ಶನಿವಾರ, ಅಕ್ಟೋಬರ್ 31, 2020
26 °C

ಒಲ್ಲದ ಮದುವೆಯ ‘ಲಗ್ನಪತ್ರಿಕೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮದುವೆ ಎಂಬುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎನ್ನುತ್ತಾರೆ. ಆದರೂ ‌‌ಮದುವೆಯ ಬಗ್ಗೆ ಭೂಲೋಕದಲ್ಲಿ ನಾನಾ ನಾಟಕಗಳು ನಡೆಯುತ್ತವೆ. ಜೀವನದಲ್ಲಿ ತಮ್ಮದೇ ಕನಸು ಹೊತ್ತು ಸಾಗುತ್ತಿರುವ ಜೋಡಿಯನ್ನು ಮದುವೆ ಎಂಬ ಬಂಧನದ ಮೂಲಕ ಬಂಧಿಸಲು ಹೊರಡುವ ಕಥೆಯನ್ನು ಹೊಂದಿರುವ ಧಾರಾವಾಹಿಯೊಂದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಅದುವೆ ‘ಲಗ್ನಪತ್ರಿಕೆ’. ಈ ಧಾರಾವಾಹಿ ಇಂದಿನಿಂದ ರಾತ್ರಿ 10 ಗಂಟೆಗೆ ಪ್ರಸಾರವಾಗಲಿದೆ.

ಪ್ರೋಮೊ ಮೂಲಕವೇ ಸದ್ದು ಮಾಡುತ್ತಿರುವ ಧಾರಾವಾಹಿ ಯುವ ಮನಸ್ಸುಗಳಿಗೆ ಇಷ್ಟವಾಗುವುದರಲ್ಲಿ ಸಂಶಯವಿಲ್ಲ. ನಾಯಕ ಹಾಗೂ ನಾಯಕಿ ಹೊಸ ಮುಖವಾದರೂ ಧಾರಾವಾಹಿಯಲ್ಲಿ ಹಿರಿಯ ನಟ–ನಟಿಯರ ದಂಡೇ ಇದೆ.

ಸಾಮಾನ್ಯವಾಗಿ ಮದುವೆಯನ್ನು ತಪ್ಪಿಸಲು ಯಾರ‍್ಯಾರೋ ಪ್ರಯತ್ನ ಮಾಡುತ್ತಾರೆ. ಆದರೆ ಈ ಲಗ್ನಪತ್ರಿಕೆ ಧಾರಾವಾಹಿಯಲ್ಲಿ ತಮ್ಮ ಮದುವೆಯನ್ನು ತಪ್ಪಿಸಲು ಮದುವೆಯಾಗುತ್ತಿರುವ ಹುಡುಗ ಹಾಗೂ ಹುಡುಗಿಯೇ ಪ್ರಯತ್ನ ಮಾಡುತ್ತಿರುತ್ತಾರೆ. ತಮ್ಮ ಮದುವೆಗೆ ತಾವೇ ವಿಘ್ನ ತರಲು ಯೋಚಿಸುತ್ತಿರುವ ಇವರು ಮದುವೆಗೆ ಒಪ್ಪಿಕೊಂಡಿದ್ದು ಯಾಕೆ? ಇವರ ನಿಶ್ಚಿತಾರ್ಥ ನಡೆದಿದ್ದು ಹೇಗೆ? ಇವರ ಮದುವೆ ನಡೆಯುತ್ತಾ ಇಲ್ವಾ? ಇವೆಲ್ಲದರ ನಡುವೆ ನೂರು ಸುಳ್ಳು ಹೇಳಿ ಒಂದು ಮದುವೆ ಮಾಡಿಸೋಕೆ ಹೊರಟಿರುವ ಹುಡುಗಿಯ ತಂದೆ ಮುಚ್ಚಿಟ್ಟಿರುವ ಗುಟ್ಟೇನು? ಇವೆಲ್ಲಾ ತಿಳಿಯಬೇಕು ಎಂದರೆ ಲಗ್ನಪತ್ರಿಕೆ ಧಾರಾವಾಹಿ ನೋಡಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು