ಭಾನುವಾರ, ಸೆಪ್ಟೆಂಬರ್ 26, 2021
21 °C

ಹಾಸ್ಟೇಜಸ್ 2ನೇ ಸೀಸನ್‌ ಶೀಘ್ರ?

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಜನಪ್ರಿಯ ವೆಬ್ ಸರಣಿ ‘ಹಾಸ್ಟೇಜಸ್‌’ನ ಎರಡನೆಯ ಸೀಸನ್‌ ಮೇ ತಿಂಗಳ ಅಂತ್ಯದ ವೇಳೆಗೆ ವೀಕ್ಷಕರ ಎದುರು ಬರುವ ಸಾಧ್ಯತೆ ಇದೆ. ಎರಡನೆಯ ಸೀಸನ್ನಿಗೆ ಸಂಬಂಧಿಸಿದ ಕೆಲಸಗಳು ಪೂರ್ಣಗೊಂಡಿದ್ದು, ಲಾಕ್‌ಡೌನ್‌ ತಲೆಬಿಸಿಗಳು ಈಗ ಇದ್ದರೂ ಮೇ ಅಂತ್ಯದ ವೇಳೆಗೆ ಇದನ್ನು ತೆರೆಗೆ ತರಬೇಕು ಎಂಬ ಉದ್ದೇಶ ನಿರ್ದೇಶಕ ಸುಧೀರ್ ಮಿಶ್ರಾ ಅವರದ್ದು.

ಈ ಸರಣಿಯ ಮೊದಲ ಸೀಸನ್‌ ಹಾಟ್‌ಸ್ಟಾರ್‌ ಮೂಲಕ ಪ್ರಸಾರವಾಗಿದೆ. ‘ಎರಡನೆಯ ಸೀಸನ್ನಿನ ಎಲ್ಲ ಕಂತುಗಳ ಸಂಕಲನದ ಕೆಲಸ ಪೂರ್ಣಗೊಂಡಿದೆ. ಹಿನ್ನೆಲೆ ಸಂಗೀತ ನೀಡುವ ಕೆಲಸ ನಡೆಯುತ್ತಿದೆ. ನಾವು ಒಂದು ತಂಡವಾಗಿ ಒಂದೆಡೆ ಸೇರಲು ಸಾಧ್ಯವಾಗುತ್ತಿಲ್ಲದ ಕಾರಣ ಕೆಲಸಗಳು ತುಸು ನಿಧಾನವಾಗಿ ಆಗುತ್ತಿವೆ. ಈ ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳಲು ನಾವು ಯತ್ನಿಸುತ್ತ ಇದ್ದೇವೆ’ ಎಂದು ಮಿಶ್ರಾ ಹೇಳಿದ್ದಾರೆ.

ಹಾಸ್ಟೇಜಸ್ ಸರಣಿಯ ಮೊದಲ ಸೀಸನ್‌ ಈಗ ಸ್ಟಾರ್‌ ಪ್ಲಸ್ ವಾಹಿನಿಯ ಮೂಲಕ ಟಿ.ವಿ. ಪರದೆಯ ಮೇಲೆಯೂ ಕಾಣಿಸಿಕೊಂಡಿದೆ. ‘ಟಿ.ವಿ. ವೀಕ್ಷಕರು ಎಷ್ಟರಮಟ್ಟಿಗೆ ಹೊಸದನ್ನು ಸ್ವೀಕರಿಸುತ್ತಾರೆ ಎಂಬುದನ್ನು ಪರೀಕ್ಷಿಸಲು ಇದೊಂದು ಅವಕಾಶ. ಅವರು ಅಬ್ಬರದ ಕಥಾಹಂದರವನ್ನು ಮಾತ್ರ ಇಷ್ಟಪಡುತ್ತಾರೆ ಎನ್ನಲು ಸಾಧ್ಯವಿಲ್ಲ. ಇಂತಹ ಕಾರ್ಯಕ್ರಮಗಳ ಕಾರಣದಿಂದ, ಟಿ.ವಿ. ಮೂಲಕ ಕಥೆಗಳನ್ನು ಹೇಳುವ ವಿಧಾನವೂ ಬದಲಾಗಬಹುದು’ ಎಂದು ಹೇಳಿದರು.

ಇಂತಹ ಸರಣಿಗಳನ್ನು ಟಿ.ವಿ. ವೀಕ್ಷಕರು ಕೂಡ ಇಷ್ಟಪಡುತ್ತಾರೆ ಎನ್ನುವ ವಿಶ್ವಾಸ ಮಿಶ್ರಾ ಅವರದ್ದು. ‘ನಮಗೆ ವೆಬ್‌ ಮಾಧ್ಯಮದಲ್ಲಿ ಸ್ವಾತಂತ್ರ್ಯ ಇದೆ ಎನ್ನುವ ಒಂದೇ ಕಾರಣಕ್ಕೆ ಕಥೆಯನ್ನು ವೈಭವೀಕರಿಸುವ ಕೆಲಸಕ್ಕೆ ಹೋಗಿಲ್ಲ’ ಎಂಬ ಮಾತನ್ನು ಅವರು ಸೇರಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು