ಗುರುವಾರ , ಏಪ್ರಿಲ್ 9, 2020
19 °C

ನಗಿಸೊ ಚಾಲೆಂಜ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ನೋಡ್ತಾ ಇರಿ ನಗ್ತಾ ಇರಿ’ ಟ್ಯಾಗ್‌ಲೈನ್‌ನೊಂದಿಗೆ ವಿಭಿನ್ನ ಹಾಗೂ ವಿನೂತನ ಮನರಂಜನಾ ಕಾರ್ಯಕ್ರಮ ನೀಡಿ ಪ್ರೇಕ್ಷಕರನ್ನು ನಗಿಸುತ್ತಾ ಬಂದಿರುವ ಉದಯ ಕಾಮಿಡಿ ವಾಹಿನಿ ಈಗ ಮತ್ತೊಂದು ಹಾಸ್ಯಮಯ ಕಾರ್ಯಕ್ರಮ ‘ನಗಿಸೋ ಚಾಲೆಂಜ್’ ಪ್ರಾರಂಭಿಸಿದೆ.

ಜಯ ಮಲ್ಲಿಕಾರ್ಜುನ್‍ ಅವರ ಸ್ಕ್ರಿಪ್ಟ್ ಹಾಗೂ ತನಿಷಾ ಅವರ ನಿರೂಪಣೆ ಇರುವ ಈ ಕಾರ್ಯಕ್ರಮ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ಉದಯ ಕಾಮಿಡಿಯಲ್ಲಿ ಪ್ರಸಾರವಾಗಲಿದೆ.

ನಗಿಸೋ ಚಾಲೆಂಜ್‍ಗಾಗಿ ರಾಜ್ಯದ ಮೂಲೆ ಮೂಲೆಗಳಿಂದ ಹೊಸ ಹೊಸ ಹಾಸ್ಯ ಕಲಾವಿದರ ಆಡಿಷನ್‌ ನಡೆಸಿ, ಅದರಲ್ಲಿ ಆಯ್ಕೆಯಾದವರಿಗೆ ಚಾಲೆಂಜ್ ತೆಗೆದುಕೊಳ್ಳಲು ಅವಕಾಶ ನೀಡಿದೆ. ಇದರಲ್ಲಿ ಪ್ರತಿ ಕಲಾವಿದರು 4 ನಿಮಿಷಗಳ ಚಾಲೆಂಜ್ ಸ್ವೀಕರಿಸಿ, ಎಲ್ಲರನ್ನು ನಗಿಸಬೇಕಾಗುತ್ತದೆ.

ಕಲಾವಿದರ ಗುಂಪಿನಲ್ಲಿ ಸ್ಟ್ಯಾಂಡಪ್ ಕಾಮಿಡಿ, ಮಿಮಿಕ್ರಿ, ಸ್ಕಿಟ್, ಬೀಟ್‍ಬಾಕ್ಸ್, ಮ್ಯಾಜಿಕ್ ಹೀಗೆ ವಿಭಿನ್ನ ಬಗೆಯ ಚಾಲೆಂಜ್‌ಗಳಿರುತ್ತವೆ. ಕಲಾವಿದರ ನೈಪುಣ್ಯ ನಿರ್ಧರಿಸಲು ಮೂವರು ತೀರ್ಪುಗಾರರು ಇರುತ್ತಾರೆ. ‘ಸ್ಪರ್ಶ’ ಚಿತ್ರದ ಖ್ಯಾತಿಯ ನಟಿ ರೇಖಾ, ಬಿಗ್‌ಬಾಸ್‌ ಖ್ಯಾತಿಯ ಕಿರಿಕ್ ಕೀರ್ತಿ ಹಾಗೂ ಹಾಸ್ಯನಟ ಪವನ್ ತಮ್ಮ ಮಾತು, ಹರಟೆ ಹಾಗೂ ವಿಶ್ಲೇಷಣೆಗಳಿಂದ ಕಾರ್ಯಕ್ರಮಕ್ಕೆ ಮೆರಗು ನೀಡಲಿದ್ದಾರೆ.

ನಗಿಸೋ ಚಾಲೆಂಜ್ ಹೊಸ ಕಲಾವಿದರಿಗೆ ಒಂದು ಅದ್ಭುತ ವೇದಿಕೆಯಾಗಲಿದೆ. ಈ ಕಾರ್ಯಕ್ರಮದ ಮೂಲಕ ಹೊಸ ಪ್ರತಿಭೆಗಳನ್ನು ಪರಿಚಯಿಸಿ, ಅವರ ಪ್ರತಿಭೆಗೆ ತಕ್ಕ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ ಎನ್ನುತ್ತಾರೆ ನಗಿಸೊ ಚಾಲೆಂಜ್‌ ಶೋ ನಿರ್ದೇಶಕರು ಹಾಗೂ ಉದಯ ಕಾಮಿಡಿ ವಾಹಿನಿಯ ಮುಖ್ಯಸ್ಥ ಭುವನ್ ಶಾಸ್ತ್ರಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು