ಗುರುವಾರ , ಜುಲೈ 29, 2021
20 °C

ಸ್ಪೆಷಲ್‌ ಆಪ್ಸ್: ಎರಡನೆಯ ಸೀಸನ್‌ ಸುಳಿವು ನೀಡಿದ ನೀರಜ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಿರ್ದೇಶಕ ನೀರಜ್ ಪಾಂಡೆ ಅವರು ಆ್ಯಕ್ಷನ್–ಕಟ್‌ ಹೇಳಿದ ಮೊದಲ ವೆಬ್ ಸರಣಿ ‘ಸ್ಪೆಷಲ್ ಆಪ್ಸ್’. ಈ ಸರಣಿಗೆ ದೊರೆತಿರುವ ಸ್ಪಂದನ ಕಂಡು ಅವರು ಸಖತ್‌ ಖುಷಿ ಆಗಿದ್ದಾರೆ. ‘ಇದರ ಮುಂದಿನ ಸರಣಿ ಮಾಡಬೇಕು ಎಂದಾದರೆ ನಮ್ಮ ಮೇಲಿರುವ ಹೊಣೆಗಾರಿಕೆಯ ಅರಿವು ನಮಗಿದೆ’ ಎಂದು ಅವರು ಹೇಳಿದ್ದಾರೆ.

‘ಸ್ಪೆಷಲ್‌ ಆಪ್ಸ್‌’ ಸರಣಿಯು ಹಾಟ್‌ಸ್ಟಾರ್‌ ಮೂಲಕ ಪ್ರಸಾರ ಆಗಿದೆ. ಕೆ.ಕೆ. ಮೆನನ್ ಅವರು ಇದರಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. ದೇಶದ ಸಂಸತ್ತಿನ ಮೇಲೆ ನಡೆದ ಭಯೋತ್ಪಾದಕರ ದಾಳಿಯ ಹಿಂದಿನ ಸೂತ್ರಧಾರನನ್ನು ಪತ್ತೆಮಾಡುವ ಕಥೆ ಇದರಲ್ಲಿ ಇದೆ. ಐಎಂಡಿಬಿಯಲ್ಲಿ ಇದಕ್ಕೆ 8.6 ಅಂಕಗಳು ಸಿಕ್ಕಿವೆ.

ಈ ಸರಣಿಯ ಗೆಲುವನ್ನು ಸಂಭ್ರಮಿಸಲು ಇನ್‌ಸ್ಟಾಗ್ರಾಂ ಮೂಲಕ ನೀರಜ್ ಅವರು ಈಚೆಗೆ ಲೈವ್ ಚಾಟ್‌ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಕೆ.ಕೆ. ಮೆನನ್ ಅವರೂ ಪಾಲ್ಗೊಂಡಿದ್ದರು. ಇದರಲ್ಲಿ ನೀರಜ್ ಪಾಂಡೆ ಅವರು ಸರಣಿಯ ಎರಡನೆಯ ಸೀಸನ್ ಬಗ್ಗೆ ಸೂಚನೆ ನೀಡಿದ್ದಾರೆ.

‘ಈಗಿರುವ ಕಾರ್ಯಕ್ರಮಗಳಲ್ಲಿ ಅತಿದೊಡ್ಡದು ಸ್ಪೆಷಲ್ ಆಪ್ಸ್. ಆದರೆ ಇದಕ್ಕಿಂತ ದೊಡ್ಡದಾದ ಇನ್ನೊಂದು ಕಾರ್ಯಕ್ರಮ ಮೂಡಿಬರಲಿದೆ. ಈ ಸರಣಿಯ ಸ್ವರೂಪವೇ ಹಾಗಿದೆ. ಈಗ ನಾವು ಸಿದ್ಧಪಡಿಸಿರುವ ಸರಣಿಯನ್ನು ಜನ ಇಷ್ಟಪಟ್ಟಿದ್ದಾರೆ ಎಂಬುದು ಎಲ್ಲಕ್ಕಿಂತಲೂ ಮುಖ್ಯವಾದುದು’ ಎಂದು ನೀರಜ್ ಹೇಳಿದ್ದಾರೆ.

‘ಸ್ಪೆಷಲ್ ಆಪ್ಸ್‌’ ಸರಣಿಯಲ್ಲಿನ ಕೆಲವು ಘಟನೆಗಳು ನೈಜವಾಗಿ ನಡೆದಿರುವಂಥವು. ಆದರೆ, ಆ ಘಟನೆಗಳ ಸುತ್ತ ಹೆಣೆದಿರುವ ಕಥೆ ಮಾತ್ರ ಕಾಲ್ಪನಿಕ. ಈ ಸರಣಿಯನ್ನು ಭಾರತ, ಟರ್ಕಿ, ಜೋರ್ಡಾನ್‌ ಸೇರಿದಂತೆ ಹಲವು ಕಡೆಗಳಲ್ಲಿ ಚಿತ್ರೀಕರಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು