ಬುಧವಾರ, ಜುಲೈ 6, 2022
22 °C

ಮೈ ಮೂಳೆ ಬಳುಕಿಸುವ ಕಲೆ ಕಂಡು ಹೌ ಹಾರಿದ ನಟಿ ಶಿಲ್ಪಾ ಶೆಟ್ಟಿ, ಕಿರಣ್‌ ಖೇರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋನಿ ಟಿ.ವಿಯಲ್ಲಿ ಪ್ರಸಾರವಾಗುವ ‘ಇಂಡಿಯಾಸ್​ ಗಾಟ್​ ಟ್ಯಾಲೆಂಟ್​’ ಕಾರ್ಯಕ್ರಮದಲ್ಲಿ ಮೈ ಮೂಳೆಯನ್ನು ಹೇಗೆ ಬೇಕಾದರೂ ಬಳುಕಿಸಬಲ್ಲ ಸಾಮರ್ಥ್ಯ​ ತೋರಿಸಿರುವ ಸ್ಪರ್ಧಿ ಆದಿತ್ಯ ಮಾಳವೀಯ ಅವರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.  

ಆದಿತ್ಯ ಅವರ ಭಯಾನಕ ಟ್ಯಾಲೆಂಟ್‌ಗೆ ಪ್ರೇಕ್ಷಕರು ಮಾತ್ರವಲ್ಲದೇ ಜಡ್ಜ್‌ಗಳು ಕೂಡ ಬೆಚ್ಚಿ ಬಿದ್ದಿದ್ದಾರೆ. ನಟಿ ಶಿಲ್ಪಾ ಶೆಟ್ಟಿ, ಕಿರಣ್​ ಖೇರ್​ ಮತ್ತು ಬಾದ್​ಶಾ ಅವರು ಆದಿತ್ಯ ಟ್ಯಾಲೆಂಟ್‌ ಕಂಡು ಹೌಹಾರಿದ್ದಾರೆ. ಒಂದು ಹಂತದಲ್ಲಿ ಸಾಕು...ಸಾಕು...ನಿಲ್ಲಿಸು ಎಂದು ಶಿಲ್ಪಾ ಶೆಟ್ಟಿ ಸೇರಿದಂತೆ ಜಡ್ಜ್‌ಗಳು ಕೂಗಿಕೊಂಡಿದ್ದಾರೆ. 

ಆದಿತ್ಯ ಮಾಳವೀಯ ವೇದಿಕೆಯಲ್ಲಿ ತನ್ನ ಕಲೆ ತೋರಿಸಿದ ಬಳಿಕ ಜಡ್ಜ್‌ಗಳ ಬಳಿ ಬಂದು ಮೈ ಮೂಳೆ ಮುರಿದುಕೊಳ್ಳುವ ಕಲೆ ಪ್ರದರ್ಶನ ಮಾಡಿದರು. ಕೂಡಲೇ ಜಡ್ಜ್‌ಗಳು ’ನಮ್ಮನ್ನು ಹೆದರಿಸಿಬೇಡ, ಸಾಕು ನಿಲ್ಲಿಸು’ ಎಂದು ಕೂಗಿಕೊಂಡರು. 

ಸೋನಿ ಟಿ.ವಿ ಹಂಚಿಕೊಂಡಿರುವ ಈ ವಿಡಿಯೊ ಸದ್ಯ ವೈರಲ್‌ ಆಗಿದೆ. ಲಕ್ಷಾಂತರ ಜನರು ಈ ವಿಡಿಯೊವನ್ನು ವೀಕ್ಷಣೆ ಮಾಡಿದ್ದಾರೆ. ಕೆಲವರು ಆದಿತ್ಯ ಟ್ಯಾಲೆಂಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಈ ರೀತಿ ಕಲೆ ತೋರಿಸುವುದು ಬೇಡ, ಮುಂದೆ ಅಪಾಯವಾಗಬಹುದು ಎಂದು ಮನವಿ ಮಾಡಿದ್ದಾರೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು