ಕನ್ನಡದ ಬಿಗ್ಬಾಸ್ 12ನೇ ಆವೃತ್ತಿ ನಿನ್ನೆಯಿಂದ (ಭಾನುವಾರ) ಆರಂಭವಾಗಿದೆ. ಒಟ್ಟು 19 ಸ್ಪರ್ಧಿಗಳು ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಸದ್ಯ ಬಿಗ್ಬಾಸ್ ಮನೆ 19 ಜನರಿಂದ ತುಂಬಿದೆ. ಈಗ ಮನೆಗೆ ಬಂದ ದಿನವೇ ಬಿಗ್ಬಾಸ್ ಸ್ಪರ್ಧಿಗಳಿಗೆ ಶಾಕ್ ಕೊಟ್ಟಿದ್ದಾರೆ.

ಬೆಳ್ಳಂಬೆಳಗ್ಗೆ ಕಲರ್ಸ್ ಕನ್ನಡ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಹಂಚಿಕೊಂಡಿದೆ. ಅದರಲ್ಲಿ ಸ್ಪರ್ಧಿಗಳಿಗೆ ಬಿಗ್ಬಾಸ್ ಏಕಾಏಕಿ ಶಾಕ್ ಕೊಟ್ಟಿದ್ದಾರೆ.

ಇದು ಬಿಗ್ ಬಾಸ್.. ನಾನು ಬಂದಿರೋ ಉದ್ದೇಶ ನಿಮಗೆ ಸ್ವಾಗತ ಮಾಡೋದಕ್ಕೆ ಅಲ್ಲ. ನಿಮ್ಮಲ್ಲಿ ಒಬ್ಬರಿಗೆ ವಿದಾಯ ಹೇಳೋದಕ್ಕೆ ಎಂದಿದ್ದಾರೆ. ಇದಾದ ಬಳಿಕ ಬಿಗ್ಬಾಸ್ ಪರಸ್ಪರ ಚರ್ಚಿಸಿ ಮುಖ್ಯದ್ವಾರ ತೋರಿಸಿ ಎಂದಿದ್ದಾರೆ. ಬಿಗ್ಬಾಸ್ ಧ್ವನಿ ಕೇಳಿಸಿಕೊಳ್ಳುತ್ತಿದ್ದಂತೆ ಸ್ಪರ್ಧಿಗಳು ಅಚ್ಚರಿಕೊಂಡಿದ್ದಾರೆ.

ಆ ಕೂಡಲೇ ಸ್ಪರ್ಧಿಗಳು ಯಾರನ್ನು ಬಿಗ್ಬಾಸ್ ಮನೆಯಿಂದ ಕಳುಹಿಸಬೇಕು ಎಂಬ ಚರ್ಚೆ ನಡೆಸಿದ್ದಾರೆ. ಪ್ರೊಮೋದಲ್ಲಿ ಮನೆಮಂದಿ ರಕ್ಷಿತಾ ಶೆಟ್ಟಿ ಹಾಗೂ ಸ್ಪಂದನಾ ಹೆಸರನ್ನು ತೆಗೆದುಕೊಂಡಿದ್ದಾರೆ. ಇಂದು ರಾತ್ರಿ 9.30ಕ್ಕೆ ಬಿಗ್ಬಾಸ್ ಮನೆಯಿಂದ ಮೊದಲ ದಿನವೇ ಯಾವ ಸ್ಪರ್ಧಿ ಆಚೆ ಬಂದಿದ್ದಾರೆ ಎಂದು ಗೊತ್ತಾಲಿದೆ.

ಅಷ್ಟಕ್ಕೂ ಈ ಮೂವರು ಸ್ಪರ್ಧಿಗಳೇ ಏಕೆ?

ಬಿಗ್ಬಾಸ್ ಮನೆ ಒಳಗಡೆ ಪ್ರವೇಶ ಮಾಡುವ ಮೊದಲು ಸ್ಪರ್ಧಿಗಳ ಮಾತನ್ನು ಕೇಳಿ ವೀಕ್ಷಕರು ಮೀಟರ್ ಮೂಲಕ ವೋಟಿಂಗ್ ಹಾಕಬೇಕಿತ್ತು. ಶೇ 75ಕ್ಕಿಂತ ಹೆಚ್ಚು ವೋಟಿಂಗ್ ಪಡೆದವರು ಒಂಟಿಯಾಗಿ ಮನೆಗೆ ಪ್ರವೇಶ ಮಾಡುವ ಅವಕಾಶ ಇತ್ತು. ಇನ್ನು, ಶೇ 75ಕ್ಕಿಂತ ಕಡಿಮೆ ಬಂದರೆ ಅವರು ಜಂಟಿಯಾಗಿ ಅಂದರೆ ಜೋಡಿಯಾಗಿ ಮನೆ ಪ್ರವೇಶ ಮಾಡಬೇಕಿತ್ತು.

ಹಾಗೆ ಕೊನೆಯದಾಗಿ 3 ಸ್ಪರ್ಧಿಗಳು ಕಡಿಮೆ ವೋಟಿಂಗ್ ಪಡೆದು ಬಿಗ್ಬಾಸ್ ಮನೆಗೆ ಹೋಗಿದ್ದರು. ಇದೇ ವೇಳೆ ಸ್ಪಂದನಾ ಸೋಮಣ್ಣ, ರಕ್ಷಿತಾ ಹಾಗೂ ಮಾಳು ನಿಪನಾಳ ಅವರಿಗೆ ಬಿಗ್ಬಾಸ್ ಶಾಕ್ ಕೊಟ್ಟಿದ್ದಾರೆ. ಈ ಮೂವರಲ್ಲಿ ಒಬ್ಬರನ್ನು ಬಿಗ್ಬಾಸ್ ಮನೆಯಿಂದ ಕಳುಹಿಸಬೇಕು ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.