ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bigg Boss 10: ಸ್ಪರ್ಧಿಗಳ ಪ್ರಶ್ನೆಗೆ ಬಿಕ್ಕಿ ಬಿಕ್ಕಿ ಅತ್ತ ಡ್ರೋನ್‌ ಪ್ರತಾಪ್‌

Published 24 ಅಕ್ಟೋಬರ್ 2023, 11:43 IST
Last Updated 24 ಅಕ್ಟೋಬರ್ 2023, 11:43 IST
ಅಕ್ಷರ ಗಾತ್ರ

ಬೆಂಗಳೂರು: ಬಿಗ್‌ಬಾಸ್‌ 10 ಸೀಸನ್‌ 3ನೇ ವಾರಕ್ಕೆ ಕಾಲಿಟ್ಟಿದೆ. ಜಗಳ, ಕಿತ್ತಾಟ, ಕಿರುಚಾಟಗಳ ನಡುವೆ ಬಿಗ್‌ಬಾಸ್‌ ಮನೆ ವಿವಾದವನ್ನೂ ಸೃಷ್ಟಿಸಿದೆ.

ಈ ನಡುವೆ ಹೆಚ್ಚು ಸುದ್ದಿಯಾಗುತ್ತಿರುವ ಸ್ಪರ್ಧಿ ಎಂದರೆ ಡ್ರೋನ್‌ ಪ್ರತಾಪ್‌. ಈ ವಾರ ಡ್ರೋನ್‌ ಪ್ರತಾಪ್‌ ಹಾಗೂ ವಿನಯ್‌ ಅವರನ್ನು ಕುರ್ಚಿ ಮೇಲೆ ಕೂರಿಸಿಕೊಂಡು ಇತರ ಸ್ಪರ್ಧಿಗಳು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ. 

ಇದರಿಂದ ಆತಂಕಗೊಂಡ ಪ್ರತಾಪ್‌ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ದಸರಾ ಹಬ್ಬದ ಸಂಭ್ರಮ ಬಿಗ್‌ ಬಾಸ್‌ ಮನೆಯಲ್ಲೂ ಕಳೆಗಟ್ಟಿದೆ. ನಟಿ ತಾರಾ ದೊಡ್ಮನೆ ಒಳಗೆ ಪ್ರವೇಶಿಸಿ ಸ್ಪರ್ಧಿಗಳೊಂದಿಗೆ ಹಬ್ಬಕ್ಕೆ ಮೆರುಗು ತಂದಿದ್ದಾರೆ.

ವರ್ತೂರು ಸಂತೋಷ್‌ ಬಂಧನ

ಬಿಗ್‌ ಬಾಸ್‌ ಆರಂಭವಾದಾಗಿನಿಂದ ಇದೇ ಮೊದಲ ಬಾರಿ ಸ್ಪರ್ಧಿಯೊಬ್ಬರನ್ನು ಅರಣ್ಯ ಅಧಿಕಾರಿಗಳು ನೇರವಾಗಿ ಮನೆಯೊಳಗೆ ಹೋಗಿ ಬಂಧಿಸಿದ ಘಟನೆಯೂ ನಡೆದಿದೆ. ಹುಲಿ ಉಗುರನ್ನು ಕುತ್ತಿಗೆಗೆ ಧರಿಸಿದ ಆರೋಪದ ಮೇಲೆ ವರ್ತೂರ್‌ ಸಂತೋಷ್‌ ಅವರನ್ನು ಬಂಧಿಸಲಾಗಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT