ಸೋಮವಾರ, ಡಿಸೆಂಬರ್ 5, 2022
24 °C

ಸಾವಿರದ ಸಂಭ್ರಮದಲ್ಲಿ ‘ಪಾರು’ ಧಾರಾವಾಹಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನ್ನಡದ ಜನಪ್ರಿಯ ವಾಹಿನಿ ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿ ‘ಪಾರು’  ಸಾವಿರ ಸಂಚಿಕೆಗಳನ್ನು ಪೂರೈಸುತ್ತಿದೆ.

ಅಖಿಲಾಂಡೇಶ್ವರಿಯಾಗಿ ವಿನಯಾ ಪ್ರಸಾದ್‌, ಪಾರು ಪಾತ್ರದ ಮೋಕ್ಷಿತಾ ಪೈ, ಆದಿ ಪಾತ್ರದ ಶರತ್‌, ವೀರಯ್ಯ ದೇವನಾಗಿ ಕಾಣಿಸಿಕೊಂಡ ಎಸ್‌.ನಾರಾಯಣ್‌, ನಾಗೇಂದ್ರ ಶಾ ಅವರ ತಾರಾಗಣ ವೀಕ್ಷಕರನ್ನು ರಂಜಿಸುತ್ತಲೇ ಸಾಗಿದೆ. 

ವಿನೂತನ ನಿರೂಪಣೆಯ ಶೈಲಿಯ ಮೂಲಕ ಈಗಾಗಲೇ ಸೂಪರ್ ಹಿಟ್ ಆಗಿರುವ ಪಾರು ಧಾರಾವಾಹಿ ತನ್ನ ಅದ್ಧೂರಿತನವನ್ನು ಎಲ್ಲಿಯೂ ಬಿಟ್ಟಿಲ್ಲ. ಅದ್ಧೂರಿ ಸೆಟ್, ಭವ್ಯ ಬಂಗಲೆ, ಪ್ರತಿದೃಶ್ಯದ ಸಿರಿವಂತಿಕೆ ವೀಕ್ಷಕರಿಗೆ ಸಿನಿಮಾದ ಅನುಭವ ನೀಡುವ ಪ್ರಯತ್ನ ಮಾಡಿದೆ.  

ಪ್ರೀತಿ, ಸ್ನೇಹ , ಕಾಳಜಿ, ಆದರ್ಶ ಮತ್ತು ಮನೋರಂಜನೆ ಹೀಗೆ ಎಲ್ಲವನ್ನು ಒಟ್ಟುಗೂಡಿಸಿ 1000 ಸಂಚಿಕೆಗಳನ್ನು ಪೂರೈಸುತ್ತಿರುವ ಹೊತ್ತಿನಲ್ಲಿ ಅಖಿಲಾಂಡೇಶ್ವರಿಯು ಪಾರುವನ್ನು ಸೊಸೆಯಾಗಿ ಒಪ್ಪಿಕೊಳ್ಳುವ ಹಂತದಲ್ಲಿದೆ. ಮುಂದಿನ ಕಥೆ ಯಾವ ರೀತಿಯಲ್ಲಿ ತಿರುವು ಪಡೆದುಕೊಳ್ಳಲಿದೆ ಎಂಬ ಕುತೂಹಲ ಉಳಿದಿದೆ.

ಅಖಿಲಾಂಡೇಶ್ವರಿಯವರ ಅಲಂಕಾರ ಅವರು ಉಡುವ ಸೀರೆ, ಧರಿಸುವ ಒಡವೆಗಳಿಗೆ ಅಸಂಖ್ಯಾತ ಮಹಿಳಾ ವೀಕ್ಷಕರು ಆಕರ್ಷಿತರಾಗಿದ್ದಾರೆ ಹಾಗೂ ಅವರನ್ನು ಅನುಕರಿಸುತ್ತಿದ್ದಾರೆ ಎಂದಿದೆ ಧಾರಾವಾಹಿಯ ತಂಡ. 

ಧೃತಿ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಧಾರಾವಾಹಿಗೆ ನಟ, ನಿರ್ಮಾಪಕ ದಿಲೀಪ್ ರಾಜ್ ಕ್ರಿಯೇಟಿವ್ ಡೈರೆಕ್ಟರ್ ಆಗಿದ್ದಾರೆ. ಅವರ ಪತ್ನಿ ಶ್ರೀವಿದ್ಯಾರಾಜ್ ಅವರು ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ ಮತ್ತು ಗುರುಪ್ರಸಾದ್ ಮುಡೇನಹಳ್ಳಿ ಅವರು ನಿರ್ದೇಶನ ಮಾಡುತ್ತಿದ್ದಾರೆ.

ಸೋಮವಾರದಿಂದ– ಶುಕ್ರವಾರದವರೆಗೂ ಪ್ರತಿದಿನ ಸಂಜೆ 6.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರವಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು