ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BBK10; ಇಬ್ಬರಿಗೆ ಸಿಕ್ತು ಕಿಚ್ಚನ ಚಪ್ಪಾಳೆ: ವರ್ತೂರು ಸಂತೋಷ್‌ ಫಿನಾಲೆಗೆ ಎಂಟ್ರಿ

Published 21 ಜನವರಿ 2024, 5:15 IST
Last Updated 21 ಜನವರಿ 2024, 5:15 IST
ಅಕ್ಷರ ಗಾತ್ರ

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ ಫಿನಾಲೆಗೆ ದಿನಗಣನೆ ಆರಂಭವಾಗಿದೆ. ಕೊನೆಯ ವಾರದಲ್ಲಿ ಏಳು ಜನ ಸ್ಪರ್ಧಿಗಳು ಮನೆಯಲ್ಲಿ ಉಳಿದುಕೊಂಡಿದ್ದಾರೆ. ಸಂಗೀತಾ, ಪ್ರತಾಪ್‌, ನಮ್ರತಾ, ವಿನಯ್‌, ಕಾರ್ತಿಕ್‌, ವರ್ತೂರು ಸಂತೋಷ್‌ ಹಾಗೂ ತುಕಾಲಿ ಸಂತೋಷ್‌ ಮನೆಯೊಳಗಿದ್ದಾರೆ.

ಈ ಸೀಸನ್‌ನ ಕೊನೆಯ ಕಿಚ್ಚನ ಪಂಚಾಯತಿಯನ್ನು ನಿನ್ನೆ (ಶನಿವಾರ) ಸುದೀಪ್‌ ನಡೆಸಿಕೊಟ್ಟಿದ್ದಾರೆ. ಈ ವೇಳೆ ಎರಡನೇ ಬಾರಿಗೆ ಮನೆಯೊಳಗೆ ಬಂದುಹೋದ ಹಳೆ ಸ್ಪರ್ಧಿಗಳ ಭೇಟಿ ಕುರಿತು ಮಾತನಾಡಿದ್ದು, ನಮ್ರತಾ, ಪ್ರತಾಪ್‌, ಕಾರ್ತಿಕ್‌ಗೆ ಭರವಸೆ ತುಂಬಿದ್ದಾರೆ. 

ಮನೆಯೊಳಗೆ ಬಂದು ಅಲ್ಲಿದ್ದ ಸ್ಪರ್ಧಿಗಳ ಬಳಿ ನಕಾರಾತ್ಮಕವಾಗಿ ಮಾತನಾಡಿದ ಸ್ನೇಹಿತ್‌ ಮತ್ತು ರಕ್ಷಕ್‌ ಬಗ್ಗೆ ಮಾತನಾಡಿದ ಸುದೀಪ್, ರಕ್ಷಕ್‌ ಅವರಿಗೆ, ಅಪ್ಪನ ಹೆಸರುಳಿಸಿ ಎಂದು ನಯವಾಗಿ ಎಚ್ಚರಿಕೆ ಕೊಟ್ಟಿದ್ದಾರೆ.

ಇಬ್ಬರಿಗೆ ಕಿಚ್ಚನ ಚಪ್ಪಾಳೆ

ಇದೇ ಮೊದಲ ಬಾರಿಗೆ ಸೀಸನ್‌ನ ಕೊನೆಯ ವಾರದಲ್ಲಿ ಇಬ್ಬರಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ. ಇಡೀ ಸೀಸನ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಸಂಗೀತಾ ಶೃಂಗೇರಿ ಮತ್ತು ವಿನಯ್‌ ಅವರಿಗೆ ಚಪ್ಪಾಳೆ ದೊರಕಿದೆ. ಇಬ್ಬರಿಗೂ ಒಂದೊಂದು ಫೋಟೊ ಫ್ರೇಮ್‌ಗಳನ್ನು ನೀಡಲಾಗಿದ್ದು ಬಿಗ್‌ಬಾಸ್‌ ಮನೆಯ ಗೋಡೆಗೆ ಅಂಟಿಸಿದ್ದಾರೆ.

ಫಿನಾಲೆಗೆ ಕಾಲಿಟ್ಟ ವರ್ತೂರು ಸಂತೋಷ್‌

ಬಿಗ್‌ಬಾಸ್‌ ಸೀಸನ್‌ 10ರ ಫಿನಾಲೆಗೆ ಮೂರನೇ ಸ್ಪರ್ಧಿಯಾಗಿ ವರ್ತೂರು ಸಂತೋಷ್‌ ಕಾಲಿಟ್ಟಿದ್ದಾರೆ. ಈ ಮೊದಲು ಸಂಗೀತಾ ಹಾಗೂ ತುಕಾಲಿ ಸಂತೋಷ್‌ ಫಿನಾಲೆಗೆ ಆಯ್ಕೆಯಾಗಿದ್ದರು. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT