ಕೊರೊನೋತ್ತರ ಕಾಲದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಒಂದಷ್ಟು ಬದಲಾವಣೆಗಳಾಗುತ್ತಿವೆ. ಕೆಲವು ಕಾರ್ಯಕ್ರಮಗಳು ಆನ್ಲೈನ್, ಫೇಸ್ಬುಕ್ ಲೈವ್ ಮೂಲಕ ಪ್ರಸಾರಕ್ಕೆ ಇಳಿದಿವೆ.

ಈಗ ವಾಹಿನಿಗಳೂ ಕೂಡ ತಮ್ಮ ಕಾರ್ಯಕ್ರಮ ಸ್ವರೂಪವನ್ನು ಬದಲಿಸಿಕೊಂಡು, ಸಮಯವನ್ನು ವಿಸ್ತರಿಸಿಕೊಳ್ಳುತ್ತಿವೆ.

ಈಗ ಝೀ ಕನ್ನಡ ವಾಹಿನಿ, ನಿತ್ಯ ಪ್ರಸಾರವಾಗುವ ಧಾರಾವಾಹಿಗಳನ್ನು ಇನ್ನು ಮುಂದೆ ವಾರದ ಆರು ದಿನಗಳ ಕಾಲವೂ ಪ್ರಸಾರ ಮಾಡಲು ಮುಂದಾಗಿದೆ.

ಇಲ್ಲಿವರೆಗೂ ಎಲ್ಲ ಧಾರಾವಾಹಿಗಳು ಸೋಮವಾರದಿಂದ ಶುಕ್ರವಾರದವರೆಗೆ, ಸಂಜೆ 7 ರಿಂದ ರಾತ್ರಿ 10.30ರವರೆಗೆ ಪ್ರಸಾರವಾಗುತ್ತಿದ್ದವು. ಈಗ ಅದೇ ಧಾರವಾಹಿಗಳು, ಮುಂದಿನ ವಾರದಿಂದ (ಜೂನ್ 22 ರಿಂದ) ಶನಿವಾರವೂ ಪ್ರಸಾರವಾಗಲಿವೆ. ಮುಂದಿನ ವಾರದಿಂದಲೇ ಈ ಆರು ದಿನಗಳ ಧಾರವಾಹಿ ಪ್ರಸಾರ ಆರಂಭವಾಗಲಿದೆ.

ಜೂನ್ 21ರಂದು ‘ನಾನು ಮತ್ತು ಗುಂಡ‘

ಝೀ ವಾಹಿನಿಯಲ್ಲಿ ಇದೇ ಭಾನುವಾರ ಸಂಜೆ 7 ಗಂಟೆಗೆ ಹಾಸ್ಯ ನಟ ಶಿವರಾಜ್ ಕೆ.ಆರ್.ಪೇಟೆ ಅಭಿನಯದ ‘ನಾನು ಮತ್ತು ಗುಂಡ‘ ಚಲನಚಿತ್ರ ಪ್ರಸಾರವಾಗಲಿದೆ.

ಇದು ಮನುಷ್ಯ ಮತ್ತು ನಾಯಿ ನಡುವಿನ ಬಾಂಧವ್ಯದ ಚಿತ್ರ. ನಾಯಕ ನಟನಾಗಿ ಶಿವರಾಜ್ ಕೆ.ಆರ್ ಪೇಟೆ ನಟಿಸಿದ್ದಾರೆ. ಇವರ ಜತೆ ‘ಸಿಂಬ‘ ಎಂಬ ನಾಯಿ ಅಭಿನಯಿಸಿದೆ. ಈ ನಾಯಿ, ತನ್ನ ನಟನೆಗೆ ತಾನೇ ಧ್ವನಿ ನೀಡಿದೆ. ಇದು ಚಲನಚಿತ್ರ ಇತಿಹಾಸದಲ್ಲಿಯೇ ಪ್ರಥಮವಾಗಿದೆ. ಸಂಯುಕ್ತಾ ಹೊರನಾಡು ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದ ಈ ಚಲನಚಿತ್ರಕ್ಕೆ ಕಾರ್ತಿಕ್ ಶರ್ಮಾ ಸಂಗೀತ ನಿರ್ದೇಶನ ಮಾಡಿದ್ದಾರೆ. ರಘು ಹಾಸನ್ ನಿರ್ಮಾಪಕರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.