ಬೆಂಗಳೂರು: ವಿಜಯ್ ಕಾರ್ತಿಕೇಯನ್ ನಿರ್ದೇಶನದ ನಟ ಸುದೀಪ್ ಪ್ರಮುಖ ಪಾತ್ರದಲ್ಲಿರುವ ‘ಮ್ಯಾಕ್ಸ್’ ಚಿತ್ರ ಇದೇ ಫೆಬ್ರುವರಿ 15 ರಂದು ಸಂಜೆ 7.30 ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಈ ಕುರಿತು ಇಂದು ಜೀ ಕನ್ನಡ ವಾಹಿನಿಯ ಅಧಿಕೃತ ಪ್ರಕಟಣೆ ತಿಳಿಸಿದೆ.

ಮಾಸ್ ಮತ್ತು ಕ್ಲಾಸ್ ಪ್ರೇಕ್ಷಕರಿಗಾಗಿ ಮಾಡಿರುವ ಈ ಸಿನಿಮಾವನ್ನು ಕಿಚ್ಚ ಸುದೀಪ್ ಮತ್ತು ಎಸ್. ಧನು ಅವರು ನಿರ್ಮಿಸಿದ್ದಾರೆ.

ಚಿತ್ರದಲ್ಲಿ ಸುದೀಪ್ ಜೊತೆಯಾಗಿ ಸುನಿಲ್, ವರಲಕ್ಷ್ಮಿ ಶರತ್ ಕುಮಾರ್, ಉಗ್ರಂ ಮಂಜು, ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಳೆ, ವಿಜಯ್ ಚಂಡೂರು ಇದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಶೇಖರ್ ಚಂದ್ರ ಅವರ ಛಾಯಾಗ್ರಾಹಣವಿದೆ.

ಈ ಚಿತ್ರದ ಕಥೆಯು ಅರ್ಜುನ್ ಮಹಾಕ್ಷಯ್ ಅಲಿಯಾಸ್ ಮ್ಯಾಕ್ಸ್ ಎಂಬ ಪೊಲೀಸ್ ಅಧಿಕಾರಿಯ (ಸುದೀಪ್) ಸುತ್ತ ಸುತ್ತುತ್ತದೆ.

ಈ ಚಿತ್ರ ಡಿಸೆಂಬರ್ 25 ರಂದು ಬಿಡುಗಡೆಯಾಗಿತ್ತು. ಫೆಬ್ರುವರಿ 22ಕ್ಕೆ ಜೀ5 ಒಟಿಟಿಯಲ್ಲಿ ಲಭ್ಯವಿರಲಿದೆ.
.ಅಮ್ಮನಿಗೆ ‘ಮ್ಯಾಕ್ಸ್’ ಸಿನಿಮಾ ತೋರಿಸಲಾಗಲಿಲ್ಲ: ಕಿಚ್ಚ ಸುದೀಪ ಬೇಸರ.ಏಕಕಾಲದಲ್ಲಿ ಎರಡ್ಮೂರು ಸಿನಿಮಾ; ಮ್ಯಾಕ್ಸ್, ಬಿಗ್ಬಾಸ್ ಬಗ್ಗೆಯೂ ಸುದೀಪ್ ಮಾತು....

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.