ಮುಂಬೈ: ಬಾಲಿವುಡ್ ನಟಿ ಕಂಗನಾ ರನೌತ್ ಅವರ ನಿರೂಪಣೆಯಲ್ಲಿ ಮೂಡಿಬರಲಿರುವ ‘ಲಾಕ್ ಅಪ್’ ರಿಯಾಲಿಟಿ ಶೋನ ಟ್ರೈಲರ್ ಬುಧವಾರ ದೆಹಲಿಯಲ್ಲಿ ಬಿಡುಗಡೆಯಾಗಿದೆ.

ಎಂಎಕ್ಸ್ ಪ್ಲೇಯರ್ ಹಾಗೂ ಆಲ್ಟ್ ಬಾಲಾಜಿ ಒಟಿಟಿಗಳಲ್ಲಿ ಫೆಬ್ರುವರಿ 27ರಿಂದ ಕಾರ್ಯಕ್ರಮ ಪ್ರಸಾರವಾಗಲಿದೆ.

‘ಸಲ್ಮಾನ್ ಖಾನ್’ ನಿರೂಪಣೆಯ ‘ಬಿಗ್ ಬಾಸ್’ಗೆ ‘ಲಾಕ್ ಅಪ್’ ಅನ್ನು ಹೋಲಿಸಲಾಗುತ್ತಿದೆ.

ಈ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಲಾಕ್ ಅಪ್ ಶೋ ನಿರ್ಮಾಪಕಿ ಏಕ್ತಾ ಕಪೂರ್, ‘ಜಗತ್ತಿನಾದ್ಯಂತ ನಾಲ್ಕು ಗೋಡೆಗಳ ನಡುವೆ ಸಂಭವಿಸುವ ವಾಸ್ತವತೆಗಳನ್ನು ಪರಸ್ಪರ ಹೋಲಿಸಲಾಗುತ್ತದೆ. ಇದೂ ಸಹ ನಾಲ್ಕು ಗೋಡೆಗಳ ನಡುವೆ ನಡೆಯುವ ರಿಯಾಲಿಟಿ ಶೋ ಆಗಿದೆ’ ಎಂದು ತಿಳಿಸಿದ್ದಾರೆ.

‘ಒಂದು ಧಾರಾವಾಹಿಯನ್ನು ಇನ್ನೊಂದಕ್ಕೆ ಹೋಲಿಸಿದರೆ ನೀವು ಎಂದಾದರೂ ಹೆದರಿದ್ದೀರಾ ಎಂದು ಕೇಳಿದಂತಿದೆ? ಹತ್ತು ಧಾರಾವಾಹಿಗಳಿರುತ್ತವೆ. ನಾವು ಅವುಗಳೆಲ್ಲವನ್ನೂ ಒಂದೇ ಕಥೆಯಂತೆ ನೋಡುತ್ತೇವೆ. ಆದರೆ, ಅವುಗಳ ಹಿಂದೆ ಕೆಲಸ ಮಾಡಿದವರು ತಮ್ಮದೇ ಆದ ವಿಭಿನ್ನ ಅಭಿಪ್ರಾಯಗಳನ್ನು ಹೊಂದಿರುತ್ತಾರೆ’ ಎಂದೂ ಏಕ್ತಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.