ಕನ್ನಡದ ಬಿಗ್ಬಾಸ್ ಸೀಸನ್ 12ರ ರನ್ನಪ್ ಆಗಿ ಆಗಿದ್ದ ರಕ್ಷಿತಾ ಶೆಟ್ಟಿ ಅವರು ಕಿಚ್ಚನ ಬಗ್ಗೆ ಗುಣಗಾನ ಮಾಡಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ನಟ ಸುದೀಪ್ ಅವರು ‘ಬಿಗ್ಬಾಸ್ ಪ್ರಯಾಣದುದ್ದಕ್ಕೂ ತಂದೆಯಂತೆ ನಿಂತಿದ್ದೀರಿ ಸರ್ ಎಂದು ಸುದೀರ್ಘವಾಗಿ ಪತ್ರವೊಂದನ್ನು ಬರೆದು ಸುದೀಪ್ ಅವರನ್ನು ಟ್ಯಾಗ್ ಮಾಡಿದ್ದಾರೆ.
.ಮನೆಮಗಳ ರೀತಿ ನೋಡಿದ್ದೀರಿ, ಇದಕ್ಕಿಂತ ಇನ್ನೇನು ಬೇಕು: ರಕ್ಷಿತಾ ಶೆಟ್ಟಿ ಮನದ ಮಾತು.ಬಿಗ್ಬಾಸ್ ಗೆದ್ದು ಬೀಗಿದ ಗಿಲ್ಲಿ ನಟ, ರನ್ನರ್ ಅಪ್ ಆದ ರಕ್ಷಿತಾ ಶೆಟ್ಟಿ.
ಬಿಗ್ಬಾಸ್ ಮನೆಗೆ ಕಾಲಿಟ್ಟ ಕೆಲವೇ ಗಂಟೆಗಳಲ್ಲಿ ಆಚೆ ಬಂದಿದ್ದರು ರಕ್ಷಿತಾ. ಬಳಿಕ ಮತ್ತೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟು ಬರೋಬ್ಬರಿ 16 ವಾರಗಳ ಕಾಲ ಬಿಗ್ಬಾಸ್ ಮನೆಯಲ್ಲಿ ಇದ್ದು, ಭರ್ಜರಿ ಪೈಪೋಟಿ ನೀಡಿದ್ದರು. ತಮ್ಮ ಚಟಪಟ ಮಾತುಗಳ ಮೂಲಕವೇ ಎಲ್ಲರ ಗಮನ ಸೆಳೆದು, ಕೊನೆಯಲ್ಲಿ ವೀಕ್ಷಕರಿಂದ ಅತಿ ಹೆಚ್ಚು ವೋಟ್ ಪಡೆದು ಬಿಗ್ಬಾಸ್ ಸೀಸನ್ 12ರ ರನ್ನರ್ ಅಪ್ ಆದರು. ಈಗ ರಕ್ಷಿತಾ ಶೆಟ್ಟಿ, ಕಿಚ್ಚ ಸುದೀಪ್ ಅವರ ಬಗ್ಗೆ ಸುದೀರ್ಘವಾಗಿ ಪತ್ರವೊಂದನ್ನು ಬರೆದಿದ್ದಾರೆ. ಅದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ರಕ್ಷಿತಾ ಶೆಟ್ಟಿ ಪೋಸ್ಟ್ನಲ್ಲಿ ಏನಿದೆ?

‘ಕೆಲವರು ನಿಮಗೆ ಮಾರ್ಗದರ್ಶನ ನೀಡುವುದಷ್ಟೇ ಅಲ್ಲ.. ಇಡೀ ಜಗತ್ತು ನಿಮ್ಮನ್ನು ಪ್ರಶ್ನಿಸಿದಾಗ ಅವರು ನಿಮ್ಮೊಂದಿಗೆ ನಿಲ್ಲುತ್ತಾರೆ. ಸುದೀಪ್ ಸರ್.. ಈ ಬಿಗ್ಬಾಸ್ ಪ್ರಯಾಣದುದ್ದಕ್ಕೂ ನೀವು ನನಗೆ ತಂದೆಯಂತೆ ಇದ್ದಿರಿ. ನಾನು ಸರಿಯಾಗಿದ್ದಾಗ, ನೀವು ಕೋಟ್ಯಂತರ ಜನರ ಮುಂದೆ ನನ್ನ ಪರವಾಗಿ ಮಾತನಾಡಿದ್ದೀರಿ. ನಾನು ಏನಾದರೂ ಒಳ್ಳೆಯದನ್ನು ಮಾಡಿದಾಗ, ನೀವು ಹೆಮ್ಮೆಯಿಂದ ನನ್ನನ್ನು ಪ್ರೋತ್ಸಾಹಿಸಿದ್ದೀರಿ. ನಾನು ತಪ್ಪುಗಳನ್ನು ಮಾಡಿದಾಗ, ನೀವು ನಿಜವಾದ ಹಿತೈಷಿಯಂತೆ ನನ್ನನ್ನು ಸರಿಪಡಿಸಿದ್ದೀರಿ. ಪ್ರಾಮಾಣಿಕವಾಗಿ, ಕಟ್ಟುನಿಟ್ಟಾಗಿ, ಆದರೆ ತುಂಬಾ ಎಚ್ಚರಿಕೆಯಿಂದ ಅದನ್ನು ನಿಭಾಯಿಸಿದ್ದೀರಿ. ನನ್ನನ್ನು ನೋಡಿ ಸತ್ಯ ಹೇಳಿದವರು ನೀವು, ‘ರಕ್ಷಿತಾ, ನೀವು ಇದಕ್ಕಿಂತ ಬಲಶಾಲಿ ಎಂದು ಎಂದು ಧೈರ್ಯ ತುಂಬಿದಿರಿ. ಆ ಪ್ರಾಮಾಣಿಕತೆ, ಮಾರ್ಗದರ್ಶನವೇ ನನ್ನನ್ನು ಬದಲಾಯಿಸಿತು’.

‘ಬಿಗ್ಬಾಸ್ನ ಮೊದಲ ರನ್ನರ್-ಅಪ್ ಆಗುವುದು ನನ್ನ ಸಾಧನೆ ಮಾತ್ರವಲ್ಲ. ಅದು ನಿಮ್ಮ ಪ್ರಯತ್ನ, ನಿಮ್ಮ ಬೆಂಬಲ ಮತ್ತು ನೀವು ನನ್ನ ಮೇಲಿಟ್ಟ ನಂಬಿಕೆ. ನಾನು ಇಂದು ಇಲ್ಲಿ ನಿಂತಿದ್ದೇನೆ ಎಂದರೆ ಅದಕ್ಕೆ ನೀವೇ ಕಾರಣ. ನನ್ನನ್ನು ರಕ್ಷಿಸಿದ್ದಕ್ಕೆ, ಬೆಂಬಲಿಸಿದ್ದಕ್ಕೆ, ತಂದೆಯಂತೆ ನನ್ನ ಬಗ್ಗೆ ಕಾಳಜಿ ವಹಿಸಿದಕ್ಕೆ ಧನ್ಯವಾದಗಳು ಸರ್. ನೀವು ನನಗಾಗಿ ಮಾತನಾಡಿದ್ದನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನೀವು ಕೊಟ್ಟ ಪ್ರೀತಿಯನ್ನು ನಾನು ನನ್ನ ಹೃದಯದಲ್ಲಿ ಹೊತ್ತು ಸಾಗುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.