ಕನ್ನಡದ ಬಿಗ್ಬಾಸ್ 12ನೇ ಆವೃತ್ತಿ 100ನೇ ದಿನಕ್ಕೆ ಕಾಲಿಟ್ಟಿದೆ. ಇದೇ ಸಂದರ್ಭದಲ್ಲಿ ಬಿಗ್ಬಾಸ್ ಮನೆಯಿಂದ ಸ್ಪಂದನಾ ಸೋಮಣ್ಣ ಎಲಿಮಿನೇಟ್ ಆಗಿದ್ದಾರೆ. ಕನ್ನಡ ಕಿರುತೆರೆಯಲ್ಲಿ ‘ಕರಿಮಣಿ’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದ ಸ್ಪಂದನಾ ಸೋಮಣ್ಣ ಸದ್ಯ ಬಿಗ್ಬಾಸ್ ಮನೆಗೆ ವಿದಾಯ ಹೇಳಿದ್ದಾರೆ.
.BBK12: ಬಿಗ್ಬಾಸ್ ಮನೆಯಲ್ಲಿ ತೊಡೆ ತಟ್ಟಿ ಗಿಲ್ಲಿಗೆ ಸವಾಲ್ ಹಾಕಿದ ಅಶ್ವಿನಿ ಗೌಡ.BBK12: ರಹಸ್ಯ ಕೋಣೆಯಲ್ಲೂ ನಿಲ್ಲದ ಧ್ರುವಂತ್, ರಕ್ಷಿತಾ ಕಿತ್ತಾಟ.
ಕಳೆದ ಸಂಚಿಕೆಯಲ್ಲಿ (ಭಾನುವಾರ) ಬಿಗ್ಬಾಸ್ ಮನೆಯಿಂದ ಹೊರಹೋಗಲು ಸ್ಪಂದನಾ ಸೋಮಣ್ಣ ಅವರ ಹೆಸರನ್ನು ಕಿಚ್ಚ ಸುದೀಪ್ ಹೇಳುತ್ತಿದ್ದಂತೆ ಧನುಷ್ ಹಾಗೂ ಕಾವ್ಯ ಬೇಸರಗೊಂಡರು. ಇದೇ ವೇಳೆ ಎಲಿಮಿನೇಟ್ ಆಗಿದ್ದಕ್ಕೆ ಸ್ಪಂದನಾ ಸೋಮಣ್ಣ ಕಣ್ಣೀರಿಡುತ್ತಾ ಬಿಗ್ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ನಂತರ ವೇದಿಕೆಗೆ ಬಂದ ಸ್ಪಂದನಾ, ‘ಬಿಗ್ ಬಾಸ್ ಮನೆಯಲ್ಲಿ ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬೇಕು. ಆದರೆ ನಾನು ಹೆಚ್ಚಾಗಿ ಮಾತನಾಡಲಿಲ್ಲ. ಹೀಗಾಗಿ ಪಶ್ಚಾತ್ತಾಪ ಪಡುತ್ತೇನೆ’ ಎಂದು ಸ್ಪಂದನಾ ಸೋಮಣ್ಣ ಹೇಳಿದ್ದಾರೆ.

ಜೊತೆಗೆ ಸಾಮಾಜಿಕ ಮಾಧ್ಯಮದಲ್ಲಿ ಕೂಡ ಬೆಂಬಲ ನೀಡಿದವರಿಗೆ ಸ್ಪಂದನಾ ಧನ್ಯವಾದ ತಿಳಿಸಿದ್ದಾರೆ. ‘99 ದಿನಗಳ ಕಾಲ ನಿಮ್ಮ ಮನೆಮಗಳಾಗಿ ಪ್ರೀತಿ ನೀಡಿದ್ದೀರಿ. ನಿಮ್ಮೆಲ್ಲರಿಗೂ ಎಂದೆಂದಿಗೂ ಚಿರಋಣಿ, ನಿಮಗೆಲ್ಲ ಹೃತ್ಪೂರ್ವಕ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ. ಸದ್ಯ ಬಿಗ್ಬಾಸ್ ಮನೆಯಲ್ಲಿ ಧನುಷ್ ಗೌಡ, ಗಿಲ್ಲಿ ನಟ, ಕಾವ್ಯ ಶೈವ, ರಘು, ರಕ್ಷಿತಾ ಶೆಟ್ಟಿ, ಧ್ರುವಂತ್, ಅಶ್ವಿನಿ ಗೌಡ ಹಾಗೂ ರಾಶಿಕಾ ಶೆಟ್ಟಿ ಉಳಿದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.