ಭಾನುವಾರ, ಏಪ್ರಿಲ್ 11, 2021
23 °C

Big Boss 8.. ಶುರುವಾಯ್ತು ಹೊಸ ಪ್ರೇಮ ಕಥೆ? ಸುದೀಪ್, ಸ್ಪರ್ಧಿಗಳಿಗೂ ಇದೇ ಅನುಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪ್ರತಿ ಬಾರಿಯೂ ಬಿಗ್ ಬಾಸ್ ಮನೆಯಲ್ಲಿ ಒಂದಲ್ಲ ಒಂದು ಪ್ರೇಮ ಕಥೆ ಬಂದು ಹೋಗುತ್ತದೆ. ಈ ಬಾರಿಯೂ ಅಂತದ್ದೊಂದು ಕಥೆ ಶುರುವಾಗುವ ಎಲ್ಲ ಲಕ್ಷಣ ಕಂಡುಬರುತ್ತಿದೆ.

ಹೌದು, ಜೋಡಿ ಟಾಸ್ಕ್ ವೇಳೆ ಪ್ರತಿಯೊಬ್ಬ ಪುರುಷ ಸ್ಪರ್ಧಿಯೂ ಮಹಿಳಾ ಸ್ಪರ್ಧಿಯನ್ನು ಆಯ್ಕೆ ಮಾಡಬೇಕಿತ್ತು. ಇಲ್ಲಿ ಮಂಜು, ಗೀತಾ ಅವರನ್ನು ಆಯ್ಕೆ ಮಾಡಿದರೆ, ಶಂಕರ್ ಅಶ್ವತ್ಥ್ ಅವರು ಚಂದ್ರಕಲಾ ಅವರ ಮನವೊಲಿಸಿದರು. ದಿವ್ಯಾ ಸುರೇಶ್, ವಿಶ್ವನಾಥ್‌ಗೆ ಜೋಡಿಯಾದರು. ಹೀಗೆ ನಡೆಯುತ್ತಿದ್ದಾಗ ದಿವ್ಯಾ ಉರುಡುಗ ಅವರು ಮಂಜು, ಶಮಂತ್ ಮತ್ತು ಪ್ರಶಾಂತ್ ಸಂಬರಗಿ ಮೂವರೂ ಕೇಳಿಕೊಂಡಾಗ ಮುಖ ಸಿಂಡರಿಸಿ ನೋ ಅಂದರು. ಅದರೆ, ಬೈಕ್ ರೇಸರ್ ಅರವಿಂದ್ ಬರುವ ಮೊದಲೆ ಹುಸಿ ನಗೆ ಬೀರುತ್ತಾ ನಲಿದಾಡುತ್ತಿದ್ದ ದಿವ್ಯಾ.. ನನ್ನ ಜೋಡಿ ಆಗ್ತೀರಾ ಎಂದು ಅರವಿಂದ್ ಕೇಳಿದ ಕೂಡಲೆ ಯೆಸ್ ಯೆಸ್ ಎಂದು ಪ್ರತಿಕ್ರಿಯಿಸಿದರು. ಈ ಸಂದರ್ಭ, ಇಡೀ ತಂಡದ ಸದಸ್ಯರ ಗಮನ ಇವರಿಬ್ಬರ ಮೇಲೆ ಇತ್ತು.

ಅಭಿನಯಿಸಿ ತೋರಿಸಿದ ಶುಭಾ ಪೂಂಜಾ: ದಿವ್ಯಾ ಉರುಡುಗ ಅವರು ಅರವಿಂದ್ ಜೋಡಿಯಾದ ಕುತೂಹಲಕಾರಿ ಸಂದರ್ಭವನ್ನು ಹತ್ತಿರದಿಂದ ಗಮನಿಸಿದ್ದ ನಟಿ ಶುಭ ಪೂಂಜಾ ಅವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎಂದು ಆ ಸಂದರ್ಭವನ್ನು ಅಭಿನಯಿಸಿ ತೋರಿಸಿದರು. ಎಲ್ಲರೆದುರು ಇಷ್ಟೆಲ್ಲ ಮಾಡಿದ ಮೇಲೆ ಟೆಲಿಕಾಸ್ಟ್ ಮಾಡದೆ ಇರುವುದು ಹೇಗೆ ಎಂದರು. ಇದಕ್ಕೂ ಮುನ್ನ ಗೀತಾ ಸಹ, ನೀನು ಮತ್ತು ಅರವಿಂದ್ ಜೋಡಿಯಾಗಿರುವುದು ಎಷ್ಟು ಸಂತೋಷವಾಗುತ್ತಿದೆ ಎಂದರೆ ಅನಂದಬಾಷ್ಪ ಸುರಿಯುತ್ತಿದೆ. ನೀವಿಬ್ಬರು ಒಂದಾಗಲೆಂದು ಹರಕೆ ಹೊತ್ತಿದ್ದೆವು ಎಂದು ಕಿಚಾಯಿಸಿದರು.

ಸಮ್‌ಥಿಂಗ್ ಸಮ್‌ಥಿಂಗ್ ಎಂದಿದ್ದ ಕಿಚ್ಚ: ವಾರದ ಕಥೆ ಕಿಚ್ಚನ ಜೊತೆ ಭಾನುವಾರದ ಎಪಿಸೋಡ್‌ನಲ್ಲಿ ಅರವಿಂದ್ ಅವರು ದಿವ್ಯಾ ಅವರ ಜೊತೆ ನಡೆಸಿದ ಸಂಭಾಷಣೆಯ ತುಣುಕನ್ನು ಇಟ್ಟು ಹಲವು ಪ್ರಶ್ನೆ ಕೇಳುವ ಮೂಲಕ ಏನೋ ಇದೆ ಎಂಬ ಸಂಶಯ ಹೊರ ಹಾಕಿದರು. ನೀವು ದಿವ್ಯಾ ಉರುಡುಗ ಜೊತೆ ಮಾತನಾಡುತ್ತಾ, ಮುಂದಿನ ವರ್ಷ ಮದುವೆಯಾಗುವ ಐಡಿಯಾ ಇದೆಯಾ? ಎಂದು ಪ್ರಶ್ನಿಸಿದ್ದೀರಿ. ಇದಕ್ಕೆ ಏನು ಕಾರಣ. ಪ್ರಪೋಸ್ ಮಾಡೋದು ಅಂದ್ರೆ ಹೀಗೇನಾ ಎಂದು ಮರು ಪ್ರಶ್ನೆ ಹಾಕಿದರು. ಇದಕ್ಕೆ ಉತ್ತರಿಸಿದ ಅರವಿಂದ್, 35 ವರ್ಷವಾದರೂ ನೀವು ಮದುವೆಯಾಗಿಲ್ಲವೇಕೆ? ಎಂದು ಶಮಂತ್ ಪ್ರಶ್ನಿಸಿದರು. ಹಾಗಾಗಿ, ಈ ಮಾತುಕತೆಯಲ್ಲಿ ಉರುಡುಗ ಅವರನ್ನು ಪ್ರಶ್ನಿಸಿದೆ ಎಂದು ಅಸ್ಪಷ್ಟವಾಗಿ ಹೇಳಿದರು. ಹಾಗಾದರೆ, ವಾಟ್ ನೆಕ್ಸ್ಟ್ ಎಂದು ಸುದೀಪ್ ಪ್ರಶ್ನಿಸಿದರು. ನಥಿಂಗ್ ನೆಕ್ಸ್ಟ್ ಸರ್ ಎಂದು ಅರವಿಂದ್ ನಾಚುತ್ತಾ ಹೇಳಿದ್ದರು. ಆದರೆ, ಜೋಡಿ ಟಾಸ್ಕ್‌ಗಾಗಿ ಜೋಡಿ ಆಯ್ಕೆ ವೇಳೆ ಅರವಿಂದ್ ಮತ್ತು ದಿವ್ಯಾ ಉರುಡುಗ ಅವರ ವರ್ತನೆ ಇಡೀ ಬಿಗ್ ಬಾಸ್ ನೆಯ ಸದಸ್ಯರಲ್ಲಿ ಅವರಿಬ್ಬರ ನಡುವೆ ಪ್ರೇಮಾಂಕುವಾಗಿದೆ ಎಂಬ ಅನುಮಾನ ಹುಟ್ಟಿಸಿದೆ.

ಇದನ್ನೂ ಓದಿ.. Big Boss 8: ಮಂಜುಗೆ ಜುಟ್ಟಿಡಿದು ಹೊಡೆದರು, ಎಲ್ಲೆಲ್ಲೋ ಮುಟ್ಟುತ್ತಾನೆ ಎಂದ ನಿಧಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು