ಬೆಂಗಳೂರು: ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಇಬ್ಬರು ಸ್ಪರ್ಧಿಗಳ ಪ್ರವೇಶವಾದ ಬಳಿಕ ಮನೆಯ ವಾತಾವರಣ ಬದಲಾಗಿದೆ. ತೆಲುಗು ಬಿಗ್ಬಾಸ್ನಲ್ಲಿ ಮಿಂಚಿದ್ದ ನಟಿ ಶೋಭಾ ಶೆಟ್ಟಿ ವೈಲ್ಡ್ ಕಾರ್ಡ್ ಮೂಲಕ ಮನೆಗೆ ಎಂಟ್ರಿ ಕೊಟ್ಟಿದ್ದರು. ಆದರೆ, ಈಗ ಮನೆಯಲ್ಲಿ ಇರಲು ಆಗುತ್ತಿಲ್ಲ ಎಂದು ಹೇಳಿದ್ದಾರೆ.

ಶೋಭಾ ಅವರು ನನಗೆ ಈ ಮನೆಯಲ್ಲಿ ಇರೋದಕ್ಕೆ ಆಗುತ್ತಿಲ್ಲ ಸರ್ ಎಂದು ಅಳುತ್ತಿರುವುದು ಇಂದು (ಭಾನುವಾರ) ಬಿಡುಗಡೆಯಾಗಿರುವ ಪ್ರೋಮೊ ವಿಡಿಯೊದಲ್ಲಿದೆ.

ಈ ವಾರದ ಕಿಚ್ಚನ ಪಂಚ್ತಾಯಿಯಲ್ಲಿ ಸುದೀಪ್ ಅವರು ಎಲಿಮಿನೇಷನ್ಗೆ ನಾಮಿನೇಟ್ ಆಗಿದ್ದ ಶೋಭಾ ಅವರಿಗೆ ನೀವು ಸೇಫ್ ಆಗಿದ್ದೀರಾ ಎಂದು ಹೇಳುತ್ತಾರೆ. ಇದಕ್ಕೆ ಉತ್ತರಿಸಿರುವ ಶೋಭಾ ಅಳುತ್ತಾ ಸರ್, ನನಗೆ ಈ ಮನೆಯಲ್ಲಿ ಇರೋದಕ್ಕೆ ಆಗ್ತಾ ಇಲ್ಲ ಎಂದು ಹೇಳಿದ್ದಾರೆ.

ಇದಕ್ಕೆ ಸುದೀಪ್ ಅವರು, ಅರ್ಥ ಮಾಡಿಕೊಳ್ಳಿ ನೀವು ಯಾಕೆ ಒಳಗೆ ಹೋಗಿದ್ದೀರಾ ಅಂತಾ. ನಿಮ್ಮನ್ನು ಸೇಫ್ ಮಾಡಿರುವ ಜನರ ನಂಬಿಕೆ ಮೇಲೆ ತಾವು ಈ ರೀತಿಯ ಉತ್ತರ ಕೊಡಬಾರದು ಎಂದಿದ್ದಾರೆ. ನಾನು ಜನರ ನಿರೀಕ್ಷೆಯನ್ನು ತಲುಪುವುದಕ್ಕೆ ಆಗೋದಿಲ್ಲ ಅಂತಾ ಅನ್ನಿಸುತ್ತಿದೆ ಎಂದು ಶೋಭಾ ಹೇಳಿದ್ದಾರೆ.

ಇದಕ್ಕೆ ಗರಂ ಆಗಿರುವ ಕಿಚ್ಚ ಹೊರಗಡೆ ಹೋಗಬೇಕಾ?, ನಿಮಗಾಗಿ ಬಾಗಿಲನ್ನು ತೆರೆಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಮನೆಯ ಮುಖ್ಯದ್ವಾರ ತೆರದುಕೊಂಡಿದೆ. ಶೋಭಾ ಅವರು ಮನೆಯಲ್ಲಿಯೇ ಉಳಿದುಕೊಳ್ಳುತ್ತಾರಾ? ಇಲ್ಲ ಮನೆಯಿಂದ ಹೊರಹೋಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಬಿಗ್ಬಾಸ್ ಮನೆಗೆ ಪ್ರವೇಶಿಸಿದ ಎರಡನೇ ವಾರವೇ ಶೋಭಾ ಅವರು ಕಳಪೆ ಪಟ್ಟ ಪಡೆದಿದ್ದಾರೆ.

ಈ ವಾರ ನಾಮಿನೇಷನ್ನಲ್ಲಿ ಚೈತ್ರಾ, ಶಿಶಿರ್, ಗೋಲ್ಡ್ ಸುರೇಶ್, ಭವ್ಯಾ, ತ್ರಿವಿಕ್ರಮ್ ಮತ್ತು ಐಶ್ವರ್ಯ ಇದ್ದಾರೆ. ಕಳೆದ ವಾರ ಧರ್ಮ ಅವರು ಮನೆಯಿಂದ ಎಲಿಮಿನೇಟ್ ಆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.