ಬೆಂಗಳೂರು: ಬಿಗ್ ಬಾಸ್ ಕನ್ನಡ 9ನೇ ಆವೃತ್ತಿಯು 50 ದಿನಗಳನ್ನು ಮುಗಿಸಿದ್ದು, ಈಗ ವೈಲ್ಡ್ ಕಾರ್ಡ್ ಎಂಟ್ರಿಗೆ ವೇದಿಕೆ ಸಜ್ಜಾಗಿದೆ.
ಹೌದು, ಪ್ರತೀ ಆವೃತ್ತಿಯಂತೆ ಈ ಬಾರಿಯೂ ವೈಲ್ಡ್ ಎಂಟ್ರಿ ಯಾರೆಂಬ ಕುತೂಹಲ ಮನೆ ಮಾಡಿದೆ. ಈ ಮಧ್ಯೆಯೇ ಮಂಗಳವಾರದ(ನ.22)ಸಂಚಿಕೆಯ ಪ್ರೊಮೊದಲ್ಲಿ ಈ ಬಗ್ಗೆ ಸುಳಿವು ನೀಡಲಾಗಿದೆ. ಸ್ಪರ್ಧಿ ಅನುಪಮಾ ಗೌಡ ಅವರು, ವೈಲ್ಡ್ ಕಾರ್ಡ್ ಎಂಟ್ರಿಯಾ ಎಂದು ಜೋರಾಗಿ ಹೇಳುತ್ತಿರುವ ದೃಶ್ಯ ಪ್ರೊಮೊದಲ್ಲಿದೆ.
ಮನೆಯ ಸದಸ್ಯರು ಎಲ್ಲ ಸವಲತ್ತುಗಳನ್ನು ಕಳೆದುಕೊಂಡು ಸಪ್ಪೆಯಿಂದ ಕುಳಿತಿರುವಾಗ ಮತ್ತೊಬ್ಬ ಸ್ಪರ್ಧಿ ಒಂದು ಸವಲತ್ತು ಪಡೆದಿದ್ದಾರೆ ಎಂದು ಬಿಗ್ ಬಾಸ್ ಘೋಷಿಸುತ್ತಾರೆ. ವೈಲ್ಡ್ ಕಾರ್ಡ್ ಎಂಟ್ರಿಯೇ ಎಂದುಮನೆಯ ಸದಸ್ಯರೆಲ್ಲ ಬೆರಗುಗಣ್ಣಿನಿಂದ ಅವರತ್ತ ನೋಡುತ್ತಿರುವ ದೃಶ್ಯ ಪ್ರೊಮೊದಲ್ಲಿದೆ. ಮನೆಯ ಬಂದಿರುವ ಹೊಸ ಸ್ಪರ್ಧಿ ಯಾರೆಂಬುದು ಸಂಚಿಕ ಪ್ರಸಾರವಾದ ಬಳಿಕವೇ ತಿಳಿಯಲಿದೆ.
ಸಾನ್ಯಾ ಅಯ್ಯರ್ ಬರ್ತಾರಾ?
‘ಪ್ರವೀಣ’ರ ಗುಂಪಿನ ಮೊದಲ ಸ್ಪರ್ಧಿಯಾಗಿ ಎಲಿಮಿನೇಟ್ ಆದ ಸಾನ್ಯಾ ಅಯ್ಯರ್ ಮನೆಗೆ ಬರಬಹುದೇ ಎಂಬ ಕುತೂಹಲ ಮನೆ ಮಾಡಿದೆ.
ಟಾಸ್ಕ್‌ಗಳಲ್ಲಿ ಉತ್ತಮವಾಗಿ ಪ್ರದರ್ಶನ ನೀಡುತ್ತಿದ್ದ ಅವರು, ಒಂದು ವಾರ ಸಪ್ಪೆಯಾದ ಕಾರಣಕ್ಕೆ ಮನೆಯಿಂದ ಹೊರಬಿದ್ದಿದ್ದರು. ಆ ಬಳಿಕ, ಸಾಮಾಜಿಕ ಮಾಧ್ಯಮದಲ್ಲಿ ಅವರ ಅಭಿಮಾನಿಗಳು ಸಾನ್ಯಾ ಅವರನ್ನು ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬರಬೇಕೆಂದು ಒತ್ತಾಯಿಸಿದ್ದರು.
ಕಳೆದ ಆವೃತ್ತಿಯಲ್ಲಿ ನಟಿ ಪ್ರಿಯಾಂಕ ತಿಮ್ಮೇಶ್, ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದರು. ಹಲವು ಗಲಭೆ ಗದ್ದಲಗಳ ಮೂಲಕ ಚಂದ್ರಚೂಡ್ ಅಬ್ಬರಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.