ಭಾನುವಾರ, ಅಕ್ಟೋಬರ್ 24, 2021
28 °C

‘ಕಾಮಿಡಿ ವಿತ್ ಕಪಿಲ್ ಶೋ‘ ಮೇಲೆ ಎಫ್‌ಐಆರ್ ದಾಖಲು

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸೋನಿ ಟಿವಿಯಲ್ಲಿ ಪ್ರಸಾರವಾಗುವ ಜನಪ್ರಿಯ ‘ಕಾಮಿಡಿ ನೈಟ್ಸ್‌ ವಿತ್ ಕಪಿಲ್ ಶೋ‘ ಮೇಲೆ ಎಫ್‌ಐಆರ್ ದಾಖಲಾಗಿದೆ.

ಸಾರ್ವಜನಿಕವಾಗಿ ಮದ್ಯ ಸೇವನೆ ಮಾಡುವ ದೃಶ್ಯಗಳನ್ನು ಶೋ ನಲ್ಲಿ ಪ್ರಸಾರ ಮಾಡಲಾಗಿದೆ ಹಾಗೂ ನ್ಯಾಯಾಲಯಕ್ಕೆ ಅವಮಾನ ಮಾಡಲಾಗಿದೆ ಎಂದು ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ವಕೀಲರೊಬ್ಬರು ದೂರು ದಾಖಲಿಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಇತ್ತೀಚೆಗೆ ಶೋನಲ್ಲಿ ಬಿತ್ತರವಾದ ದೃಶ್ಯದಲ್ಲಿ ಕೋರ್ಟ್ ಸೆಟ್ ಹಾಕಲಾಗಿತ್ತು. ಅದರಲ್ಲಿ ನಟ–ನಟಿಯರ ಕೈಯಿಂದ ಮದ್ಯ ಸೇವಿಸುವ ದೃಶ್ಯವನ್ನು ಅಳವಡಿಸಿ ಬಿತ್ತರಿಸಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ. ಅಲ್ಲದೇ ಶೋನಲ್ಲಿ ನ್ಯಾಯಾಲಯದ ಗೌರವಕ್ಕೆ ದಕ್ಕೆ ತರಲಾಗಿದೆ ಎಂದು ಆರೋಪಿಸಲಾಗಿದೆ.

ನಟ ಕಪಿಲ್ ಶರ್ಮಾ ಅವರು ನಡೆಸಿ ಕೊಡುವ ಈ ಶೋನಲ್ಲಿ ಸುಮನ್ ಚಕ್ರವರ್ತಿ, ಭಾರತಿ ಸಿಂಗ್, ಸುಂದೇಶ್ ಲೆಹರಿ, ಅರ್ಚನಾ ಸಿಂಗ್ ಸಹ ಶೋವನ್ನು ನಡೆಸಿ ಕೊಡುತ್ತಾರೆ. ಅಪಾರ ವೀಕ್ಷಕರನ್ನು ಹೊಂದಿರುವ ಈ ಕಾರ್ಯಕ್ರಮ ಅನೇಕ ಸಲ ವಿವಾದಗಳಿಗೂ ಕಾರಣವಾಗಿದೆ.

ಇದನ್ನೂ ಓದಿ: ಜೇಮ್ಸ್ ಬಾಂಡ್‌ ಪಾತ್ರದ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ ನಟ ಡೇನಿಯಲ್ ಕ್ರೇಗ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು