ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಗ್ ಬಾಸ್ ಮನೆ ಪಿಕ್‌ನಿಕ್‌ ಸ್ಪಾಟ್ ಅಲ್ಲ: ರೂಪೇಶ್ ​-ಸಾನ್ಯಾ​ಗೆ ಸುದೀಪ್ ಕ್ಲಾಸ್

Last Updated 16 ಅಕ್ಟೋಬರ್ 2022, 11:35 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ‘ಬಿಗ್‌ ಬಾಸ್‌ ಸೀಸನ್‌ 9’ರಲ್ಲಿ ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಐಯ್ಯರ್ ಜೋಡಿ ಹಲವು ವಿಚಾರಗಳಿಂದ ಗಮನ ಸೆಳೆದಿದೆ.

ಇದೀಗ ರೂಪೇಶ್ –ಸಾನ್ಯಾ ಜೋಡಿ ಬಿಗ್‌ ಬಾಸ್‌ ಮನೆಯಲ್ಲಿ ರೊಮ್ಯಾನ್ಸ್ ವಿಚಾರಕ್ಕೆ ಸುದ್ದಿಯಲ್ಲಿದೆ. ತಡರಾತ್ರಿವರೆಗೂ ಇವರಿಬ್ಬರೂ ಪದೇ ಪದೇ ತಬ್ಬಿಕೊಳ್ಳುವುದು, ಹೆಚ್ಚು ಮಾತನಾಡಿಕೊಂಡಿರುತ್ತಿದ್ದರು. ಇಬ್ಬರ ಮಧ್ಯೆ ರೊಮ್ಯಾನ್ಸ್ ಮಿತಿ ಮೀರಿದ ಹಿನ್ನೆಲೆಯಲ್ಲಿ ಕಿಚ್ಚ ಸುದೀಪ್ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚೆಗೆ ರೂಪೇಶ್ ಶೆಟ್ಟಿ, ಸಾನ್ಯಾ ಐಯ್ಯರ್ ಹಾಗೂ ಆರ್ಯವರ್ಧನ್ ಗುರೂಜಿ ಕ್ಯಾಪ್ಟನ್‌ ರೂಮ್‌ನಲ್ಲಿ ಕುಳಿತಿದ್ದರು. ಅಷ್ಟರಲ್ಲಾಗಲೇ ಆರ್ಯವರ್ಧನ್ ಅವರ ಕ್ಯಾಪ್ಟನ್‌ ಅವಧಿ ಮುಗಿದಿತ್ತು. ಆದರೂ ಕೂಡ ಕ್ಯಾಷ್ಟನ್‌ ರೂಮ್‌ ಬಳಕೆ ಮಾಡಿದ್ದರು. ಇದೇ ಸಂದರ್ಭದಲ್ಲಿ ರೂಪೇಶ್ ಮೈಮೇಲೆ ಸಾನ್ಯಾ ಮಲಗಿದ್ದರು. ಈ ವಿಡಿಯೊ ತುಣುಕನ್ನು ಕಲರ್ಸ್ ಕನ್ನಡ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ.

ಕ್ಯಾಪ್ಟನ್‌ ಅವಧಿ ಮುಗಿದ ನಂತರ ನೀವು ಪಿಕ್​ನಿಕ್ ಮಾಡ್ತಾ ಇದ್ದೀರಿ. ಆ ರೂಮ್‌ಗೆ ಒಂದು ಗೌರವ ಇದೆ. ಅದು ಪಿಕ್‌ನಿಕ್ ಸ್ಪಾಟ್​ ಅಲ್ಲ’ ಎಂದು ಸುದೀಪ್ ಗುಡುಗಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ರೂಪೇಶ್, ‘ನಮ್ಮ ಉದ್ದೇಶ ಆ ರೀತಿ ಇರಲಿಲ್ಲ. ನಾನು ಯಾವಾಗಲೂ ಆ ರೀತಿ ಮಾಡಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.

‘ನೀವು ಮಿತಿಮೀರಿ ನಡೆದುಕೊಂಡಿದ್ದೀರಿ. ಆ ರೀತಿ ಆಗಿದ್ದರಿಂದಲೇ ನಾವು ಹೇಳ್ತಿರೋದು. ನೀವು ಮಧ್ಯರಾತ್ರಿಯಲ್ಲಿ ಹಗ್ (ತಬ್ಬಿಕೊಳ್ಳುವುದು) ಮಾಡಿಕೊಳ್ತೀರಿ. ಅದಕ್ಕೆ ನಾವು ಯಾವಾಗಲೂ ಅಪಸ್ವರ ತೆಗೆದಿಲ್ಲ. ಅದು ಇಲ್ಲಿ ಸಮಸ್ಯೆ ಅಲ್ಲ. ಈ ಮೊದಲು ಅನೇಕರು ಈ ಮನೆಯಲ್ಲಿ ಆಪ್ತವಾಗಿದ್ದರು. ಆದರೆ, ಈಗ ಇದನ್ನು ಹೇಳ್ತಿದೀವಿ ಎಂದರೆ ಅರ್ಥ ಮಾಡಿಕೊಳ್ಳಿ. ನೀವು ಈ ರೀತಿ ಮಾಡ್ತಾ ಇರುವುದರಿಂದಲೇ ನಮಗೆ ಕಟೆಂಟ್ ಸಿಗುತ್ತಿದೆ ಎಂದುಕೊಂಡರೆ ಈ ಮನೆ ಅದಕ್ಕಲ್ಲ’ ಎಂದು ಸುದೀಪ್ ವಿವರಿಸಿದ್ದಾರೆ.

ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT