ಬೆಂಗಳೂರು: 'ಮಜಾ ಟಾಕೀಸ್' ಮತ್ತು 'Boys Vs Girls'ಕಲರ್ಸ್ ಕನ್ನಡದ ಎರಡು ಅತಿ ದೊಡ್ಡ ಷೋಗಳು. ಈ ಎರಡು ಷೋಗಳ 'ಮಹಾ ಮಿಲನ' ಕಲರ್ಸ್ ಕನ್ನಡದಲ್ಲಿ ಶನಿವಾರ ಮತ್ತು ಭಾನುವಾರ (ಫೆಬ್ರವರಿ 22, 23) ರಾತ್ರಿ 7:30 ಕ್ಕೆ ಪ್ರಸಾರವಾಗಲಿದ್ದು, ವೀಕ್ಷಕರಿಗೆ UNLIMITED MAJA ಮತ್ತು NON-STOP ENTERTAINMENT ಕೊಡಲಿದೆ.

ವಾರಾಂತ್ಯದಲ್ಲಿ ಒಟ್ಟು ಆರು ಗಂಟೆಗಳ ಕಾಲ ಅಪರಿಮಿತ ಮಜಾ ಮತ್ತು ಕೊನೆಯೇ ಇಲ್ಲದಂತೆ ನಕ್ಕು ನಗಿಸುವ ಮನರಂಜನೆ ಕೊಡುವ ಈ 'ಮಹಾ ಮಿಲನ'ದಲ್ಲಿ ಅನೇಕ ವಿಶೇಷಗಳಿವೆ.

ಯೋಗರಾಜ್ ಭಟ್ ಮತ್ತು ಸೃಜನ್ ಕಾರ್ಯಕ್ರಮದ ಜಡ್ಜ್ ಆಗಿ ಹೊಸ ಬಗೆಯ ತೀರ್ಪು ಬರೆಯಲಿದ್ದಾರೆ.

ಅಚ್ಚಕನ್ನಡದ ಕೂಸು ಅನುಪಮಾ ನಿರೂಪಣೆಯಲ್ಲಿ ಅರಳು ಹುರಿದಂತೆ ಕನ್ನಡ ನುಡಿಮುತ್ತುಗಳು ಉರುಳಿದರೆ, ಎರಡೂ ಷೋಗಳ ದೈತ್ಯ ಪ್ರತಿಭೆಗಳು ತಮ್ಮ ಸ್ಕಿಟ್ಸ್, ಗಿಮಿಕ್, ಡಾನ್ಸ್ ಮೂಲಕ ಜನರ ಮನ ಕದಿಯಲಿದ್ದಾರೆ.

'ಮಹಾ ಶಿವರಾತ್ರಿ' ವಿಶೇಷವಾಗಿ ಚಂದನಾ, ಐಶ್ವರ್ಯಾ ಸಿಂಧೋಗಿ ಮತ್ತು ಪ್ರಿಯಾಂಕಾ ಕಾಮತ್ ಇವರು ಕ್ರಮವಾಗಿ ಸತಿ, ಪಾರ್ವತಿ, ಕಾಳಿಯಾಗಿ ನರ್ತಿಸಲಿದ್ದಾರೆ.

'ಅಣ್ಣಯ್ಯ' ಸಿನೆಮಾದ ಕಾಮಿಡಿ ಅಣಕವನ್ನು ಹಾಲಿವುಡ್ನ 'ಅವತಾರ್' ಚಿತ್ರದ ಮಾದರಿಯಲ್ಲಿ ತೋರಿಸಿ ಮನರಂಜಿಸಿರುವುದು ಚಂದ್ರಪ್ರಭ, ಪ್ರಶಾಂತ್, ವಿವೇಕ್, ಮಿಮಿಕ್ರಿ ಗೋಪಿ.

ಇನ್ನೊಂದು ವಿಶೇಷವೆಂದರೆ, 'ನೊಂದ ಗಂಡಂದಿರ ಸಂಘ' ಸ್ಕಿಟ್. ಇದರಲ್ಲಿ ತುಕಾಲಿ - ಪತ್ನಿ ಮಾನಸ, ಪಾವಗಡ ಮಂಜು -ಪತ್ನಿ ನಂದಿನಿ ಮತ್ತು ಕುರಿ ಪ್ರತಾಪ್ ಪ್ರೇಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಹರಿಸಲಿದ್ದಾರೆ.

ಜೊತೆಗೆ ಹಲವಾರು ಸ್ಕಿಟ್ಗಳು, ಡಾನ್ಸ್ ಮತ್ತು ಗೇಮ್ಸ್ ಗಳಿಂದ ಆರು ಗಂಟೆಗಳ ಈ ಮಹಾಮಿಲನ ಕಲರ್ಸ್ ಕನ್ನಡ ವಾಹಿನಿಯ ವೀಕ್ಷಕರಿಗೆ ಅಪರೂಪದ ವಿಶೇಷ ಆನಂದದ ಹಬ್ಬವಾಗಿರುವುದಂತೂ ನಿಜ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.