ಶನಿವಾರ, ಮೇ 30, 2020
27 °C

ಪೌರಾಣಿಕ ಸರಣಿಗಳ ಮರುಪ್ರಸಾರ: ದೇಶದ ನಂ.1 ಮನರಂಜನಾ ಮಾಧ್ಯಮವಾಯಿತು ದೂರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಏಪ್ರಿಲ್ 3 ರಂದು ಕೊನೆಗೊಂಡ ವಾರಂತ್ಯದಲ್ಲಿ ದೂರದರ್ಶನವು ಭಾರತದಲ್ಲಿ ಅತಿ ಹೆಚ್ಚು ವೀಕ್ಷಿಸಿದ ಮನರಂಜನಾ ಮಾಧ್ಯಮವಾಗಿ ಹೊರಹೊಮ್ಮಿದೆ ಎಂದು  ಬ್ರಾಡ್‌ಕಾಸ್ಟ್‌ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) ಹೇಳಿದೆ. 

ಮಾರಣಾಂತಿಕ ಕೊರೊನಾ ವೈರಸ್‌ ಹರಡುವಿಕೆ ನಿಯಂತ್ರಿಸಲು ಮೂರು ವಾರಗಳ ಕಾಲ ದೇಶದಲ್ಲಿ ಲಾಕ್‌ಡೌನ್ ಘೋಷಿಸಲಾಗಿದೆ. ಈ ಸಮಯದಲ್ಲಿ ಪೌರಾಣಿಕ ಧಾರಾವಾಹಿಗಳಾದ ರಾಮಾಯಣ, ಮಹಾಭಾರತ, ಶಕ್ತಿಮಾನ್‌ ಮತ್ತು ಬುನಿಯಾದ್‌ ಸರಣಿಗಳು ದೂರದರ್ಶನದಲ್ಲಿ ಮರುಪ್ರಸಾರಗೊಂಡಿವೆ. 

90ರ ದಶಕದಲ್ಲಿ ಪ್ರಸಾರಗೊಂಡಿದ್ದ ಈ ಧಾರಾವಾಹಿಗಳು ದೇಶದ ಮಧ್ಯಮವರ್ಗದ ಜನರನ್ನು ಮತ್ತೆ ಆಕರ್ಷಿಸಲು ಯಶಸ್ವಿಯಾಗಿವೆ. ಆ ಕಾರಣ ಕೊನೆಯ ವಾರಾಂತ್ಯದಲ್ಲಿ ದೂರದರ್ಶನ ವೀಕ್ಷಕರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ ಎಂದು ಬಾರ್ಕ್‌ ಹೇಳಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು