ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿತೂಕದ ಹೆಣ್ಣಿನ ಕಥೆ

Last Updated 28 ಫೆಬ್ರುವರಿ 2019, 19:30 IST
ಅಕ್ಷರ ಗಾತ್ರ

‘ಉದಯ ಟಿವಿ’ ಈಗ ಮಹಿಳಾ ಪ್ರಧಾನ ಕಥೆಯೊಂದನ್ನು ವೀಕ್ಷಕರ ಮುಂದೆ ತರಲು ಸಜ್ಜಾಗಿದೆ. ‘ಇದು ಭೂಮಿತೂಕದ ಹೆಣ್ಣಿನ ಕಥೆ’ ಎಂದು ವಾಹಿನಿ ಹೇಳಿಕೊಂಡಿದೆ. ಈ ಧಾರಾವಾಹಿ ಹೆಸರು ‘ಕ್ಷಮಾ’. ಇದು (ಮಾರ್ಚ್ 4ರಿಂದ) ಸೋಮವಾರದಿಂದ ಶುಕ್ರವಾರ ರಾತ್ರಿ 8ಕ್ಕೆ ಪ್ರಸಾರ ಆಗಲಿದೆ.

ಮಧ್ಯಮ ವಯಸ್ಸಿನ ಹೆಣ್ಣೊಬ್ಬಳ ಹೋರಾಟ, ಪ್ರಾಮಾಣಿಕವಾಗಿ ಸಂಸಾರ ನಡೆಸುವವರು ಎದುರಿಸಬೇಕಾದ ಕಷ್ಟಗಳು, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅನುಭವಿಸುವ ಪಡಿಪಾಟಲುಗಳು ಧಾರಾವಾಹಿಯ ಕಥಾಹಂದರ. ಧಾರಾವಾಹಿಯ ಮುಖ್ಯ ಪಾತ್ರ ಕ್ಷಮಾ, ಇಬ್ಬರು ಮಕ್ಕಳ ತಾಯಿ. ಗಂಡ ಬಿಟ್ಟುಹೋದ ನಂತರ ತನ್ನ ಸಂಸಾರದ ಜವಾಬ್ದಾರಿ ಹೊತ್ತ ದಿಟ್ಟೆ.

ಈಕೆ ತನ್ನ ಮಕ್ಕಳಿಗೆ ಸರಿಯಾದ ವಿದ್ಯಾಭ್ಯಾಸ ಕೊಡುವಲ್ಲಿ ಸಫಲಳಾಗುತ್ತಾಳಾ, ಈಕೆಗೆ ಸಮಾಜ ಒಳ್ಳೆಯ ನೆಲೆ ಕಲ್ಪಿಸಿಕೊಡುತ್ತಾ ಎಂಬುದು ಕಥೆಯ ಎಳೆ.

ಭಾರತೀಶ್ ಇದರ ನಿರ್ದೇಶಕರು. ಕ್ಷಮಾ ಪಾತ್ರ ಶ್ವೇತಾ ರಾವ್ ಅವರದ್ದು. ವಿಶ್ವಾಸ್ ಭಾರದ್ವಾಜ್, ಲತಾ, ವಿಕ್ಕಿ ಮತ್ತು ಮಾಲತಿ ಮೈಸೂರು ತಾರಾಗಣದಲ್ಲಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT