರ ಎತ್ತಿದರು.

ಕೈಯಿಂದ ಬಿದ್ದ ಟಿಶೂ ರೋಲ್ ಎತ್ತಿಕೊಂಡ ನಿಧಿ ವಿರುದ್ಧ ಗಲಾಟೆ ತೆಗೆದಿದ್ದ ಅರವಿಂದ್, ಮಾತಿನ ಭರದಲ್ಲಿ ಮುಚ್ಕೊಳಿ ಎಂದಿದ್ದರು. ಇದನ್ನು ಪ್ರಸ್ತಾಪಿಸಿದ ದಿವ್ಯಾ ಉರುಡುಗ, ಒಂದೊಮ್ಮೆ ಮಂಜು ಪಾವಗಡ, ನನಗೆ ಆ ಪದ ಬಳಸಿದ್ದರೆ ನಾನು ಅಕ್ಸೆಪ್ಟ್ ಮಾಡುತ್ತಿರಲಿಲ್ಲ. ಅದೇ ರೀತಿ, ನೀವೂ ಸಹ ನಿಧಿ ವಿರುದ್ಧ ಆ ಪದ ಬಳಸಿದ್ದು ತಪ್ಪು ಎಂದು ನೇರಾನೇರ ಹೇಳಿದರು.

ಜೊತೆಗೆ, ಮ್ಯೂಸಿಕ್ ಕೇಳಿ ಹಾಡು ಗುರುತಿಸುವ ಟಾಸ್ಕ್‌ನಲ್ಲಿ ಅರವಿಂದ್, ಕ್ವಿಕ್ ಆಗಿ ಬಜರ್ ಒತ್ತದಿರುವ ಬಗ್ಗೆಯೂ ಉರುಡುಗ ಆಕ್ಷೇಪ ವ್ಯಕ್ತಪಡಿಸಿದರು. ಹಾಡು ಗೊತ್ತಿತ್ತೋ ಇಲ್ಲವೋ ಮಂಜು ಬಜರ್ ಒತ್ತುವುದರಲ್ಲಿ ಮುಂದಿದ್ದರು. ಹಾಗಾಗಿ, ಅವರಿಗೆ ಹೆಚ್ಚಿನ ಅವಕಾಶ ಸಿಕ್ಕಿ ಅವರು ಗೆದ್ದರು ಎಂದು ದಿವ್ಯಾ ಅಸಮಾಧಾನ ಹೊರ ಹಾಕಿದರು. ನಾವು ಸೋತೆವು. ಇದೇವೇಳೆ, ರಿಂಗಾಯಣ ಸ್ಪರ್ಧೆಯ ಫೌಲ್‌ಗಳ ಬಗ್ಗೆಯೂ ಬಾಲ್ ಇಡುತ್ತಿದ್ದ ಶಮಂತ್ ವಿರುದ್ಧ ಅಸಮಾಧಾನ ವ್ಯಕ್ತವಾಯ್ತು.

ಕಣ್ಣೀರು ಹಾಕಿದ ಅರವಿಂದ್: ತಮ್ಮ ನಡವಳಿಕೆ ಬಗ್ಗೆ ದಿವ್ಯಾ ಹೇಳಿದ ಬುದ್ಧಿ ಮಾತು ಕೇಳಿ ಕ್ಷಮೆಯಾಚಿಸಿದ ಅರವಿಂದ್, ಬಳಿಕ ಕಣ್ಣೀರು ಹಾಕಿದರು. ಮತ್ತೆ ಈ ರೀತಿ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದರು. ಈ ತಪ್ಪುಗಳನ್ನು ಬಿಟ್ಟರೆ ಅರವಿಂದ್ ನನ್ನ ಬೆಸ್ಟ್ ಕ್ಯಾಪ್ಟನ್ ಎಂದು ದಿವ್ಯಾ ಹುರುಪು ತುಂಬಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT