ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವೇದಿಕೆ ನಮ್ಮದು ಪ್ರತಿಭೆ ನಿಮ್ಮದು’

Last Updated 9 ಜನವರಿ 2019, 19:45 IST
ಅಕ್ಷರ ಗಾತ್ರ

ನನ್ನ ಮಗನಿಗೆ ಓದಿಗಿಂತಲೂ ನೃತ್ಯದಲ್ಲೇ ಹೆಚ್ಚು ಆಸಕ್ತಿ. ಟಿ.ವಿಗಳ ರಿಯಾಲಿಟಿ ಶೋಗಳಲ್ಲಿ ಪಾಲ್ಗೊಳ್ಳಬೇಕೆಂಬ ಆಸೆ. ಆದರೆ, ಏನು ಮಾಡೋದು ಟಿ.ವಿ ಹೋಗಲಿ ಎಲ್ಲೂ ಅವಕಾಶ ಸಿಗುತ್ತಿಲ್ಲ. ಅಯ್ಯೋ... ನನ್ನ ಮಗಳು ಸಹ ಶಿಕ್ಷಣದ ಜೊತೆಗೆ ಸುಮಧುರವಾಗಿ ಹಾಡು ವುದನ್ನು ಕಲಿತಿದ್ದಾಳೆ. ಅವಳಿಗೆ ಎಲ್ಲೂ ವೇದಿಕೆಗಳೇ ಸಿಗುತ್ತಿಲ್ಲ ಏನ್ರೀ ಮಾಡೋದು...

ಶಿಕ್ಷಣದ ಹೊರತಾಗಿ ಮಕ್ಕಳ ಆಸಕ್ತಿ ಗುರುತಿ ಪ್ರೋತ್ಸಾಹಿಸಲು ಇಚ್ಛಿಸುವ ಬಹುತೇಕ ಪೋಷಕರ ಕೊರಗಿನ ಮಾತುಗಳಿವೆ. ಖಾಸಗಿ ವಾಹಿನಿಗಳಿಗೆ ರಿಯಾಲಿಟಿ ಶೋಗಳೇ ಜೀವಾಳ. ಹೀಗಾಗಿ, ಕನ್ನಡದ ಮನರಂಜನಾ ವಾಹಿನಿಗಳಲ್ಲಿ ಒಂದೊಂದು ರೀತಿಯ ರಿಯಾಲಿಟಿ ಶೋಗಳು ಪೈಪೋಟಿಗೆ ಬಿದ್ದಂತೆ ಪ್ರದರ್ಶನಗೊಳ್ಳುತ್ತಿವೆ. ಅವುಗಳಿಂದಲೇ ಮಕ್ಕಳೂ ಆಕರ್ಷಿತರಾಗಿ ತಾವೂ ಅವರಂತೆ ಟಿ.ವಿ.ಗಳಲ್ಲಿ ಕಾಣಿಸಿಕೊಳ್ಳಬೇಕೆಂಬ ಕನಸು ಕಾಣುತ್ತಾರೆ. ಆದರೆ, ಎಲ್ಲರಿಗೂ ಆ ಅವಕಾಶ ಸಿಗುವುದು ಕಷ್ಟ.

ಹೀಗಾಗಿ,ಇದೇ ವಿಷಯವನ್ನು ಆಧಾರವಾಗಿಟ್ಟು ಕೊಂಡ ಕಾಮಿನಿ ಕೇರ್ಸ್‌ ಫೌಂಡೇಷನ್ ಟಿ.ವಿ.ಗಳ ರಿಯಾಲಿಟಿ ಶೋಗಳಿಗಿಂತ ಕೊಂಚ ಭಿನ್ನವಾಗಿ ‘ವೇದಿಕೆ ನಮ್ಮದು ಪ್ರತಿಭೆ ನಿಮ್ಮದು’ ಎಂಬ ಟ್ಯಾಲೆಂಟ್ ಸ್ಪೆಕ್ಟಾಕ್ಯೂಲಮ್ ಕಾರ್ಯಕ್ರಮದ ಆಯೋಜನೆಗೆ ಸಿದ್ಧತೆ ನಡೆಸಿದೆ. ‘ವೇದಿಕೆ ನಮ್ಮದು ಪ್ರತಿಭೆ ನಿಮ್ಮದು’ ಎಂಬ ಈ ಪ್ರತಿಭಾ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು 6 ರಿಂದ ದ್ವಿತೀಯ ಪಿಯುಸಿ ಓದುವ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ.

ಕಾಮಿನಿ ಕೇರ್ಸ್ ಫೌಂಡೇಷನ್ ಇದೇ ಮೊದಲ ಬಾರಿಗೆ ಇಂಥದೊಂದು ಕಾರ್ಯಕ್ರಮಕ್ಕೆ ಮುಂದಾಗಿದ್ದು, ಮೊದಲ ಹಂತವಾಗಿ ಕಾರ್ಯಕ್ರ ಮದಲ್ಲಿ ನೃತ್ಯ ಹಾಗೂ ಸಂಗೀತ ಪ್ರತಿಭೆಗೆ ಅವಕಾಶ ಕಲ್ಪಿಸಿದೆ. ಕಾರ್ಯಕ್ರಮಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ಫೌಂಡೇಷನ್ ವತಿಯಿಂದಲೇ ಭರಿಸಲಾಗು ತ್ತಿದ್ದು, ಕಾರ್ಯಕ್ರಮದಲ್ಲಿ ಸ್ಪರ್ಧಿಸಲು ಇಚ್ಛಿಸುವ ವಿದ್ಯಾ ರ್ಥಿಗಳು ಯಾವುದೇ ರೀತಿಯ ಶುಲ್ಕ ಪಾವತಿಸಬೇಕಿಲ್ಲ.

‘ಖಾಸಗಿ ವಾಹಿನಿಯಲ್ಲಿ ಬರುತ್ತಿದ್ದ ರಿಯಾಲಿಟಿ ಶೋ ನೋಡುತ್ತಿದ್ದೆ. ಅದರಲ್ಲಿ ಮಕ್ಕಳು ಅದ್ಭುತವಾಗಿ ಹಾಡುತ್ತಿದ್ದರು. ಇಂಥ ಕಾರ್ಯಕ್ರಮವನ್ನು ಟಿ.ವಿ. ಹೊರತಾಗಿ ಸಾರ್ವಜನಿಕವಾಗಿ ನಾನೇಕೆ ಮಾಡ ಬಾರದೆಂಬ ಆಲೋಚನೆ ನನ್ನಲ್ಲಿ ಮೂಡಿತು. ತಕ್ಷಣ ಈ ಕಾರ್ಯಕ್ರಮಕ್ಕೆ ಯೋಜನೆ ರೂಪಿಸಿದೆ’ ಎನ್ನುತ್ತಾರೆ ಕಾರ್ಯಕ್ರಮದ ಸಂಯೋಜಕಿ ಹಾಗೂ ‘ಜಸ್ಟ್ ಇವೆಂಟ್ಸ್ 365’ ನಿರ್ದೇಶಕಿ ಪೂಜಾ ಸಿದ್ದಾರ್ಥ ರಾವ್.

‘ಪ್ರತಿಭೆಯುಳ್ಳ ಲಕ್ಷಾಂತರ ವಿದ್ಯಾರ್ಥಿಗಳು ನಮ್ಮ ನಡುವೆ ಇದ್ದಾರೆ. ಅವರೆಲ್ಲರಿಗೂ ತಮ್ಮ ಪ್ರತಿಭೆ ಅನಾವರಣಕ್ಕೆ ಅವಕಾಶ ಸಿಗುತ್ತಿಲ್ಲ. ಹಾಗಂತ, ಅವರೆಲ್ಲರಿಗೂ ಈ ಕಾರ್ಯಕ್ರಮದ ಮೂಲಕ ಅವಕಾಶ ನೀಡುತ್ತೇವೆ ಅಂತಾನೂ ಅಲ್ಲ. ಪ್ರತಿಭಾನ್ವಿತ ಆಸಕ್ತ ವಿದ್ಯಾರ್ಥಿಗಳು ಹಾಗೂ ಟಿ.ವಿ ಕಾರ್ಯಕ್ರಮಗಳಲ್ಲಿ ಅವಕಾಶ ವಂಚಿತರಿಗೆ ‘ವೇದಿಕೆ ನಮ್ಮದು ಪ್ರತಿಭೆ ನಿಮ್ಮದು’ ಕಾರ್ಯಕ್ರಮದಲ್ಲಿ ಕಲ್ಪಿಸುವುದಷ್ಟೇ ಫೌಂಡೇಷನ್ ಗುರಿ’ ಅವರು.

‘ರಾಜ್ಯದ ಹಲವೆಡೆ ಫೌಂಡೇಷನ್ ವತಿಯಿಂದ ಪೂರ್ವಿರಾಗ ಸಂಗೀತ ಕಾರ್ಯಕ್ರಮ ಆಯೋಜಿಸಿದ್ದೇವೆ. ಆ ಕಾರ್ಯಕ್ರಮದಿಂದ ಸಂಗ್ರಹವಾದ ಹಣವನ್ನು 350ಕ್ಕೂ ಅಧಿಕ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬಳಕೆ ಮಾಡಲಾಗಿದೆ. ಪೂರ್ವಿರಾಗ ಕಾರ್ಯಕ್ರಮದಂತೆ ‘ವೇದಿಕೆ ನಮ್ಮದು ಪ್ರತಿಭೆ ನಿಮ್ಮದು’ ಕಾರ್ಯಕ್ರಮವನ್ನು ಪ್ರತಿವರ್ಷವೂ ಆಯೋಜಿಸಲು ನಿರ್ಧರಿಸಿದ್ದೇವೆ’ ಎಂದು
ಮಾಹಿತಿ ನೀಡಿದರುಜಸ್ಟ್ ಇವೆಂಟ್ಸ್ 365
ನಿರ್ದೇಶಕ ಸಿದ್ಧಾರ್ಥ್ ರಾವ್.

ಆಯ್ಕೆ ವಿಧಾನ: ಈ ಕಾರ್ಯಕ್ರಮದಲ್ಲಿ ಸ್ಪರ್ಧಿಸ ಬಯಸುವವರು ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಹೆಸರು ನೋಂದಾಯಿಸಬೇಕು. ವಿದ್ಯಾರ್ಥಿಗಳ ಪರವಾಗಿ ಶಿಕ್ಷಣ ಸಂಸ್ಥೆಗಳು ನೋಂದಾಯಿಸಬಹುದು. ಫೌಂಡೇಷನ್ ಸಿಬ್ಬಂದಿ ಶಿಕ್ಷಣ ಸಂಸ್ಥೆಗಳಿಗೆ ಹೋಗಿ ಆಡಿಷನ್ ನಡೆಸುತ್ತಾರೆ. ವೈಯಕ್ತಿಕವಾಗಿ ಹೆಸರು ನೋಂದಾಯಿಸಿದವರಿಗೆ ಸ್ಥಳಕ್ಕೆ ಕರೆಸಿ ಅಲ್ಲಿ ಆಡಿಷನ್ ನಡೆಸಲಾಗುತ್ತದೆ. ಆಡಿಷನ್‌ನಲ್ಲಿ ಆಯ್ಕೆಯಾದವರಿಗೆ ಮಲ್ಲೇಶ್ವರದ ಶುಕ್ರಾ ಸಭಾಂಗಣದಲ್ಲಿ ಜ.19ರಂದು ಸೆಮಿಫೈನಲ್‌ ಸ್ಫರ್ಧೆ ಆಯೋಜಿಸಲಾಗಿದೆ. ಅಲ್ಲಿ ಆಯ್ಕೆಯಾದವರು 26ರಂದು ನಗರದ ಸೇಂಟ್ ಜೋಸೆಫ್ ಸಭಾಂಗಣದಲ್ಲಿ ನಡೆಯಲಿರುವ ಅಂತಿಮ ಸುತ್ತಿಗೆ ಆಯ್ಕೆಯಾಗಲಿದ್ದಾರೆ. ನೃತ್ಯ ಹಾಗೂ ಸಂಗೀತ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ ಇಬ್ಬರಿಗೆ ತಲಾ₹ 50 ಸಾವಿರ, ದ್ವಿತೀಯ ಸ್ಥಾನ ಪಡೆದ ಇಬ್ಬರಿಗೆ ತಲಾ ₹ 10 ಸಾವಿರ ಹಾಗೂ ತೃತೀಯ ಸ್ಥಾನ ಪಡೆದವರಿಗೆ ತಲಾ ₹ 5 ಸಾವಿರ ನಗದು ಬಹುಮಾನ ನೀಡಲಾಗುತ್ತದೆ.

ಪ್ರತಿ ಹಂತಕ್ಕೂ ತೀರ್ಪುಗಾರರ ಬದಲಾವಣೆ

ಈ ಸ್ಪರ್ಧೆಯನ್ನು ಪಾರದಾರ್ಶಕವಾಗಿ ನಡೆಸುವ ಉದ್ದೇಶದಿಂದ ಪ್ರತಿ ಹಂತದಲ್ಲೂ ತೀರ್ಪುಗಾರರನ್ನು ಬದಲಾವಣೆ ಮಾಡಲಾಗುತ್ತದೆ. ಆಡಿಷನ್ ವೇಳೆ ಇದ್ದ ತೀರ್ಪುಗಾರರು ಸೆಮಿಫೈನಲ್ ಹಂತದಲ್ಲಿ ಬದಲಾಗು ತ್ತಾರೆ. ಸೆಮಿಫೈನಲ್‌ನಲ್ಲಿದ್ದವರು ಫೈನಲ್‌ನಲ್ಲಿ ಬದಲಾಗುತ್ತಾರೆ. ಇನ್ನು ಅಂತಿಮ ಸುತ್ತಿನಲ್ಲಿ ಲೈವ್ ವೋಟಿಂಗ್ ಹಾಗೂ ತೀರ್ಪುಗಾರರ ತೀರ್ಪು ತಾಳೆ ಹಾಕಿ ಫಲಿತಾಂಶ ಪ್ರಕಟಿಸಲಾಗುತ್ತದೆ. ಹೀಗಾಗಿ, ಲೈವ್ ವೋಟಿಂಗ್‌ನಲ್ಲಿ ತಾರತಮ್ಯ ಆಗಬಾರದೆಂದುಪ್ರತಿ ಸ್ಪರ್ಧಿಗೆ ಹತ್ತು ಪಾಸ್‌ಗಳನ್ನಷ್ಟೇ ನೀಡಲಾಗುತ್ತದೆ. ಸ್ಪರ್ಧೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೆ ಪ್ರಮಾಣಪತ್ರ ಹಾಗೂ ಫೈನಲ್‌ನಲ್ಲಿ ಪಾಲ್ಗೊಂಡ ಸ್ಪರ್ಧಿಗಳಿಗೆ ಟ್ರೋಫಿ ನೀಡಲಾಗುತ್ತದೆ.

ಸಂಪರ್ಕ:7619577075/ 7619577073 ಹೆಸರು ನೋಂದಣಿಗೆ ಜ.12 ಕೊನೆ ದಿನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT