ಸೋಮವಾರ, ನವೆಂಬರ್ 29, 2021
20 °C

ಕಿರುತೆರೆಯಲ್ಲಿ ಈಗ ಯುವ ಅಂಬೇಡ್ಕರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಈಗ ‘ಮಹಾನಾಯಕ ಅಂಬೇಡ್ಕರ್‌’ ಯುವಕರಾಗಿದ್ದಾರೆ. ಆಗಸ್ಟ್‌ 20ರಿಂದ ಝೀ ಕನ್ನಡ ವಾಹಿನಿಯಲ್ಲಿ ಸಂಜೆ 6ಕ್ಕೆ ಪ್ರಸಾರವಾಗಲಿರುವ ‘ಮಹಾನಾಯಕ ಅಂಬೇಡ್ಕರ್‌’ ಧಾರಾವಾಹಿಯಲ್ಲಿ ಬಾಲಕ ಭೀಮ ಈಗ ಯುವ ಅಂಬೇಡ್ಕರ್‌ ಆಗಿ ಕಾಣಿಸಲಿದ್ದಾರೆ. ಅಂಬೇಡ್ಕರ್‌ ಅವರ ಜೀವನದ ಮತ್ತೊಂದು ಮಜಲನ್ನು ತೋರಿಸಲು ಪ್ರಯತ್ನ ಸಾಗಿದೆ ಎಂದು ವಾಹಿನಿ ಹೇಳಿದೆ. 

ಜೀ ಕನ್ನಡದ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಮಾತನಾಡಿ, ‘ದೇಶ ಸ್ವಾತಂತ್ರ್ಯ ಪಡೆದ 75ನೇ ವರ್ಷದ ಸಂದರ್ಭದಲ್ಲಿ ಯುವ ಅಂಬೇಡ್ಕರ್ ಅವರ ಜೀವನಗಾಥೆ ಹೇಳಲು ʻಮಹಾನಾಯಕ ಅಂಬೇಡ್ಕರ್‌ʼ ಧಾರಾವಾಹಿ ಮುಂದಾಗಿದೆ. ಮಹಾನಾಯಕನ ಬಾಲ್ಯದ ಜೀವನ, ಅವರ ಹೋರಾಟದ ಬದುಕಿನ ಕಥೆಗೆ ನೀಡಿದಂತಹ ಬೆಂಬಲವನ್ನು ಯುವ ಅಂಬೇಡ್ಕರ್ ಕಥೆಗೂ ನೀಡಿ ಆದರಿಸುತ್ತಾರೆ ಎಂಬ ಭರವಸೆ ನಮ್ಮದು. ಇದೀಗ ‌‘ಮಹಾನಾಯಕ ಅಂಬೇಡ್ಕರ್’ ರವರ ಜೀವನದ ವಿನೂತನ ವಿವರಗಳು ಮೂಡಿಬರಲಿವೆ’ ಎಂದು ಹೇಳಿದರು.

ಶನಿವಾರ ಹಾಗೂ ಭಾನುವಾರ ಮಾತ್ರ ಪ್ರಸಾರವಾಗುತ್ತಿದ್ದ ಈ ಧಾರಾವಾಹಿಯ ವೀಕ್ಷಕರ ಒತ್ತಾಯಕ್ಕೆ ಮಣಿದು ಜೀ಼ ಕನ್ನಡ ಸೋಮವಾರದಿಂದ ಶುಕ್ರವಾರ ಸಂಜೆ 6 ಗಂಟೆಗೆ ಪ್ರಸಾರ ಮಾಡಲಾಗುತ್ತಿದೆ. ಧಾರಾವಾಹಿಯ ಶೀರ್ಷಿಕೆ ಗೀತೆಯೇ ಸಾಕಷ್ಟು ಜನಪ್ರಿಯವಾಗಿದೆ ಎಂದು ವಾಹಿನಿ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು