ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟಿ ಪವಿತ್ರಾ ಸಾವಿನ ಬೆನ್ನಲ್ಲೇ ತೆಲುಗು ನಟ ಚಂದ್ರಕಾಂತ್ ಅನುಮಾನಾಸ್ಪದ ಸಾವು

Published 18 ಮೇ 2024, 13:22 IST
Last Updated 18 ಮೇ 2024, 13:22 IST
ಅಕ್ಷರ ಗಾತ್ರ

ಹೈದರಾಬಾದ್: ‘ರಸ್ತೆ ಅಪಘಾತದಲ್ಲಿ ಮೃತಪಟ್ಟ ಕಿರುತೆರೆ ನಟಿ ಪವಿತ್ರಾ ಜಯರಾಂ ಸಾವಿನ ಬೆನ್ನಲ್ಲೇ ಅವರೊಂದಿಗೆ ನಟಿಸಿದ್ದ ತೆಲುಗು ನಟ ಚಂದ್ರಕಾಂತ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಶುಕ್ರವಾರ ಪತ್ತೆಯಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಪವಿತ್ರಾ ಅವರ ನಿಧನ ನಂತರ 39 ವರ್ಷದ ಚಂದ್ರಕಾಂತ್ ಖಿನ್ನತೆಗೆ ಒಳಗಾಗಿದ್ದರು. ಶುಕ್ರವಾರ ಅವರಿಗೆ ಸೇರಿದ ಫ್ಲಾಟ್‌ನಲ್ಲಿ ಚಂದ್ರಕಾಂತ್ ಅವರ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದೇ ಫ್ಲಾಟ್‌ನಲ್ಲಿ ಚಂದ್ರಕಾಂತ್ ಅವರು ಪವಿತ್ರಾ ಅವರೊಂದಿಗೆ ಒಟ್ಟಿಗೆ ಇರುತ್ತಿದ್ದರು ಎಂದೆನ್ನಲಾಗಿದೆ’ ಎಂದಿದ್ದಾರೆ.

‘ಪವಿತ್ರಾ ಜಯರಾಮ್ ಜೊತೆ ಮಗ ಇರಲು ಬಯಸಿದ್ದ. ಅಪಘಾತದಲ್ಲಿ ಪವಿತ್ರಾ ನಿಧನ ನಂತರ ಮಗ ತೀರಾ ಖಿನ್ನತೆಗೆ ಜಾರಿದ್ದ. ಸಿಕಂದರಾಬಾದ್‌ನಲ್ಲಿರುವ ಮನೆಯಿಂದ ಹೊರಟು ಫ್ಲಾಟ್‌ನಲ್ಲಿದ್ದ. ಆತನ ಸ್ನೇಹಿತರು ಎಷ್ಟೇ ಕರೆ ಮಾಡಿದರೂ, ಕರೆ ಸ್ವೀಕರಿಸಲಿಲ್ಲ. ನಂತರ ಅವರು ಫ್ಲಾಟ್‌ಗೆ ಹೋದಾಗ ಆತ ಆತ್ಮಹತ್ಯೆ ಮಾಡಿಕೊಂಡಿದ್ದು ಕಂಡುಬಂತು’ ಎಂದು ಚಂದ್ರಕಾಂತ್ ತಂದೆ ವೆಂಕಟೇಶ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಘಟನಾ ಸ್ಥಳದಲ್ಲಿ ಡೆತ್ ನೋಟ್‌ ಸಿಕ್ಕಿಲ್ಲ ಎಂದಿರುವ ನರಸಿಂಗಿ ಪೊಲೀಸರು ಇದೊಂದು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT