ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಭಿಣಿಯಾಗಿರುವಾಗಲೇ ಶೀರ್ಷಾಸನ ಪ್ರದರ್ಶಿಸಿದ ನಟಿ ದೆಬಿನಾ ಬ್ಯಾನರ್ಜಿ

Last Updated 29 ಮಾರ್ಚ್ 2022, 5:41 IST
ಅಕ್ಷರ ಗಾತ್ರ

ಬೆಂಗಳೂರು: ರಾಮಾಯಣ ಧಾರಾವಾಹಿಯಲ್ಲಿ ಸೀತೆಯ ಪಾತ್ರ ನಿರ್ವಹಿಸಿದ್ದ ನಟಿ ದೆಬಿನಾ ಬ್ಯಾನರ್ಜಿ ಅವರು ಶೀರ್ಷಾಸನ ಯೋಗ ಪ್ರದರ್ಶಿಸಿ ಸುದ್ದಿಯಾಗಿದ್ದಾರೆ.

ಗುರ್ಮಿತ್ ಚೌಧರಿ ಅವರನ್ನು ಮದುವೆಯಾಗಿರುವ ದೆಬಿನಾ, ಗರ್ಭಿಣಿಯಾಗಿದ್ದಾರೆ. ಈ ದಂಪತಿ, ಮೊದಲ ಮಗುವಿನ ನಿರೀಕ್ಷೆಯಲ್ಲಿದೆ.

ದೆಬಿನಾ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ, ಶೀರ್ಷಾಸನ ಪ್ರದರ್ಶಿಸಿರುವ ಫೋಟೊ ಪೋಸ್ಟ್ ಮಾಡಿದ್ದಾರೆ.

ತಲೆಕೆಳಗಾಗಿ, ಯಾವುದೇ ಆಧಾರವಿಲ್ಲದೆ ನಿಂತುಕೊಳ್ಳುವ ಈ ಯೋಗ ಪ್ರದರ್ಶಿಸಲು ಹೆಚ್ಚಿನ ಅಭ್ಯಾಸ ಅಗತ್ಯ. ಅದರಲ್ಲೂ, ಗರ್ಭಿಣಿಯಾಗಿರುವ ಸಂದರ್ಭದಲ್ಲಿ ದೆಬಿನಾ ಅವರು ಶೀರ್ಷಾಸನ ಯೋಗ ಮಾಡಿರುವುದು ಸುದ್ದಿಯಾಗಿದೆ.

ಹಲವು ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಿದ್ದೇನೆ, ಹೀಗಾಗಿ ಶೀರ್ಷಾಸನ ಪ್ರದರ್ಶಿಸುವಾಗ ಯಾವುದೇ ಸಮಸ್ಯೆಯಾಗಿಲ್ಲ ಎಂದು ದೆಬಿನಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT