ಭಾನುವಾರ, ಸೆಪ್ಟೆಂಬರ್ 25, 2022
20 °C

‘ಪವಾಡ ಪುರುಷ’ ಬಾಳೂ ಮಾಮನನ್ನು ಟಿವಿಯಲ್ಲಿ ನೋಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಳೂ ಮಾಮನ ಪವಾಡ ನೋಡುವ ಸಮಯ ಈಗ ಬಂದಿದೆ. ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಪವಾಡ ಪುರುಷ’ ಧಾರಾವಾಹಿಯಲ್ಲಿ ಈಗ ಪ್ರಬುದ್ಧ ‘ಬಾಳೂ ಮಾಮ’ನನ್ನು ನೋಡಬಹುದು.  

ಯಾರು ಈ ಬಾಳೂ ಮಾಮ?

ಕರ್ನಾಟಕದ ಚಿಕ್ಕೋಡಿ ಬಳಿಯ ಹಳ್ಳಿಯಲ್ಲಿ ಜನಿಸಿದವರು ಬಾಳೂ ಮಾಮ. ಕುರಿ ಕಾಯುತ್ತಾ ಬದುಕು  ಸಾಗಿಸುತ್ತಿದ್ದ ಬಾಳೂ ಮಾಮ, ತನ್ನ ಬಳಿ ಸಹಾಯ ಬೇಡಿ ಬಂದವರಿಗೆ ನೆರವಾಗುತ್ತಿದ್ದ. ಅದನ್ನು ಜನ ಪವಾಡ ಎಂದು ನಂಬಿ ಬಾಳೂ ಮಾಮ ಅವರನ್ನು ಪೂಜಿಸಿದರು. ಹೀಗೆ ಊರೂರು ಸಂಚರಿಸುತ್ತಾ ಪವಾಡಗಳನ್ನು ಮಾಡುತ್ತಾ ಕೊನೆಗೆ ದೇಹತ್ಯಾಗ ಮಾಡಿದ್ದು ಮಹಾರಾಷ್ಟ್ರದ ಅದಮಾಪುರದಲ್ಲಿ. ಹಾಗಾಗಿ ಬಾಳೂ ಮಾಮನಿಗೆ ಕರ್ನಾಟಕ, ಮಹಾರಾಷ್ಟ್ರಗಳಲ್ಲೂ ಭಕ್ತರಿದ್ದಾರೆ. ಈ ಪವಾಡಪುರುಷನನ್ನು ಜನ ಶಿವನ ಅವತಾರ ಎಂದೂ ಕರೆಯುತ್ತಾರೆ. ಅಧಮಾಪುರದಲ್ಲಿ ಪ್ರತಿ ವರ್ಷ ಬಾಳೂ ಮಾಮನ ಜಾತ್ರೆ ನಡೆಯುತ್ತದೆ. ಹಾಗಿದ್ದರೆ ಇದರ ವಿವರವೇನು ಎಂಬುದನ್ನು ದೃಶ್ಯಗಳಲ್ಲಿ ಈ ಧಾರಾವಾಹಿ ಕಟ್ಟಿಕೊಟ್ಟಿದೆ. ಧಾರಾವಾಹಿ.  ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ಮಧ್ಯಾಹ್ನ 2:30ಕ್ಕೆ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರವಾಗುತ್ತಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು