ಸ್ಟಾರ್ ಸುವರ್ಣ ವಾಹಿನಿಯಲ್ಲಿ ಫೆಬ್ರುವರಿ 3ರಿಂದ ಹೊಸದೊಂದು ಧಾರಾವಾಹಿ ಆರಂಭವಾಗುತ್ತಿದೆ. ಇದರ ಶೀರ್ಷಿಕೆ ‘ಜೀವ ಹೂವಾಗಿದೆ’. ಇದು ಸಿನಿಮಾ ನಿರ್ಮಾಣ ಸಂಸ್ಥೆ ವಜ್ರೇಶ್ವರಿ ಕಂಬೈನ್ಸ್ನ ‘ಪೂರ್ಣಿಮ ಎಂಟರ್ಪ್ರೈಸಸ್’ನವರು ಸ್ಟಾರ್ ಸುವರ್ಣ ವಾಹಿನಿಗೆ ನಿರ್ಮಾಣ ಮಾಡುತ್ತಿರುವ ಎರಡನೆಯ ಧಾರಾವಾಹಿ.

‘ಜೀವ ಹೂವಾಗಿದೆ ಎನ್ನುವ ಶೀರ್ಷಿಕೆ ನನಗೆ ಬಹಳ ಇಷ್ಟ. ಆದರೆ, ಜೀವವನ್ನು ಹೂವಾಗಿ ಮಾಡುವುದು ಬಹಳ ಕಷ್ಟ’ ಎಂದು ಹೇಳುತ್ತಾರೆ ನಟ, ನಿರ್ಮಾಪಕ ರಾಘವೇಂದ್ರ ರಾಜ್ಕುಮಾರ್. ವಾಹಿನಿಯವರು ಆಯೋಜಿಸಿದ್ದ ಧಾರಾವಾಹಿಯ ಪ್ರೀಮಿಯರ್ ಪ್ರದರ್ಶನಕ್ಕೆ ರಾಘಣ್ಣ ಬಂದಿದ್ದರು.

‘ಈ ಧಾರಾವಾಹಿ ನೋಡುವ ಜನರ ಮನಸ್ಸು ಹೂವಾದರೆ ನಮಗೆ ಖುಷಿ ಆಗುತ್ತದೆ. ಕಥೆಗೆ ಜನ ಮನಸೋತರೆ ನಾವು ಗೆದ್ದಂತೆ’ ಎನ್ನುವ ಮಾತು ಸೇರಿಸಿದರು. ಈ ಧಾರಾವಾಹಿಯನ್ನು ಜೆ.ಕೆ. ಸುನಿಲ್ ಕುಮಾರ್ ನಿರ್ದೇಶಿಸುತ್ತಿದ್ದಾರೆ. ಶಿಲ್ಪಾ ರವಿ, ಆರ್ಯನ್ ಸೂರ್ಯ ಮತ್ತು ಅಜಯ್ ಸತ್ಯನಾರಾಯಣ ಅವರು ಮುಖ್ಯ ಪಾತ್ರಗಳನ್ನು ನಿಭಾಯಿಸುತ್ತಿದ್ದಾರೆ. ‘ಪೂರ್ಣಿಮಎಂಟರ್ಪ್ರೈಸಸ್’ನವರು ಸುವರ್ಣ ವಾಹಿನಿಗಾಗಿ ನಿರ್ಮಾಣ ಮಾಡಿದ ‘ಮರಳಿ ಬಂದಳು ಸೀತೆ’ ಧಾರಾವಾಹಿ ಈಗಾಗಲೇ 280ನೆಯ ಕಂತನ್ನು ದಾಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.