ಆ ಗಾಜಲೋಟ ಏನದರ ಮಾಟ

7

ಆ ಗಾಜಲೋಟ ಏನದರ ಮಾಟ

Published:
Updated:
Prajavani

‘ಕಾಫಿ’..ವಿಶ್ವದ ಜನಪ್ರಿಯ ಪೇಯ. ಜನರ ಸಾಮೀಪ್ಯಗಳಿಸಿ ಬಾಂಧವ್ಯಗಳನ್ನು ಬೆಸೆಯುವಲ್ಲಿ, ಪ್ರೇಮವನ್ನು ಗಟ್ಟಿಗೊಳಿಸುವಲ್ಲಿ ‘ಕಾಫಿ’ ಕೈವಾಡವಿದೆ. ಪದ್ಮನಾಭನಗರದ ಒಂದಷ್ಟು ಗೆಳೆಯರು ಸೇರಿ ಈ ಕುರಿತ ದೃಶ್ಯಕಾವ್ಯವನ್ನು ಸಿದ್ಧಗೊಳಿಸಿದ್ದಾರೆ. ಬಹುರಾಷ್ಟ್ರೀಯ ಬ್ಯಾಂಕ್‌ ಉದ್ಯೋಗಿ ಅ.ರಾ.ತೇಜಸ್ ‘ಕಾಫಿ’ ಕುರಿತು ಬರೆದಿರುವ ಕವನಕ್ಕೆ ಗೆಳೆಯರು ಸೇರಿ ದೃಶ್ಯ ರೂಪ ನೀಡಿದ್ದಾರೆ.

ಮುಂಬೆಳಕು ಹೊತ್ತಿಹುದು, ಮಂದಿ ಮುಸುಕನು ಮಥಿಸಿ, ಹೊಂಗಿರಣ ಹೂ ಚೆಲ್ಲಿ, ಏರುತಿದೆ ಹಬೆಯು; ಆ ಗಾಜಲೋಟ, ಏನದರ ಮಾಟ, ಅದರೊಳಗೆ ಕುದಿಯುತಿದೆ ಕಾಫಿ, ಮುಂಜಾವ ಸಂತೈಸೊ ಕಾಫಿ ಎಂದು ಆರಂಭವಾಗುವ ಕಾಫಿಗೀತೆ ಒತ್ತಡ ನಿವಾರಣೆಗೆ, ಪ್ರೇಮ ನಿವೇದನೆಗೆ, ಒಗ್ಗಟ್ಟಿನ ಬಲಕ್ಕೆ ಪೂರಕವಾಗಿ ಜನ ಮನದ ಅಸ್ವಾದನೆಗೆ ಸಂಗಾತಿಯಾಗುವುದು ಎಂಬುದು ಕವಿಯ ಕಲ್ಪನೆ.

ಪೂರಕವಾಗುವಂತಹ ದೃಶ್ಯಗಳನ್ನು ಸೆರೆ ಹಿಡಿದು ‘ಭಾವ ಮಂದಾರ ಕ್ರಿಯೇಷನ್ಸ್’ ಸಂಸ್ಥೆಗಾಗಿ ಚಿತ್ರಿಸಿರುವ ಈ ಕಾಫಿ ಚಿತ್ರದ ಸಾಹಿತ್ಯ, ಛಾಯಾಗ್ರಹಣ ಹಾಗೂ ನಿರ್ದೇಶನ ಅ.ರಾ.ತೇಜಸ್.

ಪೂಜಾ ಐತಾಳ್ ತೇಜಸ್ ನಿರ್ದೇಶನ ಸಹಕಾರ ನೀಡಿದ್ದಾರೆ. ಶ್ರೀಕರ ಎಲಮೇಲಿ ನಿರ್ಮಾಣ ಮಾಡಿರುವ ದೃಶ್ಯಕಾವ್ಯದ ರಾಗ ಮತ್ತು ನಿರ್ವಹಣೆ ಎ.ಪಿ.ಶ್ರೇಯಸ್. ವಿವೇಕ್ ಗೋವಿಂದರಾಜು ಸಂಗೀತ ನೀಡಿದ್ದು, ಸಾಯಿ ಅರುಣ್ ಸಂಕಲನ ಮಾಡಿದ್ದಾರೆ.

ತೇಜಸ್ ಅವರ ನಿವಾಸದಲ್ಲಿ ಗೆಳೆಯರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಈ ದೃಶ್ಯಕಾವ್ಯವನ್ನು ಪದಬಂಧ ರಚನೆಕಾರ ಅ.ನಾ.ಪ್ರಹ್ಲಾದರಾವ್ ಬಿಡುಗಡೆ ಮಾಡಿ ಶುಭ ಕೋರಿದರು. ಈಗಾಗಲೆ ಈ ದೃಶ್ಯಕಾವ್ಯ ಯೂಟ್ಯೂಬ್‌ನಲ್ಲಿದ್ದು, ನೋಡುಗರಿಂದ ಆಕರ್ಷಿತವಾಗುತ್ತಿದೆ.

ಲಿಂಕ್: https://www.youtube.com/watch?v=YzjHwAKrhKU⇒v

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !